ಬೆಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸ್ಥಾನದಿಂದ ಬಿಜೆಪಿ ಮುಖಂಡ ರಹೀಂ ಉಚ್ಚಿಲ್ ಅವರನ್ನು ಪದಚ್ಯುತಿಗೊಳಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.ಕನ್ನಡ ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಆರ್ ರಮೇಶ್ ಇಂದು ರಹೀಂ ಉಚ್ಚಿಲ್‌ ಅಧ್ಯಕ್ಷ ಸ್ಥಾನ ರದ್ದುಪಡಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಪ್ರಾಣ ಪಣಕ್ಕಿಟ್ಟು ಹನಿನೀರಿಗಾಗಿ ಬಾವಿಗಿಳಿದ ದಿಟ್ಟ ಮಹಿಳೆಯ ವೀಡಿಯೋ ವೈರಲ್ಬ್ಯಾರಿ ಸಾಹಿತ್ಯ ಅಕಾಡೆಮಿಯಲ್ಲಿ ಎರಡು ಬಾರಿ ರಹೀಂ ಉಚ್ಚಿಲ್ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೆ ಕೆಲ ದಿನಗಳಿಂದ ರಾಜ್ಯದಲ್ಲಿ ವಿವಾದ ಎಬ್ಬಿಸಿದ್ದ ಹಿಜಬ್ ಕುರಿತಾಗಿ ಬಿಜೆಪಿ ನಿಲುವನ್ನು ರಹೀಂ ಸಮರ್ಥಿಸಿಕೊಂಡಿದ್ದರು. ಆ ಬಳಿಕ ಹಲವು ಬೆದರಿಕೆ ಕರೆ ಕೂಡ ರಹೀಂ ಅವರಿಗೆ ಬಂದಿತ್ತು. ಇದೀಗ ನೂತನ ಬೆಳವಣಿಗೆ ಎಂಬಂತೆ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿದೆ. ಇದನ್ನೂ ಓದಿ: ಭಾರತಕ್ಕೆ ಕಾಲಿಟ್ಟ ಹೊಸ ರೂಪಾಂತರಿ ʼXEʼ – ಮುಂಬೈನಲ್ಲಿ ಮೊದಲ ಪ್ರಕರಣ ಪತ್ತೆ






 Advertisement 




Sign in to your account
Username or Email Address


Password

 Remember Me


