ಕೋಲಾರ: ಹಿಂದೂ ರುದ್ರ ಭೂಮಿಯಲ್ಲಿ ಕಿಡಿಗೇಡಿಗಳು ವಿಕೃತಿ ಮೆರೆದಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆ ಮುಳಬಾಗಿಲು ನಗರದ ಗಣಿಗುಂಟೆ ಪಾಳ್ಯದಲ್ಲಿರುವ ಬಲಿಜ ಸ್ಮಶಾನದಲ್ಲಿ ಕೆಲ ಕಿಡಿಗೇಡಿಗಳು ಸಮಾಧಿಗಳ ಮೇಲೆ ಬಣ್ಣ ಬಳಿದು ಕೃತ್ಯವೆಸಗಿದ್ದಾರೆ.ಸ್ಮಶಾನದಲ್ಲಿ 200 ಕ್ಕೂ ಹೆಚ್ಚು ಸಮಾಧಿಗಳಿದ್ದು, ಈ ಪೈಕಿ 30 ಕ್ಕೂ ಹೆಚ್ಚು ಸಮಾಧಿಗಳ ನಾಮಫಲಕ ಹಾಗೂ ಭಾವಚಿತ್ರಗಳ ಮೇಲೆ ಕಿಡಿಗೇಡಿಗಳು ಎಸ್‌ಡಿಪಿಐ ಎಂದು ಬರೆದು ವಿಕೃತಿ ಮೆರೆದಿದ್ದಾರೆ. ಸಮಾಧಿಗಳನ್ನು ವಿರೂಪಗೊಳಿಸಿ, ಪೂರ್ವಜರಿಗೆ ಅಗೌರವ ತೋರಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಇದನ್ನೂ ಓದಿ: ನೇಗಿಲಿಗೆ ಕುದುರೆ ಕಟ್ಟಿ ಉಳುಮೆ ಮಾಡಿದ ರೈತಘಟನೆ ಬಗ್ಗೆ ಶ್ರೀ ರಾಮ ಯುವಕ ರೈತ ಸಂಘ ಪೊಲೀಸ್ ಠಾಣೆಗೆ ದೂರು ನೀಡಿದ್ದು ಕೂಡಲೇ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಮುಳಬಾಗಿಲು ನಗರ ಪೊಲೀಸ್ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಭಟ್ ಆಸ್ಪತ್ರೆಗೆ ದಾಖಲುSign in to your account
Username or Email Address


Password

 Remember Me


