ಚಿತ್ರದುರ್ಗ: ಗ್ಯಾರೇಜ್‌ನಲ್ಲಿ ಆಕಸ್ಮಿಕ ಬೆಂಕಿಯಿಂದಾಗಿ ಮೂರು ಲಾರಿಗಳು ಆಹುತಿಯಾಗಿರುವ ದುರ್ಘಟನೆ ಚಿತ್ರದುರ್ಗದಲ್ಲಿ  ನಡೆದಿದೆ.ಗ್ಯಾರೇಜ್‍ನಲ್ಲಿ ರಿಪೇರಿಗಾಗಿ ನಿಲ್ಲಿಸಲಾಗಿದ್ದ ಲಾರಿಗಳ ಟೈರ್‌ಗಳಿಗೆ ಬೆಂಕಿ ತಗುಲಿದ ಪರಿಣಾಮ ಲಾರಿಗಳು ಧಗ ಧಗ ಹೊತ್ತಿ ಉರಿದು ಕ್ಷಣಮಾತ್ರದಲ್ಲಿ ಸುಟ್ಟು ಕರಕಲಾಗಿವೆ. ಚಿತ್ರದುರ್ಗದಿಂದ ದಾವಣಗೆರೆಗೆ ತೆರಳುವ ಮಧ್ಯೆ ಮುರುಘಾ ಮಠದ ಬಳಿ ದುರ್ಘಟನೆ ನಡೆದಿದೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್ ಹೆಸರು ಹೇಳಿ ಭವಿಷ್ಯ ನುಡಿದ ಮಕಣಾಪುರದ ದೈವಬೆಂಕಿ ನಂದಿಸಲು ಅಗ್ನಿಶಾಮಕದಳ ಸಿಬ್ಬಂದಿ ಹರಸಾಹಸ ಪಟ್ಟಿದ್ದು, ಅವರ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಈ ದುರಂತ ನಡೆದ ರಸ್ತೆ ಬದಿಯೇ ಸಾಲಾಗಿ  ನೂರಾರು ಲಾರಿಗಳು, ಗೂಡಂಗಡಿಗಳು ಕೂಡ ನಿಂತಿದ್ದವು.ನಸುಕಿನ ಜಾವ ಸುಮಾರು 2 ಗಂಟೆ ಸಮಯದಲ್ಲಿ ಆಕಸ್ಮಿಕವಾಗಿ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ. ಯಾರೋ ಕಿಡಿಗೇಡಿಗಳು ಲಾರಿಗಳ ಟೈರ್‌ಗೆ ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಖಾದಿ ತೊರೆದು ಕಾವಿ ತೊಡಲಿರುವ ಬಿಎಸ್‍ವೈ ಆಪ್ತ ಪುಟ್ಟಸ್ವಾಮಿ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.Sign in to your account
Username or Email Address


Password

 Remember Me


