ನಟಿ ಸೋನಂ ಕಪೂರ್ ತಾಯಿ ಆಗಲಿದ್ದಾರೆ ಎಂದು ಸೋನಂ ಅಪ್ಪ, ಖ್ಯಾತ ನಟ ಅನಿಲ್ ಕಪೂರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಅದಕ್ಕೆ ತಕ್ಕಂತೆ ಒಂದಷ್ಟು ಫೋಟೋಗಳನ್ನೂ ಅವರು ಶೇರ್ ಮಾಡಿದ್ದರು. ಬೇಬಿ ಬಂಪ್ ಫೋಟೋಗಳು ಅಭಿಮಾನಿಗಳಿಗೆ ಸರಿ ಕಂಡಿರಲಿಲ್ಲ. ಹಾಗಾಗಿ ಅನಿಲ್ ಕಪೂರ್ ಮೇಲೆ ಅಭಿಮಾನಿಗಳು ಕೋಪ ಮಾಡಿಕೊಂಡಿದ್ದರು. ಒಬ್ಬ ತಂದೆಯಾಗಿ ನೀವು ಆ ರೀತಿಯ ಫೋಟೋಗಳನ್ನು ಹಂಚಿಕೊಳ್ಳಬಾರದಿತ್ತು ಎಂದಿದ್ದರು. ಇದನ್ನೂ ಓದಿ : ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿಇದೀಗ ಸ್ವತಃ ಸೋನಂ ಕಪೂರ್ ಮತ್ತೊಂದು ಬೇಬಿ ಬಂಪ್ ಫೋಟೋವನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಕೆಲವೇ ನಿಮಿಷಗಳಲ್ಲಿ ವೈರಲ್ ಕೂಡ ಆಗಿದೆ. ತಾಯಿ ಆಗುತ್ತಿರುವ ಸೋನಂಗೆ ಹಾರೈಕೆಯ ಮಹಾಪುರವೇ ಹರಿದು ಬರುತ್ತಿದೆ. ಕಲಾ ಕುಟುಂಬದಲ್ಲಿ ಜನ್ಮ ತಾಳುತ್ತಿರುವ ಆ ಮಗು ಕಲಾಸೇವೆಯನ್ನು ಮುಂದುವರೆಯಲಿ ಎಂದು ಕೆಲವರು ಆಶೀರ್ವದಿಸಿದ್ದಾರೆ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು?ಈ ಹಿಂದೆ ಅನಿಲ್ ಕಪೂರ್ ಹಂಚಿಕೊಂಡಿದ್ದ ಫೋಟೋದಲ್ಲಿ ಸೋನಂ ಕಪ್ಪು ಬಿಕಿನಿ ಧರಿಸಿದ್ದರು. ಪತಿ ಆನಂದ್ ಅಹುಜಾ ಅವರ ಮಡಿಲಲ್ಲಿ ಸೋನಂ ಮಲಗಿದ್ದ ಫೋಟೋವನ್ನು ಹಾಕಿದ್ದರು. ಆದರೆ, ಫೋಟೋದಲ್ಲಿ ಸೋನಂ ಮಲಗಿದ್ದ ಕೋನ ಚೆನ್ನಾಗಿರಲಿಲ್ಲ ಎನ್ನುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಸೋನಂ ಮೊದಲ ಬಾರಿಗೆ ಬೇಬಿ ಬಂಪ್ ನೊಂದಿಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಸಖತ್ ಸ್ಟೈಲಿಶ್ ಲುಕ್ ನಲ್ಲಿ ಇದ್ದಾರೆ. ಹಾಗಾಗಿ ಸೋನಂಗೆ ಪ್ರೀತಿಯ ಮಹಾಮಳೆಯೇ ಸುರಿದಿದೆ.Sign in to your account
Username or Email Address


Password

 Remember Me


