ಧಾರವಾಡ: ದೇವಸ್ಥಾನದ ಬಳಿ ಹಿಂದೂಯೇತರ ಅಂಗಡಿಗಳನ್ನು ಬಂದ್ ಮಾಡಿಸಬೇಕೆಂಬ ಚರ್ಚೆ ಕಳೆದ ಒಂದು ತಿಂಗಳಿನಿಂದ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನವೊಂದರ ಬಳಿ ಹಿಂದೂಯೇತರರು ಮಾರಾಟಮಾಡುತ್ತಿದ್ದ ಕಲ್ಲಂಗಡಿ ಹಾಗೂ ತೆಂಗಿನಕಾಯಿಯನ್ನು ಶ್ರೀರಾಮಸೇನೆ ಕಾರ್ಯಕರ್ತರು ಒಡೆದು ಹಾಕಿರುವ ಘಟನೆ ಧಾರವಾಡದಲ್ಲಿ ನಡೆದಿದೆ.ಧಾರವಾಡ ಹೊರವಲಯದ ನುಗ್ಗಿಕೇರೆ ಆಂಜನೇಯನ ದೇವಸ್ಥಾನಕ್ಕೆ ಶನಿವಾರ ಸಾವಿರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ. ದೇವಸ್ಥಾನದ ಬಳಿ 4 ಹಿಂದೂಯೇತರ ಅಂಗಡಿಗಳಿದ್ದು, ಕಳೆದ 15 ದಿನಗಳ ಹಿಂದೆ ಶ್ರೀರಾಮ ಸೇನೆಯ ಕಾರ್ಯಕರ್ತರು ದೇವಸ್ಥಾನದ ಬಳಿ ಬಂದು ಪ್ರತಿಭಟನೆ ಮಾಡಿದ್ದರು. ಈ ವೇಳೆ ಹಿಂದೂಯೇತರ ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಮನವಿ ಮಾಡಿದ್ದರು. ಶನಿವಾರ ಹಿಂದೂಯೇತರ ಅಂಗಡಿಗಳು ಮುಚ್ಚದೇ ಇದ್ದಿದ್ದರಿಂದ ಶ್ರೀರಾಮ ಸೇನೆ ಕಾರ್ಯಕರ್ತರು ಸ್ಥಳಕ್ಕೆ ಬಂದು ಅಂಗಡಿಗಳಲ್ಲಿದ್ದ ಕಲ್ಲಂಗಡಿ ಹಣ್ಣು ಹಾಗೂ ತೆಂಗಿನಕಾಯಿಗಳನ್ನು ಒಡೆದು ಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮುಕ್ತ ಭಾರತ ಮಾಡೋಕೆ ಯಾರಪ್ಪನ ಕೈಯಲ್ಲೂ ಆಗಲ್ಲ: ನಲಪಾಡ್ಘಟನೆಯಿಂದ ನಷ್ಟ ಅನುಭವಿಸಿದ ಹಿಂದೂಯೇತರ ವ್ಯಾಪಾರಿ ನಬಿಸಾಬ್, ನೋಡ ನೋಡುತ್ತಿದ್ದಂತೆಯೇ ಎಲ್ಲಾ ಒಡೆಯುತ್ತ ಬಂದರು. ಅವರು 8-10 ಜನ ಇದ್ದರು. ನಾನೊಬ್ಬನೇ ಇದ್ದಿದ್ದರಿಂದ ಏನೂ ಮಾಡಲಾಗಲಿಲ್ಲ. 6 ಕ್ವಿಂಟಾಲ್ ಕಲ್ಲಂಗಡಿ ಹಣ್ಣು ತೆಗೆದುಕೊಂಡು ಬಂದಿದ್ದೆ. ಅದರಲ್ಲಿ 1 ಕ್ವಿಂಟಾಲ್ ಮಾತ್ರ ಮಾರಾಟವಾಗಿತ್ತು ಎಂದು ಮರುಗಿದರು.