ಬೆಂಗಳೂರು: ಕುಮಾರಸ್ವಾಮಿ ಲೇಔಟ್‍ನ 2 ಕೋಟಿ ರೂ. ದರೋಡೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪತ್ನಿ ಮಾಡಿದ ಸಾಲ ತೀರಿಸಲು ಪತಿ ಈ ಕೃತ್ಯಕ್ಕೆ ಇಳಿದ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.ಬಂಧಿತ ಇಬ್ಬರು ಆರೋಪಿಗಳ ಪೈಕಿ ಒಬ್ಬನಾಗಿರುವ ಸುನೀಲ್‍ಗೆ ಇಬ್ಬರು ಪತ್ನಿಯರು. ಇವನು ತನ್ನ ಪತ್ನಿ ಪುಷ್ಪ ಮಾಡಿದ ಸಾಲ ತೀರಿಸಲು ಕನ್ನ ಹಾಕಿದ್ದ. ಇದನ್ನೂ ಓದಿ: ಮದ್ಯದ ಬಾಟಲಿಯಿಂದ ಸಿಕ್ಕಿ ಬಿದ್ರು 2 ಕೋಟಿ ಕದ್ದ ಖದೀಮರು
ಸುನೀಲ್, ಲಕ್ಷ್ಮಿ ಮತ್ತು ಪುಷ್ಪ ಇಬ್ಬರನ್ನು ಮದುವೆಯಾಗಿದ್ದನು. ಎರಡನೇ ಹೆಂಡತಿ ಪುಷ್ಪ ತಲಘಟ್ಟ ಪುರದಲ್ಲಿ ಕಳ್ಳತನದ ಆರೋಪದಲ್ಲಿ ಜೈಲು ಪಾಲಾಗಿದ್ದಳು. ಈ ಹಿನ್ನೆಲೆ ಸುನೀಲ್ ಶ್ಯೂರಿಟಿ ಕೊಟ್ಟು ಬೇಲ್ ನೀಡಿ ಹೆಂಡತಿಯನ್ನು ಬಿಡಿಸಿಕೊಂಡು ಬಂದಿದ್ದ.ಈ ನಡುವೆ ಸುನೀಲ್ ಮೂರು ತಿಂಗಳ ಹಿಂದೆ ಜೈಲು ಪಾಲಾಗಿದ್ದ. ಗಂಡನನ್ನು ಪುಷ್ಪಾ ಕೋರ್ಟ್‍ನಿಂದ ಬಿಡಿಸಿದ್ದಳು. ಈ ಸಂಬಂಧ ಕೋರ್ಟ್ ಶ್ಯೂರಿಟಿ, ವಕೀಲರ ಶುಲ್ಕಕ್ಕಾಗಿ 2 ಲಕ್ಷ ರೂ. ಸಾಲ ಮಾಡಿದ್ದಳು. ಈ ಸಾಲ ತೀರಿಸುವ ಉದ್ದೇಶದಿಂದ ಮನೆ ದರೋಡೆಗೆ ದಂಪತಿ ಸ್ಕೆಚ್ ಹಾಕಿದ್ದರು.ಸುನೀಲ್ ಆಟೋದಲ್ಲಿ ಕುಳಿತಿದ್ದಾಗ ಸಂದೀಪ್ ಅವರ ತಂದೆ ಮೋಹನ್ ಲಾಲ್‍ಗೆ ವ್ಯಕ್ತಿಯೊಬ್ಬ 2 ಕಂತೆ ಹಣ ನೀಡುವುದನ್ನು ನೋಡಿದ್ದ. 2 ಕಂತೆ ಹಣ ನೀಡಿದ್ದನ್ನು ಕಂಡು ಇವರ ಮನೆಯಲ್ಲಿ ಭಾರೀ ಹಣ ಇದೆ ಎಂದು ತಿಳಿದು ದರೋಡೆಗೆ ಸ್ಕೆಚ್ ಹಾಕಿದ್ದ. ಗಂಡನ 2 ಕೋಟಿ ರೂ. ದರೋಡೆಗೆ ಹೆಂಡತಿ ಪುಷ್ಪ ಕೂಡಾ ಸಾಥ್ ಕೊಟ್ಟಿದ್ದಳು. ಇದನ್ನೂ ಓದಿ: 2 ಲಕ್ಷ ದೋಚಲು ಬಂದು 2 ಕೋಟಿ ಕಳ್ಳತನ – ಓನರ್ ಮನೆಗೆ ಐಟಿ, ಇಡಿ, ಎಂಟ್ರಿ ಸಾಧ್ಯತೆಈ ದಂಪತಿ ಜೈಲಿನಿಂದ ಬಿಡುಗಡೆಯಾದ ಮೇಲೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಬಳಿಕ ದಂಪತಿ ಕನಕಪುರದ ರಸ್ತೆಯಲ್ಲಿರುವ ಮಾರುತಿನಗರದಲ್ಲಿ ಸೆಟಲ್ ಆಗಿದ್ದರು.Sign in to your account
Username or Email Address


Password

 Remember Me


