ಪುನೀತ್ ರಾಜ್ ಕುಮಾರ್ ನಿಧನದ ನಂತರ ಅವರು ಮಾಡಬೇಕಿದ್ದ ಹಲವು ಚಿತ್ರಗಳು ಹಾಗೆಯೇ ನಿಂತು ಹೋಗಲಿವೆ ಎನ್ನಲಾಗಿತ್ತು. ಅಲ್ಲದೇ, ಸಂತೋಷ್ ಆನಂದ್ ರಾಮ್ ಜತೆ ಅಪ್ಪು ಮಾಡಬೇಕಿದ್ದ ನಿರೀಕ್ಷಿತ ಚಿತ್ರದ ಬಗ್ಗೆಯೂ ಸಾಕಷ್ಟು ಚರ್ಚೆ ಆಗಿತ್ತು. ಈ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ ಮನವಿಯೊಂದನ್ನು ಮಾಡಿದ್ದರು. ನೀವು ಪುನೀತ್ ರಾಜ್ ಕುಮಾರ್ ಅವರಿಗೆ ಮಾಡಬೇಕಿದ್ದ ಚಿತ್ರವನ್ನು ಯುವರಾಜ ಕುಮಾರ್ ಗಾಗಿ ಮಾಡಬೇಕೆ ಎನ್ನುವುದು ಅವರೆಲ್ಲರ ಒತ್ತಾಸೆಯಾಗಿತ್ತು. ಇದನ್ನೂ ಓದಿ : ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಚಿತ್ರಕ್ಕೆ ಮತ್ತೆರಡು ಪುರಸ್ಕಾರಪುನೀತ್ ಅವರ ಅಭಿಮಾನಿಗಳ ಆಸೆಯನ್ನು ಕೊನೆಗೂ ಸಂತೋಷ್ ಆನಂದ್ ರಾಮ್ ಈಡೇರಿಸಿದ್ದಾರೆ ಎನ್ನಲಾಗುತ್ತಿದೆ. ತಾವು ಅಪ್ಪು ಅವರಿಗಾಗಿ ಮಾಡಿಕೊಂಡಿದ್ದ ಕಥೆಯನ್ನು ಕೊಂಚ ಬದಲಾಯಿಸಿಕೊಂಡು ಯುವರಾಜ್ ಕುಮಾರ್ ಗಾಗಿ ಸಿನಿಮಾ ಮಾಡುತ್ತಿದ್ದಾರಂತೆ. ಈ ಸಿನಿಮಾದ ಅಧಿಕೃತ ಮಾಹಿತಿ ಏ.24 ರಂದು ಹೊರ ಬೀಳಲಿದೆ. ಇದನ್ನೂ ಓದಿ : ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿಏ.24 ಡಾ.ರಾಜ್ ಕುಮಾರ್ ಜನ್ಮದಿನ. ಅಂದು ಸಂತೋಷ್ ಆನಂದ್ ರಾಮ್ ಮತ್ತು ಯುವರಾಜ್ ಕುಮಾರ್ ಕಾಂಬಿನೇಷನ್ ನ ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಚಿತ್ರತಂಡ ಹಂಚಿಕೊಳ್ಳಲಿದೆಯಂತೆ. ಅಂದುಕೊಂಡಂತೆ ಆಗಿದ್ದರೆ, ಯುವರಾಜ್ ಕುಮಾರ್ ರ ಚೊಚ್ಚಲ ಸಿನಿಮಾ ‘ಯುವ ರಣಧೀರ ಕಂಠೀರವ’  ಇಷ್ಟೊತ್ತಿಗೆ ಸಿದ್ಧವಾಗಬೇಕಿತ್ತು. ಅದೇ ಯುವ ರಾಜ್ ಕುಮಾರ್ ಅವರ ಮೊದಲ ಸಿನಿಮಾನೂ ಆಗಬೇಕಿತ್ತು. ಆದರೆ, ಸದ್ಯ ಆ ಸಿನಿಮಾದ ಕೆಲಸಗಳನ್ನು ನಿಲ್ಲಿಸಲಾಗಿದೆಯಂತೆ. ಈ ಕಾರಣದಿಂದಾಗಿಯೇ ಸಂತೋಷ್ ಆನಂದ್ ರಾಮ್ ಅವರ ಸಿನಿಮಾ ಯುವ ಅವರಿಗೆ ಚೊಚ್ಚಲು ಚಿತ್ರವಾಗಲಿದೆ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು? ಸಂತೋಷ್ ಅವರ ಈ ಹಿಂದಿನ ಚಿತ್ರವನ್ನು ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಈ ಚಿತ್ರಕ್ಕೂ ಬಂಡವಾಳ ಹೂಡಲಿದೆ. ಅದ್ಧೂರಿಯಾಗಿಯೇ ಯುವ ರಾಜ್ ಕುಮಾರ್ ಅವರನ್ನು ಲಾಂಚ್ ಮಾಡುವ ಪ್ಲ್ಯಾನ್ ಹೊಂಬಾಳೆಯವರದ್ದು. ಈ ಚಿತ್ರಕ್ಕಾಗಿ ಆಗಲೇ ಕೆಲವು ಕೆಲಸಗಳು ನಡೆದಿದ್ದು, ಇಪ್ಪತ್ತು ದಿನ ಕಳೆದರೆ, ಸ್ಪಷ್ಟ ಮಾಹಿತಿ ಸಿಗಲಿದೆ.Sign in to your account
Username or Email Address


Password

 Remember Me


