ವಿಶ್ವವೇ ಕೆಜಿಎಫ್ 2 ಸಿನಿಮಾ ಬಗ್ಗೆ ಕೊಂಡಾಡುತ್ತಿದೆ. ಕೇವಲ ಟೀಸರ್ ನಲ್ಲಿಯೇ ಸಿನಿಮಾದ ಹಲವು ಆಯಾಮಗಳನ್ನು ಚಿತ್ರತಂಡ ತೋರಿಸಿದೆ . ಆದರೂ, ಈ ಸಿನಿಮಾವನ್ನು ಯಾಕೆ ನೋಡಬೇಕು ಎನ್ನುವ ಕೆಟ್ಟ ಕುತೂಹಲ ಎಲ್ಲರದ್ದು. ಕೆಜಿಎಫ್ ಚಾಪ್ಟರ್ ಒಂದಕ್ಕಿಂತಲೂ ಚಾಪ್ಟರ್ 2 ನಲ್ಲಿ ಅಂತಹ ವಿಶೇಷತೆ ಏನಿದೆ ಎನ್ನುವ ಪ್ರಶ್ನೆ ಕೂಡ ಎದ್ದಿದೆ. ಇವೆಲ್ಲದಕ್ಕೂ ಪಬ್ಲಿಕ್ ಟಿವಿಯ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಯಶ್ ಮಾತನಾಡಿದ್ದಾರೆ. ಈ ಸಿನಿಮಾವನ್ನು ಜನರು ಯಾಕೆ ನೋಡಬೇಕು ಎನ್ನುವುದಕ್ಕೆ ತಮ್ಮದೇ ಆದ ಕಾರಣಗಳನ್ನೂ ಅವರು ನೀಡಿದ್ದಾರೆ.‘ಕೆಜಿಎಫ್ 2 ಸಿನಿಮಾ ನೋಡುವುದಕ್ಕೆ ನೂರಾರು ಕಾರಣಗಳನ್ನು ಕೊಡಬಹುದು. ಗಂಟೆಗಟ್ಟಲೆ ಈ ಕುರಿತು ಮಾತನಾಡಬಹುದು. ಅಷ್ಟೊಂದು ಕಾರಣಗಳಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಸಿನಿಮಾದಲ್ಲಿ ಪ್ರಶಾಂತ್ ನೀಲ್ ಎನ್ನುವ ಪ್ರತಿಭಾವಂತ ನಿರ್ದೇಶಕನ ಕೆತ್ತನೆಯ ಕೆಲಸವಿದೆ. ರವಿ ಬಸ್ರೂರ್ ಅವರ ಸಂಗೀತದ ಮೋಡಿ ಇದೆ. ಭುವನ್ ಎಂಬ ಛಾಯಾಗ್ರಹಕನ ಅಷ್ಟೂ ಜೀವನದ ಬದುಕಿನ ಬಣ್ಣವಿದೆ. ನಿರ್ದೇಶಕರಿಂದ ಹಿಡಿದು ಊಟ ತಂದುಕೊಡುತ್ತಿದ್ದ ವ್ಯಕ್ತಿಗಳವರೆಗಿನ ಶ್ರಮವಿದೆ’ ಈ ಕಾರಣಕ್ಕಾಗಿ ಕೆಜಿಎಫ್ 2 ಸಿನಿಮಾ ನೋಡಿ ಎಂದು ಹೇಳುತ್ತೇನೆ ಎನ್ನುತ್ತಾರೆ ಯಶ್. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್ಈ ಸಿನಿಮಾದಲ್ಲಿ ಒಂದು ತಾಯಿ ಮತ್ತು ಮಗುವಿನ ಕಥೆ ಹೇಳುತ್ತಿದ್ದರೂ, ಅಲ್ಲಿ ಹಲವು ಆಯಾಮಗಳು ತೆರೆದುಕೊಳ್ಳುತ್ತದೆ. ಮೂಲಕ ಕಥೆ ತಾಯಿ ಮತ್ತು ಮಗನ ಬಾಂಧವ್ಯದ ಕುರಿತಾಗಿದ್ದರೂ, ಅದನ್ನು ಯಾವುದರ ಮೂಲಕ ಹೇಳುತ್ತೇವೆ ಎನ್ನುವುದು ತುಂಬಾ ಮುಖ್ಯವಾಗುತ್ತದೆ. ಹಾಗಾಗಿ ಗೋಲ್ಡ್ ಮೈನಿಂಗ್ ಹಿನ್ನೆಲೆಯಾಗಿಟ್ಟುಕೊಂಡು ಈ ತಾಯಿ ಮತ್ತು ಮಗನ ಕಥೆಯನ್ನು ಹೇಳಿದ್ದಾರೆ ಪ್ರಶಾಂತ್ ನೀಲ್. ಇದನ್ನೂ ಓದಿ : EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್ಕೆಜಿಎಫ್ 2 ಸಿನಿಮಾದ ಕುರಿತಾಗಿ ಇದೇ ಮೊದಲ ಬಾರಿಗೆ ನಟ ಯಶ್ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದಾರೆ. ಸಿನಿಮಾದ ಮೇಕಿಂಗ್, ಅದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವ ಸಂಗತಿ ಮತ್ತು ಚಿತ್ರತಂಡದೊಂದಿಗಿನ ಹಲವು ವಿಚಾರಗಳನ್ನು ಈ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಅಲ್ಲದೇ, ತಮ್ಮ ಬದುಕಿನ ವೈಯಕ್ತಿಕ ವಿಚಾರಗಳನ್ನೂ ಹೇಳಿಕೊಂಡಿಕೊಂಡಿದ್ದಾರೆ. ಇದನ್ನೂ ಓದಿ: ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್ಏಪ್ರಿಲ್ 14 ರಂದು ವಿಶ್ವದ್ಯಾಂತ ಎಂಟು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಲಾಗಿದೆ. ಹಲವು ಕಡೆ ವಾರಪೂರ್ತಿ ಟಿಕೆಟ್ ಮಾರಾಟವಾಗಿದೆ. ಅಲ್ಲದೇ, ವಿದೇಶಗಳಲ್ಲೂ ಕೂಡ ದಾಖಲೆಯ ರೀತಿಯಲ್ಲಿ ಮುಂಗಡ ಬುಕ್ಕಿಂಗ್ ಆಗುತ್ತಿರುವುದು ಕನ್ನಡ ಸಿನಿಮಾಗಳಿಗೆ ಮತ್ತಷ್ಟು ಬಲ ಬಂದಿದೆ.Sign in to your account
Username or Email Address


Password

 Remember Me


