ಅಮರಾವತಿ: ಮೈಸೂರಿನಿಂದ ಆಂಧ್ರಪ್ರದೇಶಗೆ ಬಂದ ರಾಯಲ್ ಎನ್‍ಫೀಲ್ಡ್ ಬೈಕ್ ಸ್ಫೋಟಗೊಂಡ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಘಟನೆಗೆ ಸಂಬಂಧಿಸಿದ ವೀಡಿಯೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬುಲೆಟ್ ಎಂದೇ ಪ್ರಸಿದ್ಧವಾಗಿರುವ ರಾಯಲ್ ಎನ್ ಫೀಲ್ಡ್ ಬೈಕ್ ಮೈಸೂರಿನ ರವಿಚಂದ್ರನ್ ಖರೀದಿಸಿದ್ದಾನೆ. ಹೊಸ ಬೈಕ್ ಖರೀದಿಸಿದ ನಂತರ ರವಿಚಂದ್ರನ್ ಮೈಸೂರಿನಿಂದ ಆಂಧ್ರದ ಕುಂದಕಲ್ಲಿನಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಬೈಕ್‍ನಲ್ಲೇ ಬಂದಿದ್ದಾನೆ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು?https://twitter.com/AlluHarish17/status/1510463748498022400?ref_src=twsrc%5Etfw%7Ctwcamp%5Etweetembed%7Ctwterm%5E1510463748498022400%7Ctwgr%5E%7Ctwcon%5Es1_&ref_url=https%3A%2F%2Fpipanews.com%2Froyal-enfield-bike-blast-in-andhra-video-became-viral-in-social-media%2Fಮೈಸೂರಿನಿಂದ ಆಂಧ್ರಗೆ ಬೈಕ್ ಎಲ್ಲಿಯೂ ನಿಲ್ಲಿಸದೇ 387 ಕಿಲೋಮೀಟರ್‍ವರೆಗೂ ಕ್ರಮಿಸಿದ್ದಾನೆ. ಆಂಜನೇಯ ದೇಗುಲಕ್ಕೆ ಪೂಜೆಗೆಂದು ಬೈಕ್ ಪಾರ್ಕ್ ಮಾಡಿ ಒಳಗೆ ಹೋಗಿದ್ದಾನೆ. ಇತ್ತ ಬೈಕ್ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡಿದ್ದು, ಬೆಂಕಿ ಹೊತ್ತಿಕೊಂಡಿದೆ.ಈ ಘಟನೆಯಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಬೈಕ್ ಸ್ಫೋಟಗೊಂಡಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: SSLC ಪರೀಕ್ಷೆ ವೇಳೆ ಜೇನುನೊಣಗಳ ದಾಳಿ – ಐವರಿಗೆ ಗಾಂಭೀರ ಗಾಯ Sign in to your account
Username or Email Address


Password

 Remember Me