ನಾನು ಕಳೆದ 15 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇನೆ. ಕಳೆದ ವಾರ ಇಲ್ಲಿ ಮುಸ್ಲಿಮರಿಗೆ ಅಂಗಡಿ ಹಾಕಬೇಡಿ ಎಂದಿದ್ದರು. ಮುಂದಿನ ವಾರವೇ ದೇವಸ್ಥಾನದ ಜಾತ್ರೆ ಇತ್ತು. ಜಾತ್ರೆಯ ಬಳಿಕ ಹಿಂದೂಯೇತರ ಅಂಗಡಿಗಳನ್ನು ಇಲ್ಲಿ ಇಡಬೇಕಾ, ಬೆಡವಾ ಎಂದು ನಿರ್ಧಾರ ಆಗಬೇಕಿತ್ತು. ಅಷ್ಟರಲ್ಲಿ ಈ ಗಲಾಟೆ ನಡೆಸಲಾಗಿದೆ. ಮತ್ತೊಂದು ಕಡೆ ದೇವಸ್ಥಾನದ ಆಡಳಿತ ಮಂಡಳಿ ಎಲ್ಲ ಪರ್ಯಾಯಸ್ಥರ ಸಭೆ ಮಾಡಿ, ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ಎಂದು ತಿಳಿಸಿದರು.ಘಟನೆ ಬಗ್ಗೆ ಪ್ರತಿಕ್ರಿಯಿಸಿದ ದೇವಸ್ಥಾನದ ಪರ್ಯಾಯಸ್ಥರು, ಶನಿವಾರ ಯಾವಾಗಲೂ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಹೀಗಾಗಿ ಆ ಕಡೆ ಗಲಾಟೆ ನಡೆದಿರುವ ಬಗ್ಗೆ ಲಕ್ಷ್ಯ ಕೊಡಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಸಭೆ ಮಾಡಿ ಏನಾಗಿದೆ ಎಂದು ಮಾಹಿತಿ ಕೊಡುತ್ತೇನೆ ಎಂದರು. ಇದನ್ನೂ ಓದಿ: ಲವ್ ಜಿಹಾದ್‍ಗೆ ಮುಂದಾದವರ ಮನೆ ಹೊಕ್ಕು ಹೊಡೆಯಬೇಕು: EX MLC ನಾರಾಯಣಸಾ ಭಾಂಡಗೆಕಳೆದ ತಿಂಗಳು ಈ ವಿಚಾರವಾಗಿ ಮನವಿ ಬಂದಿತ್ತು. ನಾನು ಬಂದು ಇನ್ನೂ ಒಂದು ತಿಂಗಳಾಗಲಿಲ್ಲ. ಮನವಿ ಹಾಗೂ ಗಲಾಟೆ ಬಗ್ಗೆ ಸಭೆ ಕರೆದು ನೋಡುತ್ತೇವೆ. ಅಂಗಡಿಗಳಿಗೆ ಅನುಮತಿ ಕೊಡುವುದು ನಾವೆ. ನಾವು ಅವರಿಂದ ಬಾಡಿಗೆ ತೆಗೆದುಕೊಳ್ಳುವುದಿಲ್ಲ. ಬಡವರು ಎಂದು ಅಂಗಡಿ ನಡೆಸಲು ಕೊಟ್ಟಿದ್ದೇವೆ. ಇಲ್ಲಿರುವ ಶೇ.99 ರಷ್ಟು ವ್ಯಾಪಾರಿಗಳು ಹಿಂದೂಗಳು. ಎಲ್ಲರಿಗೂ ಹೊಟ್ಟೆ ಪಾಡಿದೆ. ನಾವು ಎಲ್ಲರಿಗೂ ಸಹಾಯ ಮಾಡುತ್ತೇವೆ ಎಂದರು.Sign in to your account
Username or Email Address


Password

 Remember Me


