ಶಿವರಾಜ್ ಕುಮಾರ್ ನಟನೆಯ ಮಾದೇಶ ಸಿನಿಮಾದ ಚಿಕ್ಕದೊಂದು ಪಾತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದವರು ನೀನಾಸಂ ಸತೀಶ್. ನೀನಾಸಂನಲ್ಲಿ ನಾಟಕ ತರಬೇತಿ ಪಡೆದ ನಂತರ ಕಿರುತೆರೆಯಲ್ಲೂ ಕೆಲವು ಧಾರಾವಾಹಿಗಳಲ್ಲಿ ನಟಿಸಿದರು. ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು 2008ರಲ್ಲಿ ತೆರೆಕಂಡ ಮಾದೇಶ ಚಿತ್ರದ ಮೂಲಕ ಎನ್ನುವುದು ವಿಶೇಷ.ಸಿನಿಮಾ ರಂಗಕ್ಕೆ ಮತ್ತು ಕಿರುತೆರೆಗೆ ಪ್ರವೇಶ ಮಾಡಲು ಫೋಟೋ ಶೂಟ್ ಮಾಡಿಸಿ ಅಂತ ಗೆಳೆಯರು ಕೊಟ್ಟ ಸಲಹೆ ಮೇರೆಗೆ ಸಿನಿಮಾ  ಫೋಟೋ ಜರ್ನಲಿಸ್ಟ್ ಆದ ಡಿ.ಸಿ ನಾಗೇಶ್ ಅವರು ಮೊದಲ ಬಾರಿಗೆ ಸತೀಶ್ ಅವರ ಫೊಟೋ ಶೂಟ್ ಮಾಡಿ, ನಾನಾ ಬಗೆಯ  ಛಾಯಾಚಿತ್ರಗಳನ್ನು ಸೆರೆಹಿಡಿದು ಕೊಟ್ಟರು. ಈ ಫೋಟೋ ಶೂಟ್ ಗಾಗಿಯೇ ಸತೀಶ್ ಹಲವು ಬಗೆಯ ಕಾಸ್ಟ್ಯೂಮ್ ಕೂಡ ಕೊಂಡಿದ್ದರು. ಇದನ್ನೂ ಓದಿ: ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾಮಾದೇಶ ನಂತರ ಮನಸಾರೆ, ಪಂಚರಂಗಿ, ಪರಮಾತ್ಮ, ಲೈಫು ಇಷ್ಟೆನೆ, ಪುಟ್ಟಕ್ಕನ ಹೈವೇ ಹೀಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್, ದಿಗಂತ್, ಶ್ರುತಿ ಸೇರಿದಂತೆ ಹಲವು ಕಲಾವಿದರ ಜತೆ ಹೀರೋ ಆಗುವ ಮುನ್ನ ನಟಿಸಿದ್ದಾರೆ. ಆದರೆ, ಸತೀಶ್ ಅವರು ಹೀರೋ ಆಗಿ ಲಾಂಚ್ ಆಗಿದ್ದು ಯೋಗರಾಜ್ ಭಟ್ ನಿರ್ದೇಶನದ ‘ಡ್ರಾಮಾ’ ಸಿನಿಮಾದ ಮೂಲಕ. ಈ ಚಿತ್ರದಲ್ಲಿ ಯಶ್ ಮತ್ತು ಸತೀಶ್ ಒಟ್ಟಿಗೆ ನಟಿಸಿ, ಚಿತ್ರದ ಗೆಲುವಿಗೆ ಕಾರಣರಾದರು.ನೀನಾಸಂ ಸತೀಶ್ ಅವರು ಸೋಲೋ ಹೀರೋ ಅಂತ ಆಗಿದ್ದು ಪವನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದ ಲೂಸಿಯಾ ಚಿತ್ರದ ಮೂಲಕ. ಈ ಚಿತ್ರದ ಪಾತ್ರಕ್ಕಾಗಿ ಅವರು ವಿವಿಧ ಸಿನಿಮಾ ರಂಗದಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂತು. ಈ ಸಿನಿಮಾಗಾಗಿ ಹತ್ತು ಹಲವು ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದವು. ವೃತ್ತಿ ಬದುಕಿಗೆ ತಿರುವು ನೀಡಿದಂತಹ ಸಿನಿಮಾವಿದು. ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿಅಲ್ಲಿಂದ ಮತ್ತಷ್ಟು ಸಿನಿಮಾಗಳಲ್ಲಿ ಸತೀಶ್ ನಾಯಕನಾಗಿ ನಟಿಸಿದರು. ಕ್ವಾಟ್ಲೆ ಸತೀಶ್, ಲವ್ ಇನ್ ಮಂಡ್ಯ, ರಾಕೆಟ್, ಬ್ಯುಟಿಫುಲ್ ಮನಸ್ಸುಗಳು, ಟೈಗರ್ ಗಲ್ಲಿ ಹೀಗೆ ಒಂದರ ಹಿಂದೆ ಒಂದರಂತೆ ಸಿನಿಮಾ ಮಾಡುತ್ತಾ ಬಂದರು. ಅಯೋಗ್ಯ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆಯುವ ಮೂಲಕ ಸತೀಶ್ ಸ್ಟಾರ್ ನಟರಾಗಿ ಭಡ್ತಿ ಪಡೆದರು. ಅಲ್ಲಿಂದ ಸತೀಶ್ ದುನಿಯಾನೇ ಬದಲಾಯಿತು. ನಿರ್ಮಾಪಕರಾದರು, ಆಡಿಯೋ ಕಂಪೆನಿ ಮಾಲೀಕರು ಆದರು. ಇವರ ನಟನೆಗಾಗಿ ಸೈಮಾ, ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಇದನ್ನೂ ಓದಿ: ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್ಸದ್ಯ ಐದಾರು ಚಿತ್ರಗಳಲ್ಲಿ ನಟಿಸುತ್ತಿರುವ ಸತೀಶ್ ಅವರ ಬದುಕಿಗೆ ಈ ಫೋಟೋ ಶೂಟ್ ಏನೆಲ್ಲ ತಿರುವು ನೀಡಿದೆ. ಈ ಸಂದರ್ಭದಲ್ಲಿ ಸತೀಶ್ ಆಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಮತ್ತು ಫೊಟೋ ಶೂಟ್ ಮಾಡಿದ ನಾಗೇಶ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.Sign in to your account
Username or Email Address


Password

 Remember Me


