ತುಮಕೂರು: ಸಮಾಜದಲ್ಲಿ ಶಾಂತಿ ಕಾಪಾಡುವ ಬದಲು ಅಶಾಂತಿ ಉಂಟು ಮಾಡುತ್ತಿರುವ _ಕಾವಿ ಹಾಕುವ ಕಳ್ಳ ಸ್ವಾಮೀಜಿಗಳ ಮುಖಕ್ಕೆ ಕ್ಯಾಕರಿಸಿ ಉಗಿಬೇಕು ಎಂದು ಹಿಂದೂ ಸ್ವಾಮೀಜಿಗಳ ಸಮೂಹದ ವಿರುದ್ದ ಗುಬ್ಬಿ ಕ್ಷೇತ್ರದ ಜೆ.ಡಿ.ಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.ತುಮಕೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಾವಿರಾರು ವರ್ಷಗಳಿಂದ ಹಿಂದೂ, ಮುಸ್ಲಿಂ ನಾವೆಲ್ಲಾ ಒಂದಾಗಿ ಬದುಕುತ್ತಿದ್ದೇವೆ. ಆದರೆ ಇಂದು ಸ್ವಾಮೀಜಿಗಳು ಧರ್ಮ ಧರ್ಮದ ನಡುವೆ ವೈಮನಸ್ಸು ಬೆಳೆಸುತ್ತಿದ್ದಾರೆ. ಆ ಧರ್ಮದ ಡ್ರೈವರ್ ಇಟ್ಕೊಂಡು ದೇವಸ್ಥಾನಕ್ಕೆ ಹೋಗಬೇಡ ಎಂದು ಒಬ್ಬ ಸ್ವಾಮೀಜಿ ಹೇಳಿದ್ರೆ, ಇನ್ನೊಬ್ಬ ಯಾವನೋ ಸ್ವಾಮೀಜಿ ಹಿಜಬ್ ಎಂದು ಹೇಳಿ ಸಾಮರಸ್ಯ ಕದಡುತ್ತಾನೆ ಎಂದು ಏಕ ವಚನದಲ್ಲಿ ಟೀಕಿಸಿದ್ದಾರೆ. ಇದನ್ನೂ ಓದಿ: ಮದ್ಯ ಸೇವನೆಗೆ ಹಣಕೊಡಲಿಲ್ಲವೆಂದು ತಂದೆಯನ್ನೆ ಕೊಂದ ಪಾಪಿಯಾವತ್ತೋ ಮುಸ್ಲಿಮರು ಮಾಡಿದ್ದ ವಿಗ್ರಹಕ್ಕೆ ಪೂಜೆ ಮಾಡಬೇಡಿ ಅಂತಾರೆ ಈ ಸ್ವಾಮಿಗಳು, ಆದರೆ ನಮ್ಮೂರಲ್ಲಿ ಶೇ.90 ದೇವಸ್ಥಾನ ಕಟ್ಟಿರೋರು ಮುಸ್ಲಿಮರೆ ಆಗಿದ್ದಾರೆ. ಯಾವನೋ ತಲೆ ಕೆಟ್ಟ ಸ್ವಾಮಿ ಹೇಳಿದ್ದಾನೆ. ವಿಗ್ರಹ ಕಿತ್ತುಹಾಕೋಕಾಗುತ್ತಾ? ಮೊದಲು ಈ ಕಾವಿ ಹಾಕಿ ಬರುವ ಸ್ವಾಮೀಜಿಗಳಿಗೆ ಕ್ಯಾಕರಿಸಿ ಮುಖಕ್ಕೆ ಉಗಿಬೇಕು ಎಂದು ಗುಡುಗಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಬೆಳ್ಳಂಬೆಳಗ್ಗೆಯೇ ಅಗ್ನಿ ದುರಂತ: 5 ಅಂಗಡಿಗಳು ಭಸ್ಮಸ್ವಾಮೀಜಿಗಳ ಕೆಲಸ ಸಮಾಜದಲ್ಲಿ ಶಾಂತಿ ಕಾಪಾಡೋದು, ಸಮಾಜಕ್ಕೆ ಒಳ್ಳೆ ಸಂದೇಶ ಕೊಡುವುದು ಅವರ ಜವಾಬ್ದಾರಿ ಆಗಿದೆ. ಆದರೆ ಇವೆಲ್ಲಾ ಬಿಟ್ಟು ಬೀದಿಗೆ ಬಂದಿದ್ದಾರೆ. ಹಿಂದೂಗಳ ಸಂಘಟನೆ ಮಾಡುತ್ತೇವೆ ಅನ್ನುವ ಇವರು ಏನ್ ಸಂಘಟನೆ ಮಾಡುತ್ತಾರೆ. ಮುಸ್ಲಿಮರನೆಲ್ಲಾ ಈ ದೇಶಬಿಟ್ಟು ಓಡಿಸಬೇಕು. ಓಡಿಸಲು ಇವರಿಂದ ಸಾಧ್ಯನಾ ಎಂದು ಪ್ರಶ್ನಿಸಿದ್ದಾರೆ. Sign in to your account
Username or Email Address


Password

 Remember Me


