ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ ತಡಮಾಡಿ ವಿಶ್ ಮಾಡಿದ್ದ ರಶ್ಮಿಕಾ ಮಂದಣ್ಣ, ಇದೀಗ  ಅಲ್ಲು ಅರ್ಜುನ್ ಬರ್ತಡೇಗೆ ಬೆಳ್ಳಂಬೆಳಗ್ಗೆ ಶುಭಾಶಯ ಕೋರಿದ್ದಾರೆ. ರಶ್ಮಿಕಾ ಈ ನಡೆಗೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಫುಲ್ ಕ್ಲಾಸ್ ತಗೆದುಕೊಂಡಿದ್ದಾರೆ. ಇದನ್ನೂ ಓದಿ : ಶಕ್ತಿಧಾಮ ವಿದ್ಯಾಶಾಲೆಗೆ ಶಂಕುಸ್ಥಾಪನೆ – ಜೀವ ಇರೋತನಕ ಇಲ್ಲಿನ ಮಕ್ಕಳ ಜತೆ ಇರುತ್ತೇನೆ: ಶಿವಣ್ಣಪುನೀತ್ ಅವರ ಜನ್ಮದಿನಕ್ಕೆ ಪುನೀತ್ ಅವರ ಜತೆ ನಟಿಸಿದ್ದ ಅಷ್ಟೂ ತಾರೆಯರು ಶುಭಾಶಯ ಕೋರಿದ್ದರು. ಕೋಟ್ಯಾಂತರ ಅಭಿಮಾನಿಗಳು ಹುಟ್ಟು ಹಬ್ಬ ಆಚರಿಸಿದ್ದರು. ಆದರೆ, ರಶ್ಮಿಕಾ ಮಂದಣ್ಣ ಮಾತ್ರ ಅಂದು ಶುಭಾಶಯ ಕೋರಿ ಯಾವುದೇ ಪೋಸ್ಟ್ ಮಾಡಿರಲಿಲ್ಲ. ಹಾಗಾಗಿ ಪುನೀತ್ ಅಭಿಮಾನಿಗಳು ರಶ್ಮಿಕಾ ಮೇಲೆ ಗರಂ ಆಗಿದ್ದರು. ಪರಭಾಷಾ ನಟ ನಟಿಯರೆಲ್ಲ ಅಪ್ಪು ಅವರಿಗೆ ಶುಭಾಶಯ ಕೋರಿದ್ದಾರೆ. ರಶ್ಮಿಕಾ ಯಾಕೆ ಪೋಸ್ಟ್ ಮಾಡಿಲ್ಲ ಎಂದು ಸಖತ್ ಟ್ರೋಲ್ ಮಾಡಿದ್ದರು. ಒಂದು ದಿನದ ನಂತರ ಎಚ್ಚೆತ್ತುಕೊಂಡಿದ್ದ ರಶ್ಮಿಕಾ ‘ಶುಭಾಶಯ’ ಕೋರಿ ಟ್ವಿಟ್ ಮಾಡಿದ್ದರು. ಇದನ್ನೂ ಓದಿ: RGV ನಿರ್ದೇಶನದ ಲೆಸ್ಬಿಯನ್ ಸಿನಿಮಾ ಬಿಡುಗಡೆ ಮುಂದೂಡಿಕೆಇಂದು ಅಲ್ಲು ಅರ್ಜುನ್ ಅವರ ಜನ್ಮದಿನ. ಈ ಹುಟ್ಟು ಹಬ್ಬಕ್ಕೆ ಲವಲವಿಕೆಯಿಂದ ಶುಭಾಶಯ ಕೋರಿದ್ದಾರೆ ರಶ್ಮಿಕಾ. ‘ಹ್ಯಾಪಿ ಬರ್ತಡೇ ನನ್ನ ಪುಷ್ಪಾ..’ ಎಂದು ರೋಮ್ಯಾಂಟಿಕ್ ಆಗಿ ಬರೆದುಕೊಂಡಿದ್ದಾರೆ. ‘ಈ ಜಗತ್ತು ಈಗಾಗಲೇ ನಿಮ್ಮ ಪ್ರೀತಿಸುತ್ತಿದೆ. ಭಾರತದಲ್ಲಿಯ ಅಭಿಮಾನಿಗಳು ನಿಮ್ಮನ್ನು ಪ್ರೀತಿಸುತ್ತಲೇ ಇರುತ್ತಾರೆ. ಜಗತ್ತಿನ ಮೂಲೆ ಮೂಲೆಯಲ್ಲಿರುವ ಜನರ ಪ್ರೀತಿ ನಿಮಗೆ ಸಿಕ್ಕಿದೆ. ಟನ್ ಗಟ್ಟಲೇ ನಿಮಗೆ ಪ್ರೀತಿಯನ್ನುಕಳುಹಿಸುತ್ತೇನೆ’ ಎಂದು ಹೃದಯದಿಂದ ರಶ್ಮಿಕಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?ಪುಷ್ಪಾ ಸಿನಿಮಾದ ಸಕ್ಸಸ್ ನಂತರ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಗೆ ಭಾರೀ ಬೇಡಿಕೆ ಬಂದಿದೆ. ಅಲ್ಲದೇ, ಈ ಜೋಡಿಯ ಪುಷ್ಪಾ 2 ಸಿನಿಮಾ ಸದ್ಯದಲ್ಲೇ ಶೂಟಿಂಗ್ ಪ್ರಾರಂಭಿಸಲಿದೆ. ಪುಷ್ಪಾ ಬಂದ ನಂತರ ರಶ್ಮಿಕಾ ಅವರ ಸಂಭಾವನೆ ಕೂಡ  ಏರಿಕೆಯಾಗಿದೆ. ಹೀಗಾಗಿ ಅಲ್ಲು ಬಗ್ಗೆ ಅಷ್ಟೊಂದು ಭಾವನಾತ್ಮಕವಾಗಿ ರಶ್ಮಿಕಾ ಪೋಷ್ಟ್ ಮಾಡಿದ್ದಾರೆ.Sign in to your account
Username or Email Address


Password

 Remember Me


