ಬೆಂಗಳೂರು: ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರದಿಂದ ಒಂದೊಂದು ರೂಪ ಪಡೆದುಕೊಳ್ಳುತ್ತಿದೆ. ಪೊಲೀಸ್ ಅಧಿಕಾರಿಗಳು ಒಂದು ಹೇಳಿದರೆ ಗೃಹ ಮಂತ್ರಿ ಬೇರೆ ಹೇಳಿಕೆ ಕೊಡುತ್ತಿದ್ದಾರೆ. ಈ ನಡುವೆ ಮಾಜಿ ಸಚಿವ ಜಮೀರ್ ಅಹ್ಮದ್ ಚಂದ್ರು ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಕೊಟ್ಟಿದ್ದಾರೆ.ಚಂದ್ರು ನಿವಾಸಕ್ಕೆ ತೆರಳಿದ ಜಮೀರ್ ಅಹ್ಮದ್ ಅವರ ಅಜ್ಜಿಗೆ ಸಮಾಧಾನ ಮಾಡಿದ್ದಾರೆ. ಈ ವೇಳೆ ಅವರಿಗೆ 2 ಲಕ್ಷ ರೂ. ಪರಿಹಾರ ನೀಡಿದ್ದು, ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಅವರು, ಚಿಕನ್ ರೋಲ್ ತಿನ್ನಬೇಕು ಎಂದು ಹೊರಗಡೆ ಹೋದಾಗ ಗಲಾಟೆಯಾಗಿದೆ. ಚಾಕುವಿನಲ್ಲಿ ಚುಚ್ಚಿದ್ದಾರೆ. ಫುಟ್‍ಪಾತ್‍ನಲ್ಲಿ ಜೀವನ ಮಾಡ್ಕೊಂಡು ಪಾಪ ಅವರ ಅಜ್ಜಿ ಅವನನ್ನು ಸಾಕಿದ್ದಾರೆ. ನಾನು 2 ಲಕ್ಷ ಪರಿಹಾರ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.ಆರಗ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟ ಅವರು, ಹೋಂ ಮಿನಿಸ್ಟರ್ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಗಾಡಿ ಆಕ್ಸಿಡೆಂಟ್ ನಡೆದ ಮೇಲೆ ವಾಗ್ವಾದ ನಡೆದಿದೆ ಎಂದು ಉತ್ತರಿಸಿದ್ದಾರೆ.Sign in to your account
Username or Email Address


Password

 Remember Me


