ಎಲ್ಲೆಲ್ಲೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ `ಕೆಜಿಎಫ್ 2′ ಚಿತ್ರದ ಹಾವಳಿ ಜೋರಾಗಿದೆ. ಚಿತ್ರದ ಟ್ರೇಲರ್ ಮೂಲಕನೇ ದಾಖಲೆ ಬರೆದಿರೋ `ಕೆಜಿಎಫ್ 2′ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಯಶ್ ನಟನೆಯ ಬಹುನಿರೀಕ್ಷಿತ `ಕೆಜಿಎಫ್ 2′ ಇದೇ ಏಪ್ರಿಲ್ 14ಕ್ಕೆ ತೆರೆಗೆ ಅಬ್ಬರಿಸಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದೆಲ್ಲಡೆ ಚಿತ್ರ ರಿಲೀಸ್ ಆಗುತ್ತಿದೆ.ಈಗಾಗಲೇ `ಕೆಜಿಎಫ್ 2′ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಯುಎಸ್‌ಎನಲ್ಲಿ ಒಂದು ದಿನ ಮುಂಚೆನೇ ಪ್ರೀಮಿಯರ್ ಶೋ ಹಾಕಲಾಗಿದೆ. ಇದಕ್ಕಿನ್ನೂ 6 ದಿನಗಳಷ್ಟೇ ಬಾಕಿಯಿದೆ. ಫಸ್ಟ್ ಡೇ ಫಸ್ಟ್ ಶೋ `ಕೆಜಿಎಫ್ 2′ ಚಿತ್ರವನ್ನ ನೋಡಬೇಕು ಅಂತಾ ಅಭಿಮಾನಿಗಳು ಕಾಯ್ತಿದ್ದಾರೆ. ಕೋಟ್ಯಾಂತರ ಸಂಖ್ಯೆಯಲ್ಲಿ ಈಗಾಗಲೇ ಟಿಕೆಟ್ ಬುಕ್ಕಿಂಗ್ ಮಾಡಲಾಗಿದೆ.ವಿಶ್ವದೆಲ್ಲಡೆ ಕಾಯ್ತಿರೋ ರಾಕಿಭಾಯ್ ಸಿನಿಮಾಗಾಗಿ ಮುಂಬೈನ ಯಶ್ ಅಭಿಮಾನಿಯೊಬ್ಬ ಬರೋಬ್ಬರಿ 100 ಟಿಕೆಟ್ ಖರೀದಿಸಿ ಅಚ್ಚರಿ ಮೂಡಿಸಿದ್ದಾನೆ. ಈ ಮುನ್ನ ಈತ ಭಾಯಿಜಾನ್ ಸಲ್ಮಾನ್ ಖಾನ್ ಸಿನಿಮಾಗೆ 100 ಟಿಕೆಟ್ ಖರೀದಿಸಿದರಂತೆ. ಈಗ ಫಸ್ಟ್ ಟೈಮ್ ಸೌತ್ ಸಿನಿಮಾದ ಹೀರೋ ಯಶ್ ಸಿನಿಮಾಗೆ 100 ಟಿಕೆಟ್ ಬುಕ್ ಮಾಡಿದ್ದಾರೆ. ಇದನ್ನು ಓದಿ: ಸೆಂಚ್ಯುರಿ ಸ್ಟಾರ್ ಶಿವರಾಜ್‌ಕುಮಾರ್ ಚಿತ್ರಕ್ಕೆ ಶ್ರೀನಿ ನಿರ್ದೇಶನಇನ್ನು ನ್ಯಾಷನಲ್ ಸ್ಟಾರ್ ಯಶ್‌ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಜತೆಯಾಗಿದ್ದು, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ವಸಿಷ್ಠ ಸಿಂಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಪೋಸ್ಟರ್ ಲುಕ್, ಹಾಡುಗಳ ಮೂಲಕ ಮೋಡಿ ಮಾಡುತ್ತಿರುವ `ಕೆಜಿಎಫ್ 2′ ಸಿನಿಮಾ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.Sign in to your account
Username or Email Address


Password

 Remember Me


