ಕನ್ನಡ ಟಿವಿ ಲೋಕದಲ್ಲಿ ನಾನಾ ಕಾರ್ಯಕ್ರಮಗಳ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಲೇ ಬಂದಿದೆ. ರಿಯಾಲಿಟಿ ಶೋ, ಸಿನಿಮಾ, ಧಾರಾವಾಹಿ ಹೀಗೆ ಹತ್ತು ಹಲವು ವಿಶೇಷತೆಗಳಿಂದ ಸಿನಿಪ್ರಿಯರನ್ನ ರಂಜಿತ್ತಾ ಬಂದಿದೆ. ಬಿಗ್‌ ಸ್ಕ್ರೀನ್‌ನಲ್ಲಿ ಆಕ್ಟೀವ್‌ ಆಗಿದ್ದ ಚಿತ್ರರಂಗದ ಸ್ಟಾರ್ ಕಲಾವಿದರೆಲ್ಲ ಕಿರುತೆರೆಯತ್ತ ಮುಖ ಮಾಡ್ತಿದ್ದಾರೆ. ಇದೀಗ ಅದೇ ಸಾಲಿಗೆ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಮೋಡಿ ಮಾಡಲು ಬರುತ್ತಿದ್ದಾರೆ.ಈಗಾಗಲೇ ರಚಿತಾರಾಮ್, ರವಿಚಂದ್ರನ್, ಮೇಘನಾ ರಾಜ್, ಅನುಪ್ರಭಾಕರ್ ಸೇರಿದಂತೆ ಹಲವರು ಕಿರುತೆರೆಯತ್ತ ಮುಖ ಮಾಡಿದ್ದಾರೆ. ಅದೇ ರೀತಿ ಬಿಗ್ ಸ್ಕ್ರೀನ್‌ ಸ್ಟಾರ್ ಶಿವರಾಜ್‌ಕುಮಾರ್ ಕೂಡ ಖಾಸಗಿ ವಾಹಿನಿಯ ಶೋಗೆ ಜಡ್ಜ್ ಆಗಿ ಕಾಣಿಸಿಕೊಳ್ತಿದ್ದಾರೆ.ಕಿರುತೆರೆಯ ಬಿಗ್ ಶೋ `ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋ ಮೂಲಕ ತೀರ್ಪುಗಾರರಾಗಿ ಕಿರುತೆರೆಗೆ ನಟ ಶಿವರಾಜ್‌ಕುಮಾರ್ ಮರಳಿದ್ದಾರೆ. 125 ಸಿನಿಮಾಗಳ ಮೂಲಕ ರಂಜಿಸಿರೋ ನಟ ಶಿವರಾಜ್‌ಕುಮಾರ್ `ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಸೀಸನ್-6ಗೆ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಶೋನ ಪ್ರೋಮೋ ರಿಲೀಸ್ ಆಗಿದ್ದು, ಶಿವಣ್ಣ ನ್ಯೂ ಲುಕ್ ನೋಡಿ ಫ್ಯಾನ್ಸ್ ಖುಷಿಪಡ್ತಿದ್ದಾರೆ. ಇದನ್ನು ಓದಿ:ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಗೌರವ ಡಾಕ್ಟರೇಟ್ಅಪ್ಪು ಅಗಲಿಕೆಯ ನೋವಿನ ನಂತರ ಸಾಲು ಸಾಲು ಸಿನಿಮಾಗಳಿಗೆ ಶಿವಣ್ಣ ಸಹಿ ಹಾಕಿದ್ದಾರೆ. ಕಿರುತೆರೆ ಹಿರಿತೆರೆ ಎರಡರಲ್ಲೂ ನಟ ಶಿವರಾಜ್‌ಕುಮಾರ್ ಬ್ಯುಸಿಯಾಗಿದ್ದಾರೆ. ಸಿನಿಮಾಗಳಿಂದ ಮೋಡಿ ಮಾಡ್ತಿದ್ದ‌ ನಟ ಶಿವಣ್ಣ ಮತ್ತೆ ಹೊಸ ಶೋ ಮೂಲಕ ಕಿರುತೆರೆಗೆ ಮರಳಿದ್ದಾರೆ.Sign in to your account
Username or Email Address


Password

 Remember Me


