ಗೂಳಿಹಟ್ಟಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ ಮಮತಾ ರಾವುತ್ ಮೇ 11 ರಂದು ಡಾ.ಸುರೇಶ್ ಕೋಟಿಯಾನ್ ಜತೆ ಸಪ್ತಪದಿ ತುಳಿಯಲಿದ್ದಾರೆ. ನಿನ್ನೆಯಷ್ಟೇ ಈ ಜೋಡಿಯ ನಿಶ್ಚಿತಾರ್ಥ ನಡೆದಿದದ್ದು ಕುಟುಂಬದ ನಿಶ್ಚಿಯದಂತೆ ಮೇ 10 ಮತ್ತು 11 ರಂದು ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲಿದೆ. ಇದನ್ನೂ ಓದಿ : ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿದ ಮಮತಾ, ‘ಇದೊಂದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಡಾ.ಸುರೇಶ್ ಕೋಟಿಯಾನ್ ಕುಟುಂಬ ಮತ್ತು ನಮ್ಮ ಕುಟುಂಬ ಸೇರಿ ಈ ಮದುವೆಯನ್ನು ನಿಶ್ಚಿಯ ಮಾಡಿದೆ. ಕುಟುಂಬದ ನಿರ್ಧಾರದಂತೆ ನಾವಿಬ್ಬರೂ ಹೊಸ ಬದುಕಿಗೆ ಕಾಲಿಡುತ್ತಿದ್ದೇವೆ. ಒಳ್ಳೆಯ ಹುಡುಗ, ಸಮಾಜದ ಬಗ್ಗೆ ಅವರಿಗೆ ಕಾಳಜಿ ಇದೆ. ಇವೆಲ್ಲ ಕಾರಣಕ್ಕೆ ಸುರೇಶ್ ನನಗೆ ಇಷ್ಟವಾದರು’ ಎಂದರು. ಇದನ್ನೂ ಓದಿ: ರಿಯಲ್ ಸ್ಟಾರ್ ಉಪೇಂದ್ರ ಅಂದರೆ ಸುಮ್ನೇನಾ? ಟಾಲಿವುಡ್ ಸೂಪರ್ ಸ್ಟಾರ್ ಗೆ ಅಣ್ಣನಾದ ಉಪ್ಪಿಡಾ. ಸುರೇಶ್ ಮಂಗಳೂರು ಮೂಲದವರು. ಕರ್ನಾಟಕ ಹೆಲ್ತ್ ಡಿಪಾರ್ಟಮೆಂಟ್ ನಲ್ಲಿ ಅವರು ಮನಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಕೆನಡಾದಲ್ಲಿ ಪಿಎಚ್ಡಿ ಮಾಡಿರುವ ಸುರೇಶ್, ಎರಡೆರಡು ಸಂಶೋಧನಾ ಪ್ರಬಂಧ ಮಂಡಿಸಿರುವುದು ವಿಶೇಷ. ಈ ಜೋಡಿಯ ವಿವಾಹವು ಬೆಂಗಳೂರಿನಲ್ಲಿ ನಡೆಯಲಿದ್ದು, ಸಿನಿಮಾ ರಂಗದ ಅನೇಕ ಗಣ್ಯರು ವಿವಾಹ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿಮಮತಾ ಸಹ ನಟಿಯಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟವರು. ಕಾಮಿಡಿ ಪಾತ್ರಗಳಲ್ಲಿ ಮಿಂಚಿದರು. ಆನಂತರ ನಾಯಕಿಯಾಗಿ ಅನೇಕ ಚಿತ್ರಗಳನ್ನು ಮಾಡಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ತೆಲುಗು ಮತ್ತು ತಮಿಳಿನಲ್ಲೂ ಇವರು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.Sign in to your account
Username or Email Address


Password

 Remember Me


