ಸೌತ್ ಬ್ಯೂಟಿ ಪಾಯಲ್ ರಜಪೂತ್ ಕನ್ನಡ ಚಿತ್ರರಂಗಕ್ಕೆ `ಹೆಡ್ ಬುಷ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. `ಬಡವ ರಾಸ್ಕಲ್’ ಸೂಪರ್ ಸಕ್ಸಸ್ ನಂತರ ಡಾಲಿ ಧನಂಜಯ್ `ಹೆಡ್ ಬುಷ್’ ಚಿತ್ರ ಕೈಗೆತ್ತಿಕೊಂಡಿದ್ದು, ನಟರಾಕ್ಷಸ ಡಾಲಿಗೆ ನಾಯಕಿಯಾಗಿ ಪಾಯಲ್ ರಜಪೂತ್ ನಟಿಸಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ `ಹೆಡ್‌ಬುಷ್’ ಕುರಿತು ನಟಿ ಪಾಯಲ್ ಹಾಕಿರೋ ಪೋಸ್ಟ್ ವೈರಲ್ ಆಗುತ್ತಿದೆ.ಪಾಯಲ್ ರಜಪೂತ್ ಸದ್ಯ ಬಹುಭಾಷಾ ನಟಿಯಾಗಿ ಮಿಂಚ್ತಿರೋ ಕಲಾವಿದೆ. ಈಗ `ಹೆಡ್‌ ಬುಷ್’ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಪಾಯಲ್ ಹಾಕಿರೋ ಪೋಸ್ಟ್ ವೈರಲ್ ಆಗಿದೆ. ಅಭಿಮಾನಿಯೊಬ್ಬರು ನೀವು ಯಾವಾಗ ಕನ್ನಡ ಚಿತ್ರದಲ್ಲಿ ನಟಿಸುತ್ತೀರಾ ಅಂತಾ ಕೇಳಿದ್ದಾರೆ. ಅದಕ್ಕೆ ನಟಿ ಖುಷಿಯಿಂದಲೇ ಧನಂಜಯ್ ಜೊತೆಯಿರೋ ಫೋಟೋ ಶೇರ್ ಮಾಡಿ ಉತ್ತರ ನೀಡಿದ್ದಾರೆ.ನಾನು ಈಗಾಗಲೇ ಹೆಡ್‌ ಬುಷ್ ಕನ್ನಡ ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರದಲ್ಲಿನ ನನ್ನ ಪಾತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ʻಹೆಡ್‌ ಬುಷ್ʼ ಚಿತ್ರ ತೆರೆಗೆ ಬರುವುದಾಗಿ ಅಭಿಮಾನಿಗಳಿಗೆ ಚಿತ್ರದ ಅಪ್‌ಡೇಟ್ ನೀಡಿದ್ದಾರೆ. ಇನ್ನು ನಟಿ ಪಾಯಲ್ ಟ್ಯಾಗ್ ಮಾಡಿರೋ ಪೋಸ್ಟ್‌ನ್ನು ಡಾಲಿ ಕೂಡ ತಮ್ಮ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಶಾರುಖ್ ಖಾನ್- ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್‌ನ ಚಿತ್ರದ ಶೂಟಿಂಗ್ ಸ್ಟಾರ್ಟ್!ಸದ್ಯ ಹಲವಾರು ವಿಚಾರಗಳಿಂದ ಅಟ್ರ್ಯಾಕ್ಟ್‌ ಮಾಡ್ತಿರೋ ಚಿತ್ರ `ಹೆಡ್‌ ಬುಷ್’ನಲ್ಲಿ ನಟ ಧನಂಜಯ್ ಡಾನ್ ಪಾತ್ರದಲ್ಲಿ ಮಿಂಚಲಿದ್ದಾರೆ. ಚಿತ್ರದಲ್ಲಿ ರವಿಚಂದ್ರನ್, ಶೃತಿ ಹರಿಹರನ್, ರಘು ಮುಖರ್ಜಿ, ಲೂಸ್ ಮಾದ, ವಸಿಷ್ಠ ಸಿಂಹ, ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ಹೀಗೆ ಸ್ಟಾರ್ ಕಲಾವಿದರ ದಂಡೆ ಚಿತ್ರದಲ್ಲಿದೆ. ಮಲ್ಟಿಸ್ಟಾರ್‌ಗಳಿರೋ `ಹೆಡ್‌ ಬುಷ್’ ಚಿತ್ರ ಈಗಿಂದಲೇ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿದೆ. ಡಾಲಿಯ ನ್ಯೂ ವೆಂಚರ್ ನೋಡೋದಕ್ಕೆ ಫ್ಯಾನ್ಸ್ ಕಾಯ್ತಿದ್ದಾರೆ.Sign in to your account
Username or Email Address


Password

 Remember Me


