ಬೆಳಗಾವಿ: ಸಂಪುಟದಿಂದ ಮುರುಗೇಶ್ ನಿರಾಣಿ ಅವರನ್ನ ಕೈಬಿಡ್ತಾರೆ ಎಂಬ ಪ್ರಶ್ನೆಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ ಸಚಿವ ಮುರುಗೇಶ್ ನಿರಾಣಿ , ಮಂತ್ರಿ ಆಗ್ಲಿ, ಎಂಎಲ್‍ಎ ಆಗ್ಲಿ ನಮ್ಮ ತಾತನ ಆಸ್ತಿಯಲ್ಲ ಎಂದು ಹೇಳಿದ್ದಾರೆ.ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಮುಖ್ಯಮಂತ್ರಿ ಪರಮಾಧಿಕಾರವಾಗಿದ್ದು, ನಮ್ಮ ರಾಜ್ಯದ ನಾಯಕರು, ರಾಷ್ಟ್ರೀಯ ವರಿಷ್ಠರು ಸೇರಿ ಮುಂದಿನ ದಿನಗಳಲ್ಲಿ ನಿರ್ಧಾರ ಮಾಡುತ್ತಾರೆ. ಮಂತ್ರಿ ಆಗಲಿ, ಎಂಎಲ್‍ಎ ಆಗಲಿ, ಇದು ನಮ್ಮ ತಾತ ಆಸ್ತಿಯಲ್ಲ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. 30ವರ್ಷದಿಂದ ಬಿಜೆಪಿ ಪಕ್ಷದ ಕಾರ್ಯಕರ್ತ ಆಗಿರುವೆ. ನಾಳೆ ಮಂತ್ರಿ ಕೊಟ್ಟರು ಇದರಲ್ಲಿ ಇರ್ತೇವಿ. ಎಂಎಲ್‍ಎ ಟಿಕೆಟ್ ಕೊಡದಿದ್ದರು ನಾವು ಈ ಪಕ್ಷದಲ್ಲಿ ಇರುತ್ತೇವೆ. ನಾನು ಪಕ್ಷದ ಸಕ್ರಿಯ ಸದಸ್ಯನಾಗಿ ಮುಂದೆ ಬರುವಂತವರಿಗೆ ಮಾರ್ಗದರ್ಶನ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ವಿವಾದಿತ ಸಮಾಧಿಯನ್ನ ಶಾಂತಿಯುತವಾಗಿ ಸ್ಥಳಾಂತರಿಸಿದ ಕ್ರೈಸ್ತ ಸಮುದಾಯಸಚಿವ ಸಂಪುಟ ವಿಚಾರ ಹೊರಗಡೆ ಚರ್ಚೆ ಆಗ್ತಿಲ್ಲ. ಅದು ಮುಖ್ಯಮಂತ್ರಿ ಪರಮಾಧಿಕಾರವಿದೆ. ಈ ಬಗ್ಗೆ ಸಿಎಂ ಪಕ್ಷದ ವರಿಷ್ಠರೊಂದಿಗೆ ಚರ್ಚೆ ಮಾಡಿ ಇತ್ಯರ್ಥ ಮಾಡುತ್ತಾರೆ. 2023ರಲ್ಲಿ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆ ಮಾಡಬೇಕು. 150 ಸೀಟ್ ಗೆಲ್ಲಿಸುವ ನಿಟ್ಟಿನಲ್ಲಿ ಸ್ಟ್ಯಾಟರ್ಜಿ ಮಾಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ತಂತ್ರ ಮಾಡಿದ್ದಾರೆ. ಹೀಗಾಗಿ ಸಂಪುಟದಿಂದ ಯಾರನ್ನ ಬಿಡುಬೇಕು. ಸಂಪುಟಕ್ಕೆ ಯಾರನ್ನ ತೆಗೆದುಕೊಳ್ಳಬೇಕು. ಯಾರನ್ನ ಸಂಪುಟದಲ್ಲಿ ಉಳಿಸಿ ಕೊಳ್ಳಬೇಕೆನ್ನುವುದನ್ನ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಅನಿಲ್ ದೇಶಮುಖ್‍ರನ್ನು ಸಿಬಿಐ ವಶಕ್ಕೆಮುಸ್ಲಿಂರಿಗೆ ಆರ್ಥಿಕ ಬಹಿಷ್ಕಾರ ವಿಚಾರಕ್ಕೆ, ನಮ್ಮ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಇದರಲ್ಲಿ ಭಾಗವಹಿಸಿಲ್ಲ. ಈ ವಿಚಾರದ ಬಗ್ಗೆ ಚರ್ಚೆ ಆಗಿ ನಮ್ಮ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರ್ತೇವೆ. ಹಿಂದೂ ಸಂಘಟನೆಗಳು ಆರ್ಥಿಕ ಬಹಿಷ್ಕಾರ ಮಾಡುತ್ತಿರುವ ಬಗ್ಗೆ ಮಾಧ್ಯಮದಲ್ಲಿ ನೋಡಿರುವೆ. ನೂರರಷ್ಟು ಶಾಂತಿ ಕಾಪಾಡುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ನಮ್ಮ ಗೃಹ ಸಚಿವರು ಸಶಕ್ತರು ಇದ್ದಾರೆ ಎಂದರು.Sign in to your account
Username or Email Address


Password

 Remember Me


