ರಾಕಿಭಾಯ್ ಯಶ್ ಜೊತೆ ಪಬ್ಲಿಕ್ ಟಿವಿ ವಿಶೇಷ ಸಂದರ್ಶನವನ್ನು ಶನಿವಾರ(ಇಂದು) ಮಾಡಿದೆ. ಈ ವೇಳೆ ಯಶ್, ಇಂಡಸ್ಟ್ರಿಗೆ ಬಂದಾಗಿನಿಂದ ಹಿಡಿದು ಇಲ್ಲಿವರೆಗೂ ಅವರು ಬೆಳೆದುಬಂದ ದಾರಿ ಬಗ್ಗೆ ಮನಬಿಚ್ಚಿ ಮಾತನಾಡಿದರು. ಈ ವೇಳೆ ಹೆಚ್.ಆರ್.ರಂಗನಾಥ್ ಅವರು ಗಡ್ಡ ಯಾವಾಗ ತೆಗೆಯುತ್ತಿರಾ ಎಂದು ತಮಾಷೆಯಾಗಿ ಪ್ರಶ್ನೆ ಕೇಳಿದರು. ಈ ವೇಳೆ ಯಶ್ ಕೂಡ ಕಾಮಿಡಿಯಾಗಿ ಉತ್ತರ ಕೊಟ್ಟರು.ರಂಗನಾಥ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಶ್, ನೀವು ಯಾವಾಗ ಗಡ್ಡ ತೆಗೆಯುತ್ತೀರಾ ಆಗ ನಾನೂ ತೆಗೆಯುತ್ತೇನೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಹೆಚ್.ಆರ್ ರಂಗನಾಥ್ ಅವರು, ನಾನು 3 ತಿಂಗಳಿಗೊಮ್ಮೆ ಗಡ್ಡ ತೆಗೆಯುತ್ತೇನೆ. ನಿಮ್ಮದು ಹೇಳಿ ಎಂದರು.ಈ ವೇಳೆ ನಿರೂಪಕ ಅಕುಲ್ ಬಾಲಾಜಿ ಅವರು, ನಮ್ಮ ಇಂಡಸ್ಟ್ರಿಯಲ್ಲಿ ಮೊದಲು ಗಡ್ಡ ಬಿಟ್ಟವರು ರಂಗನಾಥ್ ಅವರೇ ಎನ್ನುತ್ತಾರೆ. ಅದಕ್ಕೆ ಉತ್ತರಿಸಿದ ರಂಗನಾಥ್ ಅವರು, ಹೌದು. ನಾನೇ ನಿಜವಾದ ಗಡ್ಡ ಮಾಸ್ಟರ್ ಎಂದು ಹೇಳುತ್ತಾರೆ. ನಂತರ ಮತ್ತೆ ಯಶ್ ಅವರಿಗೆ ಗಡ್ಡದ ಪ್ರಶ್ನೆ ಕೇಳಿದಾಗ, ನನಗೆ ಗಡ್ಡ ಇಷ್ಟ ಸರ್. ನೀವು- ನಾನು ಒಂದೇ ತರ. ಸಂದರ್ಭ ಬಂದಾಗ ತೆಗೆಯುತ್ತೇನೆ ಸರ್. ಇದು ಸಿನಿಮಾಗೆ ಸಂಬಂಧಿಸಿದ್ದು. ರಾಧಿಕಾ ಪಂಡಿತ್ ಒಮ್ಮೆ ಹೇಳಿದ್ರು ಅಂತ ತೆಗೆದಿದ್ದೆ. ಈಗ ರಾಧಿಕಾಗೂ ಗಡ್ಡ ಇಷ್ಟವಾಗಿದೆ ಎಂದರು.ಕೊನೆಯಾದಾಗಿ ರಂಗನಾಥ್ ಅವರು, ನಿಮಗೆ ಸರಿ ಎನಿಸಿದ್ರೆ ಅದನ್ನೇ ಇಟ್ಟುಕೊಳ್ಳಿ ಎಂದು ಹೇಳಿದರು. ಮತ್ತೆ ಮಾತು ಮುಂದುವರಿಸಿದ ಯಶ್, ನಾನು ಮೊದಲು ಗಡ್ಡ ಬೆಳೆಸಲು ಒಂದು ಪ್ರಾಡಕ್ಟ್ ಬಳಸುತ್ತಿದೆ. ಆದರೆ ಈಗ ಆ ಪ್ರಾಡಕ್ಟ್ ಅವರೇ ನನಗೆ ದುಡ್ಡು ಕೊಟ್ಟು ಪ್ರಾಡಕ್ಟ್ ಉಪಯೋಗಿಸಿ ಎಂದು ಹೇಳಿದ್ದಾರೆ. ಇದಕ್ಕೆ ಏನು ಹೇಳೋದು ಎಂದು ನಕ್ಕರು. ಇದಕ್ಕೆ ರಂಗನಾಥ್ ಅವರು, ಕೆಲವೊಮ್ಮೆ ಕೆಲವು ಸ್ಟೈಲ್‍ಗಳೇ ಅವರಿಗೆ ಲಾಭ ಆಗುತ್ತೆ. ನಿಮಗೆ ಎಷ್ಟು ದಿನ ಇಷ್ಟವೂ ಅಷ್ಟು ದಿನ ಗಡ್ಡ ಇರಲಿ. ಇತಿಹಾಸದಲ್ಲಿಯೂ ಗಡ್ಡ ಬಿಟ್ಟವರು ತುಂಬಾ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ ಎಂದರು.






 Advertisement 




Sign in to your account
Username or Email Address


Password

 Remember Me


