ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್ ಗಂಭೀರ ಆರೋಪದ ಬೆನ್ನಲ್ಲಿಯೇ ಚಂದ್ರು ಸ್ನೇಹಿತ ಸೈಮನ್ ರಾಜ್ ಕಣ್ಮರೆಯಾಗಿದ್ದಾನೆ. ಇದನ್ನೂ ಓದಿ: ಚಂದ್ರು ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್- ಘಟನೆಯ ಇಂಚಿಂಚು ಮಾಹಿತಿ ನೀಡಿದ ಸ್ನೇಹಿತ ಸೈಮನ್ ರಾಜ್ಬೆಂಗಳೂರಿನ ಜೆಜೆ ನಗರ ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರು ಸ್ನೇಹಿತ ಸೈಮನ್ ರಾಜ್ ಹೇಳಿಕೆ ಇದೀಗ ಭಾರೀ ವಿವಾದಕ್ಕೀಡಾಗಿದೆ. ನನ್ನ ಹುಟ್ಟಹಬ್ಬ ಇತ್ತು. ನಾನು ಮತ್ತು ಚಂದ್ರು ಚಿಕನ್ ರೋಲ್ ತಿನ್ನಲು ಹಳೆಗುಡ್ಡದಹಳ್ಳಿಗೆ ಹೋಗಿದ್ದೆವು. ಆದರೆ ಚಿಕನ್ ರೋಲ್ ಅಂಗಡಿ ಕ್ಲೋಸ್ ಆಗಿತ್ತು. ಬಳಿಕ ಅಲ್ಲಿದ್ದ ಬೇಕರಿಗೆ ಹೋಗುವ ವೇಳೆ ಬೈಕ್ ಟಚ್ ಆದ ವಿಚಾರವಾಗಿ ಸ್ಥಳೀಯ ಯುವಕರ ನಡುವೆ ಮಾತಿನ ಚಕಮಕಿ ನಡೆಯಿತು. ಆ ಬಳಿಕ ಮೂರು ಜನ ಬಂದು ಚಾಕು ತೆಗೆದಾಗ ನಾನು ಅವರನ್ನು ತಳ್ಳಿ ಓಡಿ ಹೋಗಿದ್ದೆ. ಚಂದ್ರುವನ್ನು ಓಡಲು ಹೇಳಿದ್ದೆ ಬಳಿಕ ಚಂದ್ರುಗೆ ಫೋನ್ ಮಾಡಿದಾಗ ಫೋನ್ ತೆಗೆದಿರಲಿಲ್ಲ. ನಂತರ ಘಟನಾ ಸ್ಥಳಕ್ಕೆ ವಾಪಸ್ ಬಂದಾಗ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ ನಂತರ ಆಟೋದಲ್ಲಿ ಹಾಕಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದೆ ಅಷ್ಟೋತ್ತಿಗೆ ಆತ ಮೃತಪಟ್ಟಿದ್ದ ಎಂದು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಘಟನೆಯ ಬಗ್ಗೆ ವಿವರಿಸಿದ್ದರು. ಇದನ್ನೂ ಓದಿ: ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ, ಚಂದ್ರು ಕೊಲೆಗೆ ಉರ್ದು ಕಾರಣ: ರವಿಕುಮಾರ್ಇತ್ತ ಚಂದ್ರ್ರು ಸ್ನೇಹಿತ ಸೈಮನ್‍ಗೆ ಆರ್‍ಎಸ್‍ಎಸ್‍ನಿಂದ 5 ಲಕ್ಷ ಹಣ ನೀಡಲಾಗಿದೆ ಎಂದು ಬಿಜೆಪಿ ವಿರುದ್ಧ ಜಮೀರ್ ಗಂಭೀರ ಆರೋಪ ಮಾಡಿದ್ದರು. ಜಮೀರ್ ಹೇಳಿಕೆ ಬೆನ್ನಲ್ಲೇ ಸೈಮನ್ ರಾಜ್ ಕಣ್ಮರೆಯಾಗಿದ್ದಾನೆ ಎಂಬ ಮಾಹಿತಿ ದೊರಕಿದೆ. ಸೈಮನ್‍ಗೆ ರಾಜಕೀಯ ಮುಖಂಡರ ಆಶ್ರಯ ಬಗ್ಗೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ಸಿಕ್ಕಿದೆ. ನಿಜಕ್ಕೂ ಸೈಮನ್ ಹಣ ಪಡೆದೇ ಹೇಳಿಕೆ ಕೊಟ್ಟಿದ್ದಾ ಎಂಬ ಅನುಮಾನ ಇದೀಗ ಮೂಡಿದೆ. ಇದನ್ನೂ ಓದಿ: ನಾನು ಯಾವುದೇ ಸುಳ್ಳು ಹೇಳಿಲ್ಲ: ಕಮಲ್ ಪಂಥ್ ಸ್ಪಷ್ಟನೆಜಮೀರ್ ಹೇಳಿದ್ದೇನು..?
ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಕಾರ್ಯವೈಖರಿ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಅಷ್ಟಕ್ಕೂ ಅವರನ್ನು ನೇಮಿಸಿರುವುದು ನಿಮ್ಮ ಬಿಜೆಪಿ ಸರ್ಕಾರವೇ. ಇದೀಗ ನೀವೇ ಅವರ ಮೇಲೆ ಬೆರಳು ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ. ನೀವು ಸೈಮನ್‍ಗೆ ದುಡ್ಡು ಕೊಟ್ಟು ಸುಳ್ಳು ಹೇಳಿಸಿರುವುದು ನಮಗೇನೂ ಗೊತ್ತಿಲ್ಲ ಎಂದು ಕೊಂಡಿದ್ದೀರಾ ಮಾನ್ಯ ರವಿಕುಮಾರ್ ಅವರೇ? ನೀವು ಬಾಯಿಗೆ ಬಂದಂತೆ ಬಣ್ಣ ಹಚ್ಚಿ ಕಥೆ ಹೇಳಿದರೆ ಸತ್ಯ ಎಂದಿಗೂ ಸುಳ್ಳಾಗದು ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಬಿಜೆಪಿಯವರು ಸೈಮನ್‌ಗೆ ದುಡ್ಡು ಕೊಟ್ಟು ಸುಳ್ಳು ಹೇಳಿಸುತ್ತಿದ್ದಾರೆ: ಜಮೀರ್ ಅಹ್ಮದ್Sign in to your account
Username or Email Address


Password

 Remember Me


