ಬಳ್ಳಾರಿ: ಎಸಿಯ ವಿಷಾನಿಲ ಸೋರಿಕೆಯಾಗಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಘನ ಘೋರ ದುರಂತವೊಂದು ನಡೆದುಹೋಗಿದೆ.ವೆಂಕಟ್ ಪ್ರಶಾಂತ್ (42), ಪತ್ನಿ ಚಂದ್ರಕಲಾ (38), ಮಕ್ಕಳಾದ ಅದ್ವಿಕ್ (16) ಪ್ರೇರಣಾ (8) ಮೃತರಾಗಿದ್ದಾರೆ. ಎಸಿಯ ವಿಷಾನಿಲ ಸೋರಿಕೆಯಿಂದ ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ರಾಘವೇಂದ್ರ ಶೆಟ್ಟಿ ಹಾಗೂ ಅವರ ಪತ್ನಿ ರಾಜಶ್ರೀ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೆಡ್‌ರೂಮ್‌ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣವೇ ಎಚ್ಚೆತ್ತ ರಾಘವೇಂದ್ರ ಶೆಟ್ಟಿ ಬಾಗಿಲು ತೆರೆಯಲು ಹರಸಾಹಸಪಟ್ಟರು. ಅಷ್ಟೊತ್ತಲ್ಲೇ ಮಗ ಹಾಗೂ ಮೊಮ್ಮಕ್ಕಳು ಮಲಗಿದ್ದ ಬೆಡ್ ರೂಂಗೆ ದಟ್ಟ ಹೊಗೆ ಆವರಿಸಿತ್ತು. ಮನೆ ಬಹುತೇಕ ಸುಟ್ಟು ಹೋಗಿದೆ. ಮರಿಯಮ್ಮನಹಳ್ಳಿ ಪೊಲೀಸರು ತನಿಖೆ ನಡೆಸಿದ್ದಾರೆ.Sign in to your account
Username or Email Address


Password

 Remember Me


