ರಾಮನಗರ: ಸರ್ಕಾರ ಉತ್ತಮ ಆಡಳಿತ ನಡೆಸಲಿ ಎಂದು ಜವಾಬ್ದಾರಿ ಕೊಟ್ಟಿದೆ. ಅದಕ್ಕೆ ಯೋಗ್ಯತೆ ಇಲ್ಲ ಅಂದರೆ ಎಲ್ಲರೂ ಸೇರಿ ಇದನ್ನು ಬಿಟ್ಟು ಚುನಾವಣೆಗೆ ಹೋಗುವುದು ವಾಸಿ ಎಂದು ಸಚಿವ ಕೆ.ಎನ್.ರಾಜಣ್ಣಗೆ ಮಾಜಿ ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದರು.ಲೋಕಸಭಾ ಚುನಾವಣೆ ಬಳಿಕ ಡಿಕೆಶಿ ಅಧ್ಯಕ್ಷ ಸ್ಥಾನ ಬಿಡಬೇಕು. ಈ ಬಗ್ಗೆ ಹೈಕಮಾಂಡ್ ಹೇಳಿತ್ತು ಎಂಬ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿದ ಡಿ.ಕೆ.ಸುರೇಶ್, ಡಿಕೆಶಿ ಅವರಿಗೆ ಜವಾಬ್ದಾರಿ ಕೊಟ್ಟಿರುವುದು ಪಕ್ಷದ ವರಿಷ್ಠರು. ಶಿವಕುಮಾರ್ ವರಿಷ್ಠರ ಮುಂದೆ ಎಲ್ಲವನ್ನೂ ತಿಳಿಸಿದ್ದಾರೆ. ವರಿಷ್ಠರ ಬಳಿ ನೀಡಿರುವ ಮಾಹಿತಿಯನ್ನ ಬೇರೆಯವರಿಗೆ ತಿಳಿಸಲು ಸಾಧ್ಯವಿಲ್ಲ. ಯಾವ ಹುದ್ದೆ ಕೂಡ ಶಾಶ್ವತ ಅಲ್ಲ. ಯಾವ ನಾಯಕರು ಕೂಡಾ ಶಾಶ್ವತ ಅಲ್ಲ. ಹೇಳಿಕೆ ಕೊಡುವವರು ಕೂಡ ಹಿಂದೆ ತಿರುಗಿ ಅವರ ಬೆನ್ನು ನೋಡಿಕೊಳ್ಳಬೇಕಾಗುತ್ತದೆ. ಸರ್ಕಾರ ಉತ್ತಮ ಆಡಳಿತ ನಡೆಸಲಿ ಎಂಬ ಜವಾಬ್ದಾರಿ ಕೊಟ್ಟಿದೆ. ಅದಕ್ಕೆ ಯೋಗ್ಯತೆ ಇಲ್ಲ ಅಂದ್ರೆ ಎಲ್ಲರೂ ಸೇರಿ ಇದನ್ನ ಬಿಟ್ಟು ಚುನಾವಣೆಗೆ ಹೋಗುವುದು ವಾಸಿ ಎಂದು ಸಚಿವ ರಾಜಣ್ಣ ವಿರುದ್ಧ ಹರಿಹಾಯ್ದರು.ಡಿಕೆಶಿ ಸಿಎಂ ಆಗಬೇಕು ಎಂಬ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಶಿವಕುಮಾರ್ ಸಿಎಂ ಆಗಬೇಕು ಎಂಬುದು ಸ್ವಾಮೀಜಿಗಳ ಅಭಿಪ್ರಾಯ. ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆ. ಸಿಎಂ ಸ್ಥಾನದ ಬಗ್ಗೆ ತಿರ್ಮಾನ ಮಾಡಬೇಕಾಗಿರೋದು ಪಕ್ಷದ ಹೈಕಮಾಂಡ್. ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಸಿಎಂ ಸ್ಥಾನ ಖಾಲಿಯಾದ ಸಂದರ್ಭದಲ್ಲಿ ಈ ವಿಷಯ ಚರ್ಚೆಗೆ ಬರುತ್ತದೆ ಎಂದರು.ಮೂವರಲ್ಲ 9 ರಿಂದ 10 ಮಂದಿ ಹೆಸರೇಳಿದ್ದೇನೆ. ಅವರೆಲ್ಲರೂ ಡಿಸಿಎಂ ಸ್ಥಾನಕ್ಕೆ ಅರ್ಹರಿದ್ದಾರೆ. ಅವರೆಲ್ಲರನ್ನೂ ಡಿಸಿಎಂ ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ. ಈಗ ಇರುವ 33 ಮಂತ್ರಿಗಳಿಗೂ ಇರುವ ಅಧಿಕಾರ ಡಿಕೆಶಿ ಅವರಿಗೂ ಇದೆ ಎಂದು ತಿಳಿಸಿದರು.