ಬೆಂಗಳೂರು: ಜನರ ಜೀವನಾಡಿ ಬಿಎಂಟಿಸಿ(ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ). ಈಗ ಇದು ಅಧೋಗತಿಯತ್ತ ಸಾಗುತ್ತಿದೆ. ಕೋಟಿ ಕೋಟಿ ಸಾಲ ಮಾಡಿ ಕಟ್ಟಡವನ್ನೇ ಅಡವಿಡುತ್ತಿದೆ.ದೇಶದ ನಂಬರ್ 1 ಸಾರಿಗೆ ಸಂಸ್ಥೆಯಾದ ಬಿಎಂಟಿಸಿ ಸಾಲದ ಶೂಲದಿಂದ ಹೊರಬರಲು ಆಗುತ್ತಿಲ್ಲ. ಸಾಲಕ್ಕಾಗಿ ಸಂಸ್ಥೆಯ ಕಟ್ಟಡ ಹಾಗೂ ಸ್ಥಳವನ್ನು ವಿವಿಧ ಬ್ಯಾಂಕ್‍ಗಳಲ್ಲಿ ಅಡವಿಟ್ಟಿರೋದು ಮಾಹಿತಿ ಹಕ್ಕು ಕಾಯ್ದೆಯಿಂದ ಬಹಿರಂಗವಾಗಿದೆ. ಇದನ್ನೂ ಓದಿ: ಕಾರ್ಯಕಾರಿಣಿ ಸಭೆ ಬಳಿಕ ಸಂಪುಟ ಸರ್ಜರಿ ಫೈನಲ್: ಸಿಎಂಎಲ್ಲಿ ಎಷ್ಟು? 
2018ರಲ್ಲಿ ಕೆನರಾ ಬ್ಯಾಂಕ್‍ನಲ್ಲಿ 100 ಕೋಟಿ ರೂ. ಸಾಲ ಪಡೆದ್ರೆ, 2018-19ರಲ್ಲಿ ಇದೇ ಬ್ಯಾಂಕ್‍ನಲ್ಲಿ ಮತ್ತೆ 19.95 ಕೋಟಿ ಸಾಲ ಪಡೆಯಲಾಗಿದೆ. 2018ರಲ್ಲಿ ಕೆಯುಐಡಿಎಫ್‍ಸಿ ಬ್ಯಾಂಕ್‍ನಲ್ಲಿ 125 ಕೋಟಿ ರೂ. ಸಾಲ ಮಾಡಿದ್ರೆ, 2019-20ರಲ್ಲಿ ಕೆನರಾ ಬ್ಯಾಂಕ್‍ನಲ್ಲಿ 160 ಕೋಟಿ ರೂ. ಸಾಲ ಮಾಡಲಾಗಿದೆ.2020-21ರಲ್ಲಿ ಕೆಯುಐಡಿಎಫ್‍ಸಿ ಬ್ಯಾಂಕ್‍ನಲ್ಲಿ 135.05 ಕೋಟಿ ರೂ. ಸಾಲ ಪಡೆದ್ರೆ, 2020-21ರಲ್ಲಿ ಕೆನರಾ ಬ್ಯಾಂಕ್‍ನಲ್ಲಿ 230 ಕೋಟಿ ರೂ. ಸಾಲ ಮಾಡಲಾಗಿದೆ. ಅಷ್ಟೇ ಅಲ್ಲದೆ 2020-21 ಕೆಯುಐಡಿಎಫ್‍ಸಿ ಬ್ಯಾಂಕ್‍ನಲ್ಲಿ 42 ಕೋಟಿ ರೂ ಸಾಲ ಮಾಡಲಾಗಿದೆ. ಮಾರ್ಚ್ 13, 2022ರವರೆಗೆ ಒಟ್ಟು ಕೆಯುಐಡಿಎಫ್‍ಸಿ ಬ್ಯಾಂಕ್‍ನಲ್ಲಿ 183 ಕೋಟಿ ಸಾಲ ಮಾಡಲಾಗಿದೆ. ಇದನ್ನೂ ಓದಿ: 2 ಲಕ್ಷ ದೋಚಲು ಬಂದು 2 ಕೋಟಿ ಕಳ್ಳತನ – ಓನರ್ ಮನೆಗೆ ಐಟಿ, ಇಡಿ, ಎಂಟ್ರಿ ಸಾಧ್ಯತೆಈ ಮೇಲಿನ ಸಾಲದಲ್ಲಿ 160 ಕೋಟಿ ರೂ. ಹಾಗೂ 230 ಕೋಟಿ ರೂ. ಸಾಲ ಪಡೆಯಲು ಶಾಂತಿನಗರ ಟಿಟಿಎಂಸಿಯನ್ನು ಅಡಮಾನ ಇಡಲಾಗಿದೆ.Sign in to your account
Username or Email Address


Password

 Remember Me


