ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಕೇಸ್‍ನಲ್ಲಿ ಜೈಲು ಸೇರಿರುವ ಮಾಸ್ಟರ್ ಮೈಂಡ್ ಪವಿತ್ರಾಗೌಡ ಆರ್‍ಆರ್ ನಗರ ಶೆಡ್ ನಲ್ಲಿ ಹೊಡೆದಿದ್ದರ ಬಗ್ಗೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.ಕೊಲೆಯಾಗಿರುವ ರೇಣುಕಾಸ್ವಾಮಿಯ ಮೇಲೆ ಹಲ್ಲೆ ಮಾಡಿದ್ದಾಗಿ ಪೊಲೀಸರ ತನಿಖೆಗೆ ವೇಳೆ ಕೊಲೆ ಆರೋಪಿ ನಟ ದರ್ಶನ್ ವಿರುದ್ಧವಾಗಿಯೇ ಹೇಳಿಕೆಯನ್ನ ನೀಡಿದ್ದಾರಂತೆ. ನಾನು ಚಪ್ಪಲಿಯಲ್ಲಿ ಒಮ್ಮೆ ಹೊಡೆದು ಸುಮ್ಮನೆ ನಿಂತಿರುವಾಗ ದರ್ಶನ್, ರೇಣುಕಾಸ್ವಾಮಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾಗಿ ತನಿಖೆಯ ವೇಳೆ ಹೇಳಿದ್ದಾರೆ ಎನ್ನಲಾಗಿದೆ.ನಾನು ಶೆಡ್‍ಗೆ ಹೋಗುವುದಕ್ಕೂ ಮುಂಚನೇ ದರ್ಶನ್ ಶೆಡ್‍ನಲ್ಲಿದ್ದರು ಎಂಬುದಾಗಿ ಪವಿತ್ರಾ ಗೌಡ (Pavithra Gowda) ಅವರು ಪೊಲೀಸ್ ಕಸ್ಟಡಿಯಲ್ಲಿದ್ದಾಗ ಪೊಲೀಸರ ಮುಂದೆ ಹೇಳಿದ್ದಾರೆ ಅಂತಾ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಆದರೆ ಪವಿತ್ರಾ ಗೌಡ ಈ ಹೇಳಿಕೆಯನ್ನು ನಟ ದರ್ಶನ್ ಕೂಡ ನಿರೀಕ್ಷೆ ಮಾಡಿರಲಿಕ್ಕಿಲ್ಲ. ಇದನ್ನೂ ಓದಿ: ರಾಜ್ಯ ಆರೋಗ್ಯ ಇಲಾಖೆಯಿಂದ ಡೆಂಗ್ಯೂ ಡೆತ್ ಆಡಿಟ್ಹತ್ಯೆಯಲ್ಲಿ ನಟ ದರ್ಶನ್ ಎಂಟ್ರಿಯಾಗಿದ್ದೆ ಎ1 ಆರೋಪಿಯಾಗಿರುವ ಪವಿತ್ರಾಗೌಡರಿಗಾಗಿ. ಅದೇ ಪವಿತ್ರಾಗೌಡ ದರ್ಶನ್ ಹಲ್ಲೆ ಬಗ್ಗೆ ಪೊಲೀಸರ ಮುಂದೆ ಹೇಳಿರೋದು ದರ್ಶನ್ ಗೆ ಒಂದು ರೀತಿಯಲ್ಲಿ ಅರಗಿಸಿಕೊಳ್ಳಲಾಗಂತಹ ವಿಷಯವಾಗಿರುತ್ತೆ.Sign in to your account
Username or Email Address


Password

 Remember Me


