ಬೆಂಗಳೂರು: 16 ವರ್ಷದ ಹುಡುಗಿಯ ಮೇಲೆ 8 ಜನ ಕಾಮುಕರು ನಿರಂತರ ಅತ್ಯಾಚಾರ ಎಸಗುತ್ತಿದ್ದ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.ಮೊದಲು ವೀಡಿಯೋ ರೆಕಾರ್ಡ್ ಮಾಡಿಕೊಂಡು ಲೈಂಗಿಕ ದೌರ್ಜನ್ಯ ನಡೆಸಿದ್ದ ಪ್ರಮುಖ ಆರೋಪಿ ವಿಚಾರ ಹೊರಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ನಂತರ ವೀಡಿಯೋ ತೋರಿಸಿ ತನ್ನ ಸ್ನೇಹಿತರ ಜೊತೆಗೂ ಸಹಕರಿಸುವಂತೆ ಒತ್ತಾಯಿಸಿದ್ದಾನೆ. ಹುಡುಗಿಯನ್ನು ಮತ್ತಷ್ಟು ಹೆದರಿಸಿ 8 ಮಂದಿಯೂ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ನಂತರ ವೀಡಿಯೋ ಮಾಡಿ ನಿರಂತರ ಕೃತ್ಯ ಎಸಗಲು ಮುಂದಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಆಕ್ಸಿಜನ್ ಇಲ್ಲದಿದ್ರೂ ಚಿಕಿತ್ಸೆಗೆ ಕರೆದೊಯ್ದ ಚಾಲಕ: ಉಸಿರಾಟದ ಕೊರತೆಯಿಂದ ನವಜಾತ ಶಿಶು ಸಾವು
ಮನೆಗೆ ಬಂದ ಮಗಳು ಅಳುತ್ತಿದ್ದುದ್ದನ್ನು ಕಂಡು ಪೋಷಕರು ಕೇಳಿದ್ದಾರೆ. ಮೊದಲೇ ಹೆದರಿಕೊಂಡಿದ್ದ ಹುಡುಗಿ, ಕಬಾಬ್ ಖಾರ ಇತ್ತು ಅದಕ್ಕೆ ಕಣ್ಣೀರು ಬರುತ್ತಿದೆ ಎಂದು ಸಂಬಾಳಿಸಲು ಮುಂದಾಗಿದ್ದಾಳೆ. ನಂತರ ಆಕೆಯಿಂದ ವಿಚಾರ ತಿಳಿದು ಗಾಬರಿಗೊಂಡ ಮನೆಯವರು 8 ಜನರ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಕ್ಸೋ, ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ 7 ಆರೋಪಿಗಳನ್ನು ಬಂಧಿಸಿದ್ದಾರೆ. ಓರ್ವ ಪರಾರಿಯಾಗಿದ್ದು, ಶೋಧಕಾರ್ಯ ಮುಂದುವರಿಸಿದ್ದಾರೆ.Sign in to your account
Username or Email Address


Password

 Remember Me


