ವಿಜಯಪುರ: ಅರಣ್ಯಾಧಿಕಾರಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ನಡೆದಿದೆ.ಕೃಷ್ಣಾ ನದಿಗೆ ಹಾರಿ ಕೊಲ್ಹಾರ ಅರಣ್ಯ ಇಲಾಖೆಯ ಅರಣ್ಯ ರಕ್ಷಕ ಈರಪ್ಪ ದುಂಡಪ್ಪ ದಟ್ಟಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈರಪ್ಪ ಕಳೆದ ಸುಮಾರು 8 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇದನ್ನೂ ಓದಿ: ಗೋಮಾಂಸ ತಿನ್ನವವರ ಜೊತೆ ಬೇಡ, ಹಿಂದೂಗಳು ಹಿಂದೂ ಡ್ರೈವರ್ ಜೊತೆ ದೇವಾಲಯಕ್ಕೆ ಹೋಗಲಿ: ಭಾರತ್ ರಕ್ಷಣ್ ವೇದಿಕೆನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದ ನಿವಾಸಿಯಾಗಿದ್ದ ಈರಪ್ಪ ಗುರುವಾರ ಮಧ್ಯಾಹ್ನ ಕೃಷ್ಣಾ ನದಿ ಸೇತುವೆ ಮೇಲೆ ತನ್ನ ಬೈಕ್ ನಿಲ್ಲಿಸಿದ್ದಾರೆ. ಬೈಕ್‍ನಲ್ಲಿ ಮೊಬೈಲ್ ಹಾಗೂ ಹಗ್ಗವನ್ನಿಟ್ಟು ತನ್ನ ಅರಣ್ಯ ಇಲಾಖೆಯ ಸಮವಸ್ತ್ರ ಸಹಿತ ಸೇತುವೆ ಮೇಲಿಂದ ನದಿಗೆ ಹಾರಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.ಈರಪ್ಪಾಗಾಗಿ ನದಿಯಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ:  2 ಕೋಟಿ ದರೋಡೆ ಕೇಸ್ – ಪತ್ನಿ ಸಾಲ ತೀರಿಸಲು ಕನ್ನ ಹಾಕಿದ ಇಬ್ಬರು ಪತ್ನಿಯರ ಮುದ್ದಿನ ಗಂಡSign in to your account
Username or Email Address


Password

 Remember Me


