ಬೆಂಗಳೂರು: ಜಿಮ್ ಮಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದ ಮಹಿಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಸಾವಿಗೆ ಕಾರಣ ಬಯಲಾಗಿದೆ.ಮೃತ ದುರ್ದೈವಿ ವಿನಯಾ ಕುಮಾರಿ(47) ಮೆದುಳಿನ ರಕ್ತನಾಳ ಸಿಡಿದು ಕೋಮಾ ತಲುಪಿ ಸಾವನ್ನಪ್ಪಿದ್ದಾರೆ ಅಂತ ಮರಣೋತ್ತರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಮಲ್ಲೇಶ್ ಪಾಳ್ಯದಲ್ಲಿ ಕಳೆದ ಮಾರ್ಚ್ 27ರಂದು ಜಿಮ್ ಮಾಡುತ್ತಲೇ ಕುಸಿದು ಬಿದ್ದು ವಿನಯಾ ಸಾವನ್ನಪ್ಪಿದ್ರು. ಇದನ್ನೂ ಓದಿ: ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ವೇಳೆ ಅವಘಡ- ವರ ಸಾವು, ವಧು ಗಂಭೀರವಿನಯಾ ಅವರಿಗೆ ಮದುವೆ ಆಗಿರಲಿಲ್ಲ. ಜಿಮ್, ಡ್ಯಾನ್ಸ್ ಮಾಡ್ಕೊಂಡಿದ್ದರು. ಮಾರ್ಚ್ 27ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಮಲ್ಲೇಶ್ ಪಾಳ್ಯದಲ್ಲಿರುವ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಕುಸಿದು ಬಿದ್ದಿದ್ದರು. ತಕ್ಷಣ ಅಲ್ಲಿದ್ದ ಸ್ಥಳೀಯರು ವಿನಯಾ ಅವರನ್ನು ಆಸ್ಪತ್ರೆ ಸಾಗಿಸಿದ್ದಾರೆ. ಆದರೆ ಅವರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದರು.ಘಟನೆ ಸಂಬಂಧಿಸಿ ಬೈಯ್ಯಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಗಿಫ್ಟ್ ಕೊಟ್ಟಿದ್ದ ಮೊಬೈಲ್ ವಾಪಸ್ ಕೊಡದ ಪ್ರೇಯಸಿಯ ಕತ್ತು ಸೀಳಿ ಕೊಲೆSign in to your account
Username or Email Address


Password

 Remember Me


