ಸ್ಯಾಂಡಲ್‌ವುಡ್‌ಗೆ `ಕೆಂಪೇಗೌಡ’, `ವೀರಮದಕರಿ’ ಚಿತ್ರಗಳ ಮೂಲಕ ಸಂಚಲನ ಮೂಡಿಸಿದ ನಟಿ ರಾಗಿಣಿ ದ್ವಿವೇದಿ.ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯೂಟಿ ಜೊತೆ ಪ್ರತಿಭೆಯಿರೋ ರಾಗಿಣಿಗೆ ಕನ್ನಡ ಚಿತ್ರಗಳು ಮಾತ್ರವಲ್ಲದೇ ಪರಭಾಷಾ ಸಿನಿಮಾಗಳಿಂದಲೂ ಬುಲಾವ್ ಬರುತ್ತಿದೆ.`ಜುಮ್ ಜುಮ್ ಮಾಯಾ’ ಎಂಬ ಹಾಡಿನ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಸೃಷ್ಠಿಸಿದ ತುಪ್ಪದ ಬೆಡಗಿ ರಾಗಿಣಿ ಸಾಕಷ್ಟು ಚಿತ್ರಗಳ ಮೂಲಕ ಕಮಾಲ್ ಮಾಡಿದ್ರು. ಭಿನ್ನ ಪಾತ್ರಗಳ ಮೂಲಕ ಮನರಂಜಿಸಿರೋ ರಾಗಿಣಿ ಕಡೆಯದಾಗಿ ಕಾಣಿಸಿಕೊಂಡಿದ್ದ ಚಿತ್ರ ನಟ ಶರಣ್ ಜೊತೆಗಿನ `ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರದಲ್ಲಿ, ಇದೀಗ ಮತ್ತೆ ರಾಗಿಣಿ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ.ರಾಗಿಣಿ ಈ ಬಾರಿ ಪವರ್‌ಫುಲ್ ಪಾತ್ರಗಳ ಮೂಲಕ ಕಂಬ್ಯಾಕ್ ಆಗಿದ್ದಾರೆ. ವಿಶಾಲ್ ಶೇಖರ್ ನಿರ್ದೇಶನದ `ಕರ್ವ 3′ ನಲ್ಲಿ ಡಿಫರೆಂಟ್ ಪಾತ್ರಕ್ಕೆ ಜೀವ ತುಂಬ್ತಿದ್ದಾರೆ. ವೇದಿಕ್ ನಿರ್ದೇಶನದ `ಜಾನಿವಾಕರ್’  ಚಿತ್ರದಲ್ಲಿ ತನಿಖಾ ಅಧಿಕಾರಿಯ ಪಾತ್ರದಲ್ಲಿ ಕಾಣಸಿಕೊಳ್ತಿದ್ದಾರೆ. ಇನ್ನೊಂದು ಭಿನ್ನ ಕಥೆ `ಗಾಂಧಿಗಿರಿ’ ಚಿತ್ರದಲ್ಲೂ ನಟಿಸ್ತಿದ್ದಾರೆ. ಇದನ್ನು ಓದಿ:`ಕೆಜಿಎಫ್ 2′ ಟೀಮ್‌ನಿಂದ ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್ಬ್ರಹ್ಮ ನಿರ್ದೇಶನದ `ಸಾರಿ ಕರ್ಮ ರಿಟನ್ಸ್’ ಚಿತ್ರ ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ರಿಲೀಸ್ ಆಗುತ್ತಿದೆ. ಕ್ರಿಸ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿ ಸಿದ್ದವಾಗ್ತಿರೋ ಈ ಚಿತ್ರದಲ್ಲಿ ರಾಗಿಣಿ ಎರಡು ಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕಾಲಿವುಡ್‌ನ `ಒನ್ ಟು ಒನ್’ ಚಿತ್ರಕ್ಕೆ ರಾಗಿಣಿ ಸಹಿ ಹಾಕಿದ್ದಾರೆ. ಫ್ಯಾಮಿಲಿ ಡ್ರಾಮ ಜೊತೆ ಸಸ್ಪೆನ್ಸೆ ಕಥೆಯಲ್ಲಿ ರಾಗಿಣಿ ಹೋಮ್ಲಿ ಲುಕ್‌ನಲ್ಲಿ ಮಿಂಚಲಿದ್ದಾರೆ. ಸಿನಿಮಾ, ಫೋಟೋಶೂಟ್ ಮಾಡಿಸೋದ ಜೊತೆಗೆ ಸಮಾಜ ಮುಖಿ ಕಾರ್ಯಗಳಿಂದಲೂ ಸೈ ಎನಿಸಿಕೊಂಡಿದ್ದಾರೆ.Sign in to your account
Username or Email Address


Password

 Remember Me