ಯಾರೂ ಕೂಡ ಡಿ.ಕೆ.ಶಿವಕುಮಾರ್ ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ಯಾರಾದ್ರೂ ಟಾರ್ಗೆಟ್ ಮಾಡ್ತೇನೆ ಅನ್ನೋದು ಇದ್ರೆ ಅದು ಅವರ ಭ್ರಮೆ. 35 ವರ್ಷಗಳ ಸುದೀರ್ಘ ರಾಜಕಾರಣ ಮೂಲಕ ರಾಜ್ಯದಲ್ಲಿ, ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾರದೋ ಹೆಸರಿನಲ್ಲಿ ರಾಜಕೀಯಕ್ಕೆ ಬಂದವರಲ್ಲ ಡಿ.ಕೆ.ಶಿವಕುಮಾರ್. ಹೋರಾಟದ ಮೂಲಕ ರಾಜಕಾರಣ ಮಾಡಿಕೊಂಡು ಬಂದವರು. ಸದ್ಯ ಪಕ್ಷದ ಅಧ್ಯಕ್ಷ ಹಾಗೂ ಡಿಸಿಎಂ ಆಗಿ ಜನರ ಸೇವೆ ಮಾಡುತ್ತಿದ್ದಾರೆ. ಬೇರೆಯವರು ಅವರವರ ಅಭಿಪ್ರಾಯ ತಿಳಿಸಲು ಅರ್ಹರಿದ್ದಾರೆ. ಡಿಕೆಶಿ ಅವರನ್ನ ಟಾರ್ಗೆಟ್ ಮಾಡಿ ಲೀಡರ್ ಆಗುತ್ತೇನೆ ಎಂದರೆ ಅದು ಅವರ ಭ್ರಮೆ ಆಗತ್ತದೆ ಅಷ್ಟೇ ಎಂದು ರಾಜಣ್ಣಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.ಚನ್ನಪಟ್ಟಣದಲ್ಲಿ ಅನಿವಾರ್ಯತೆ ಬಂದರೆ ಸ್ಪರ್ಧೆ ಬಗ್ಗೆ ಮಾತನಾಡಿದ ಅವರು, ನನ್ನನ್ನು ಜನ ತಿರಸ್ಕಾರ ಮಾಡಿದ್ದಾರೆ. ನಾನು ಸಾಮಾನ್ಯ ಪ್ರಜೆಯಾಗಿ, ಕಾರ್ಯಕರ್ತನಾಗಿ ಇರುತ್ತೇನೆ. ಇದನ್ನ ಬಿಟ್ಟು ನಾನು ಸ್ಪರ್ಧೆ ಮಾಡಲ್ಲ. ಸಮರ್ಥ ಅಭ್ಯರ್ಥಿಯನ್ನೇ ಎದುರಾಳಿಯನ್ನಾಗಿ ಮಾಡುತ್ತೇವೆ. ಪಕ್ಷದ ಕಾರ್ಯಕರ್ತರ ಭಾವನೆ ತಿಳಿಯಲು ಅಧ್ಯಕ್ಷರು ಸಮಿತಿ ರಚಿಸಿದ್ದಾರೆ. ಪಕ್ಷ ಸಂಘಟನೆ ಮಾಡಲು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿ, ಜಿಲ್ಲಾ ನಾಯಕರು ಚುನಾವಣೆ ಮಾಡುವ ಬಗ್ಗೆ ತಿರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.ಚನ್ನಪಟ್ಟಣಕ್ಕೆ ಯಾರು ಮೊದಲು ಬಂದ್ರು ಅನ್ನೋದು ಬೇಡ. ಈಗ ಚನ್ನಪಟ್ಟಣ ಖಾಲಿ ಇದೆ. ಒಂದು ಕಣ್ಣು ರಾಮನಗರದಿಂದ ಹೋಗಾಯ್ತು. ಇನ್ನೊಂದು ಕಣ್ಣು ಚನ್ನಪಟ್ಟಣದಿಂದ ಹೋಗಾಯ್ತು. ಹೀಗಾಗಿ ಅವರ ಹಳೇ ಹೇಳಿಕೆಗಳನ್ನ ಮಾಧ್ಯಮಗಳು ತೋರಿಸಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿಗೆ ಚಾಟಿ ಬೀಸಿದರು.Sign in to your account
Username or Email Address


Password

 Remember Me


