ದಾವಣಗೆರೆ: ನಗರದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಶಿಶು ಎರಡೇ ಗಂಟೆಯಲ್ಲಿ ನಾಪತ್ತೆಯಾಗಿತ್ತು. ಆದರೆ 21 ದಿನಗಳ ಬಳಿಕ ನಗರದ ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆಯಾಗಿದೆ. ನವಜಾತ ಶಿಶುವನ್ನು ಕಳುವು ಮಾಡಿದ ಮಹಿಳೆ ಬಸ್ ನಿಲ್ದಾಣದಲ್ಲಿ ಕೂತಿದ್ದ ಅಜ್ಜಿ ಕೈಗೆ ಮಗು ಕೊಟ್ಟು ಕಳೆದ ದಿನ ನಾಪತ್ತೆಯಾಗಿದ್ದಾಳೆ.ವಿಜಯನಗರ ಜಿಲ್ಲೆಯ ಹರಪನಹಳ್ಳಿ ಮೂಲದ ಇಸ್ಮಾಯಿಲ್ ಜಬೀವುಲ್ಲಾ ಹಾಗೂ ಉಮೇಸಲ್ಮಾ ದಂಪತಿಗೆ ಸೇರಿದ ಗಂಡು ಮಗು ಕಳ್ಳತನವಾಗಿತ್ತು. ಮಗು ಇಸ್ಮಾಯಿಲ್ ಜಬೀವುಲ್ಲಾ ಹಾಗೂ ಉಮೇ ಸಲ್ಮಾ ದಂಪತಿಗೆ ಸೇರಿದ್ದ ಎಂದು ಪರಿಶೀಲನೆ ನಡೆಸಲು ಪೊಲೀಸರು ಡಿಎನ್‍ಎ ಪರೀಕ್ಷೆಗೆ ಮುಂದಾಗಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಪೊಲೀಸರು ಮಗುವನ್ನ ಪೋಷಕರಿಗೆ ಹಸ್ತಾಂತರ ಮಾಡಲಿದ್ದಾರೆ. ಇದನ್ನೂ ಓದಿ: ಚಂದ್ರು ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಕೊಟ್ಟ ಜಮೀರ್‌ಏನಿದು ಘಟನೆ?
ಮಾರ್ಚ್ 16 ರಂದು ದಾವಣಗೆರೆ ನಗರದ ಚಾಮರಾಜಪೇಟೆಯ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಅಪರಿಚಿತ ಮಹಿಳೆಯೊಬ್ಬಳು ಮಗು ಜನಿಸಿದ ಎರಡೇ ಗಂಟೆಗೆ ಆಸ್ಪತ್ರೆಯಿಂದ ಮಗುವನ್ನು ತೆಗೆದುಕೊಂಡು ಹೋಗಿದ್ದಾಳೆ. ಆದರೆ ದಾವಣಗೆರೆ ನಗರದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪಕ್ಕದಲ್ಲಿ ಕುಳಿತ ವೃದ್ಧೆ ಕೈಗೆ ಮಗುಕೊಟ್ಟು ಪರಾರಿಯಾಗಿದ್ದಾಳೆ.ಮಗುಬಿಟ್ಟು ಹೋದ ವಿಚಾರ ಪೊಲೀಸ್ ಗಮನಕ್ಕೆ ಬಂದ ತಕ್ಷಣ ಮಹಿಳಾ ಠಾಣೆಯ ಪೊಲೀಸರು ಮಗು ಪತ್ತೆ ಮಾಡಿ ರಕ್ಷಣೆ ಮಾಡಿದ್ದಾರೆ. ಆದರೆ ಮಗು ಇಸ್ಮಾಯಿಲ್ ಜಬೀವುಲ್ಲಾ ಹಾಗೂ ಉಮೇಸಲ್ಮಾ ದಂಪತಿಗೆ ಸೇರಿದ್ದೆ ಎನ್ನುವುದಕ್ಕೆ ಡಿಎನ್‍ಎ ಪರೀಕ್ಷೆ ನಡೆಸಿ ನಂತರ ಮಗುವನ್ನು ತಾಯಿಗೆ ಹಸ್ತಾಂತರ ಮಾಡ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:  ಗರ್ಲ್‍ಫ್ರೆಂಡ್, ಮಾಜಿ ಪತ್ನಿ ಜೊತೆ ಗೋವಾದಲ್ಲಿ ಪಾರ್ಟಿ ಮಾಡಿದ ಹೃತಿಕ್ ರೋಷನ್ಅಲ್ಲದೆ ದಾವಣಗೆರೆ ಜಿಲ್ಲಾಸ್ಪತ್ರೆಯ ಮಕ್ಕಳ ತೀವ್ರ ನಿಘಾ ಘಟಕದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಕಳುವಾಗಿದ್ದಕ್ಕೆ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.Sign in to your account
Username or Email Address


Password

 Remember Me


