ಬಾಲಿವುಡ್ ಮಂದಿಗಾಗಿಯೇ ಆರ್.ಆರ್.ಆರ್ ಸಿನಿಮಾ ತಂಡ ಸಕ್ಸಸ್ ಪಾರ್ಟಿ ಆಯೋಜನೆ ಮಾಡಿತ್ತು. ಈ ಸಂದರ್ಭದಲ್ಲಿ ಆರ್.ಆರ್.ಆರ್ ಸಿನಿಮಾ ತಂಡ ಮತ್ತು ಬಾಲಿವುಡ್ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿದ್ದರು. ಆಮೀರ್ ಖಾನ್, ಕರಣ್ ಜೋಹಾರ್, ಜಾವೇದ್ ಅಖ್ತರ್, ದಿ ಕಾಶ್ಮೀರ್ ಫೈಲ್ಸ್ ನಟ ದರ್ಶನ್ ಸಿಂಗ್, ತುಷಾರ್ ಕಪೂರ್ ಹೀಗೆ ಬಾಲಿವುಡ್ ದಿಗ್ಗಜರೇ ಈ ಪಾರ್ಟಿಗೆ ಬಂದಿದ್ದರು. ಯಾರೇ ದಿಗ್ಗಜರು ಬಂದಿದ್ದರೂ, ಅಲ್ಲಿ ಫಳಫಳ ಹೊಳೆದದ್ದು ಮಾತ್ರ ಮಾದಕ ನಟಿ ರಾಕಿ ಸಾವಂತ್. ಇದನ್ನೂ ಓದಿ : ಶಕ್ತಿಧಾಮ ವಿದ್ಯಾಶಾಲೆಗೆ ಶಂಕುಸ್ಥಾಪನೆ – ಜೀವ ಇರೋತನಕ ಇಲ್ಲಿನ ಮಕ್ಕಳ ಜತೆ ಇರುತ್ತೇನೆ: ಶಿವಣ್ಣಪಾರ್ಟಿಗೆ ಅವರು ಬಂದಿದ್ದ ಲುಕ್ಕೇ ವಿಭಿನ್ನವಾಗಿತ್ತು. ತುಂಬಾ ಬೋಲ್ಡ್ ಆಗಿ ಕಾಣುವಂತಹ ರೆಡ್ ಡ್ರೆಸ್ ನಲ್ಲಿ ರಾಕಿ ಆಗಮಿಸಿ, ಎಲ್ಲರ ಗಮನ ಸೆಳೆದರು. ಬರೀ ಕಾಸ್ಟ್ಯೂಮ್ ಮಾತ್ರವಲ್ಲ, ಗೋಲ್ಡನ್ ಕಲರ್ ನಿಂದ ಹೆಣೆಯಲ್ಪಟ್ಟ ಕೇಶ ವಿನ್ಯಾಸ ಮತ್ತು ಸೊಂಟದಲ್ಲಿ ಹಾಕಿಸಿಕೊಂಡಿದ್ದ ರಿವಲ್ವಾರ್ ಟ್ಯಾಟೋ ಕ್ಯಾಮೆರಾಗಳು ಕಣ್ಣಿಗೆ ಆಹಾರವಾಗಿದ್ದಂತೂ ಸುಳ್ಳಲ್ಲ. ಹಾಗಂತ ರಾಕಿ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಅಲ್ಲಿಗೆ ಬಂದಿದ್ದ ಅಷ್ಟೂ ಸಿಲಿಬ್ರಿಟಿಗಳ ಜತೆ ಫೋಟೋ ತಗೆಸಿಕೊಂಡರು. ತಮಾಷೆ ಮಾಡಿಕೊಂಡು ಇಡೀ ಪಾರ್ಟಿಗೆ ಕಳೆ ತಂದಿದ್ದಾರೆ. ಇದನ್ನೂ ಓದಿ: RGV ನಿರ್ದೇಶನದ ಲೆಸ್ಬಿಯನ್ ಸಿನಿಮಾ ಬಿಡುಗಡೆ ಮುಂದೂಡಿಕೆರಾಕಿಯ ಉತ್ಸಾಹ ಕಂಡು ಎಲ್ಲರೂ ದಂಗಾಗಿದ್ದರು. ಅಲ್ಲದೇ, ತಾನು ಸೊಂಟದಲ್ಲಿ ಬರೆಯಿಸಿಕೊಂಡಿದ್ದ ಗನ್ ಟ್ಯಾಟೋವನ್ನು ಎಲ್ಲರಿಗೂ ತೋರಿಸುವುದೇ ಆ ಸಂದರ್ಭದಲ್ಲಿ ಅವರ ಕಾಯಕವಾಗಿತ್ತು. ಬಂದವರಿಗೆಲ್ಲ ಟ್ಯಾಟೋ ತೋರಿಸಿ, ಮನರಂಜನೆ ನೀಡುತ್ತಿದ್ದರು ರಾಕಿ ಸಾವಂತ್. ಇದನ್ನೂ ಓದಿ: ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?ಈಗಾಗಲೇ ಆರ್.ಆರ್.ಆರ್ ಸಿನಿಮಾ ವಿಶ್ವದಾದ್ಯಂತ ಭಾರೀ ಗೆಲುವು ಕಂಡಿದೆ. ಇನ್ನೇನು ಸದ್ಯದಲ್ಲೇ 1000 ಕೋಟಿ ಕ್ಲಬ್ ಕೂಡ ಸೇರಲಿದೆ. ಹಿಂದಿಯಲ್ಲೂ ಭರ್ಜರಿ ಹಿಟ್ ಆಗಿದೆ. ಹಾಗಾಗಿ ಇಡೀ ತಂಡ ಬಾಲಿವುಡ್ ಮಂದಿಗೆ ಪಾರ್ಟಿ ಆಯೋಜನೆ ಮಾಡಿತ್ತು. ರಾಮ್ ಚರಣ್ ತೇಜ್, ರಾಜಮೌಳಿ, ಜೂನಿಯರ್ ಎನ್.ಟಿ.ಆರ್ ಸೇರಿದಂತೆ ಆರ್.ಆರ್.ಆರ್ ಚಿತ್ರ ತಂಡವೇ ಅಲ್ಲಿತ್ತು.Sign in to your account
Username or Email Address


Password

 Remember Me


