ಹುಬ್ಬಳ್ಳಿ: ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ ಘಟನೆ ಹುಬ್ಬಳ್ಳಿಯ ಶಿರುಗುಪ್ಪಿ ಬಳಿ  ನಡೆದಿದೆ.ಹುಬ್ಬಳ್ಳಿಯ ಶಿರುಗುಪ್ಪಿ ಬಳಿ ಈ ಘಟನೆ ನಡೆದಿದೆ. ಹೈದರಾಬಾದ್‍ನಿಂದ ಹುಬ್ಬಳ್ಳಿಗೆ ಬಸ್ ಬರುತ್ತಿತ್ತು. ಮತ್ತೊಂದು ಕಡೆ ಹುಬ್ಬಳ್ಳಿಯಿಂದ ಹಂಪಿ ಕಡೆಗೆ ಕಾರು ಹೊರಟಿತ್ತು. ಈ ವೇಳೆ ಮುಖಾಮುಖಿ ಡಿಕ್ಕಿಯಾಗಿ ಕಾರಿನ ಚಾಲಕ ಸೇರಿ ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಇದನ್ನೂ ಓದಿ: ಅಬಕಾರಿ ಇಲಾಖೆಯ ನ್ಯೂ ರೂಲ್ಸ್ – ತಮಗಿಷ್ಟವಾದ ಬ್ರಾಂಡ್ ಮದ್ಯ ಸಿಗುತ್ತಿಲ್ಲವೆಂದು ರೊಚ್ಚಿಗೆದ್ದ ಮದ್ಯಪ್ರಿಯರುಇನ್ನೂ ಮೂರ್ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿವೆ. ಗುಜರಾತ್ ಪಾಸಿಂಗ್ ಹೊಂದಿರುವ ಕಾರಿನಲ್ಲಿ ಒಟ್ಟು ಏಳು ಜನ ಹಂಪಿಗೆ ಪ್ರವಾಸ ಹೊರಟಿದ್ದರು ಎನ್ನಲಾಗಿದೆ. ಇನ್ನೂ ಅಪಘಾತಕ್ಕೆ ಖಾಸಗಿ ಬಸ್ ಚಾಲಕ ರಾಂಗ್ ರೂಟ್‍ನಲ್ಲಿ ಬಂದಿರುವುದೆ ಕಾರಣ ಎನ್ನಲಾಗುತ್ತಿದೆ. ಗಾಯಳುಗಳನ್ನು ಹುಬ್ಬಳ್ಳಿಯ ಕಿಮ್ಸ್‍ಗೆ ರವಾನೆ ಮಾಡಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗೆ ಒತ್ತು: ಕೆ.ಗೋಪಾಲಯ್ಯSign in to your account
Username or Email Address


Password

 Remember Me


