ಚಿತ್ರದುರ್ಗ: ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರಲ್ಲಿ ನಾನು ಮೊದಲಿಗ ಎಂದು ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ.ಸಿಎಂ ಬೊಮ್ಮಾಯಿ ದೆಹಲಿಗೆ ತೆರಳುವ ಬೆನ್ನಲ್ಲೆ ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಉತ್ಸಾಹಗರಿಗೆದರಿದೆ. ಅದರಲ್ಲೂ ಸಚಿವ ಸಂಪುಟ ಪುನರ್ ರಚನೆ/ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಜಿ.ಹೆಚ್ ತಿಪ್ಪಾರೆಡ್ಡಿ ಅವರು, ಚುನಾವಣಾ ದೃಷ್ಟಿಯಿಂದ ಸಂಪುಟ ಪುನರ್ ರಚನೆಯಾಗುವ ನಿರೀಕ್ಷೆಯಿದೆ. ರಾಜ್ಯಕ್ಕೆ ಗೃಹಸಚಿವ ಅಮಿತ್ ಶಾ ಬಂದು ಹೋದ ಮೇಲೆ ಇವೆಲ್ಲಾ ಚರ್ಚೆಗಳಾಗಿರುವ ಮಾಹಿತಿಯಿದೆ. ಹಾಗೆಯೇ ಹೊಸಪೇಟೆಯಲ್ಲಿ ನಡೆಯುವ ಕಾರ್ಯಕಾರಣಿ ಸಭೆ ಬಳಿಕ ಚರ್ಚೆಯಾಗಲಿದೆ ಎಂದಿದ್ದಾರೆ.ಏಪ್ರಿಲ್ 16-17 ರಂದು ಹೊಸಪೇಟೆಯಲ್ಲಿ ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದ್ದು, ನಿಮಗೆ ಸಚಿವ ಸ್ಥಾನ ಗ್ಯಾರಂಟಿ ಅಂತ ನಮ್ಮ ಶಾಸಕ ಮಿತ್ರರು ಹೇಳುತ್ತಿದ್ದಾರೆ. ಆದರೆ ನಮಗೆ ಸಚಿವ ಸ್ಥಾನ ನೀಡುವುದು ಸಿಎಂ ಹಾಗೂ ಕೇಂದ್ರದ ನಾಯಕರಿಗೆ ಬಿಟ್ಟ ವಿಚಾರವಾಗಿದೆ. ಬಹಳ ಜನ ನೀವು ಸಚಿವರಾಗುತ್ತೀರಾ ಅಂತ ಅಪೇಕ್ಷೆ ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ: ಬಿರ್ಭೂಮ್ ಹಿಂಸಾಚಾರ – ಮೃತರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ಕೊಟ್ಟ ಮಮತಾ ಬ್ಯಾನರ್ಜಿಚುನಾವಣಾ ದೃಷ್ಟಿಯಿಂದ ನಮ್ಮ ಜಿಲ್ಲೆಗೆ ಸಚಿವ ಸ್ಥಾನ ಬೇಕಾಗಿದೆ. ಆದರೂ ಅದರ ಬಗ್ಗೆ ನಾನು ಈವಾಗ ಕಾಮೆಂಟ್ ಮಾಡುವುದು ಸರಿಯಲ್ಲ. ಜೊತೆಗೆ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಮತದಾರರಿಗೆ ಪಕ್ಷದ ಸಂದೇಶ ಹೋಗಬೇಕು. ಆ ದೃಷ್ಟಿಯಿಂದ ಪಕ್ಷದ ಹಿರಿಯರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಾವಿನಹಣ್ಣಿನ ಮಾರ್ಕೆಟ್ ನಮ್ಮದಾಗಬೇಕು – ಹಾಸನದಲ್ಲಿ ಹೊಸ ಅಭಿಯಾನ






 Advertisement 




Sign in to your account
Username or Email Address


Password

 Remember Me


