ದಾವಣಗೆರೆ: ಮದ್ಯ ಸೇವೆನೆ ಮಾಡಲು ಹಣವನ್ನು ಕೊಡದಿದ್ದಕ್ಕೆ ತಂದೆಯನ್ನೇ ಪಾಪಿ ಮಗ ಕೊಲೆ ಮಾಡಿರುವ ಘಟನೆ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ನಡೆದಿದೆ.ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ನಿವಾಸಿ ಮಂಜಪ್ಪ(65) ಮಗನಿಂದ ಕೊಲೆಯಾದ ತಂದೆ. ಮಗ ನರಸಿಂಹಪ್ಪ ಕಳೆದ ರಾತ್ರಿ ಕುಡಿಯಲು ಹಣಬೇಕು ಎಂದು ಮಂಜಪ್ಪನನ್ನು ಪೀಡಿಸಿದ್ದಾನೆ. ಇದಕ್ಕೆ ಮಂಜಪ್ಪ, ನನ್ನ ಬಳಿ ಹಣವಿಲ್ಲ. ಸುಮ್ಮನ್ನೆ ಊಟ ಮಾಡಿ ಮಲಗು ಎಂದು ಗದರಿದ್ದಾರೆ. ಇದರಿಂದ ನರಸಿಂಹಪ್ಪನಿಗೆ ಕೋಪ ಬಂದು ಮಂಜಪ್ಪನನ್ನು ಎಳೆದಾಡಿದ್ದಾನೆ. ಇದನ್ನೂ ಓದಿ: ಪಾಕ್ ಅನ್ನು ಟಿಶ್ಯೂ ಪೇಪರ್ ಆಗಿ ಬಳಸಿ ಎಸೆಯಲಾಗಿದೆ: ಇಮ್ರಾನ್ ಕಿಡಿಎಳೆದಾಡಿ ಕೆಳಗಿ ಬೀಳಿಸಿ ಎದೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಮಂಜಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಮಗನ ವಿರೋಧ ತಾಯಿ ದೂರು ನೀಡಿದ್ದಾರೆ. ತಕ್ಷಣ ಸಿಪಿಐ ದೇವರಾಜ್ ನೇತೃತ್ವದ ತಂಡ ಆರೋಪಿ ನರಸಿಂಹಪ್ಪನನ್ನು ಬಂಧಿಸಿದೆ.Sign in to your account
Username or Email Address


Password

 Remember Me


