ಧಾರವಾಡ: ಹಿಂದೂ ಸಮಾಜದ ಪ್ರತಿ ಆಚರಣೆಗಳನ್ನು ಪ್ರಶ್ನಿಸುವ ಬಂಡಾಯ ಸಾಹಿತಿಗಳಿಂದ ಸಂಬಂಧ ಛಿದ್ರಗೊಳ್ಳುತ್ತಿದೆ ಎಂದು ರಂಭಾಪುರಿ ಶ್ರೀ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದಲ್ಲಿ ಮಾತನಾಡಿದ ಅವರು, ಕೆಲ ಮಠಾಧೀಶರು ಮತ್ತು ನಾಸ್ತಿಕ ಬಂಡಾಯ ಸಾಹಿತಿಗಳು ತಪ್ಪು‌ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.ಹಣೆಗೆ ಕುಂಕುಮ ಯಾಕೆ? ತಲೆಗೆ ಹೂವು ಯಾಕೆ?, ದೇವರಿಗೆ ಹಾಲಿನ ಅಭಿಷೇಕ ಯಾಕೆ? ಎಂದು ಪ್ರಶ್ನೆ ಕೇಳುತ್ತಾರೆ. ಮದುವೆಯಲ್ಲಿ ಮಂಗಳಾತಕ್ಷತೆ ಪ್ರಶ್ನಿಸುತ್ತಾರೆ. ಅವರು ಇದನ್ನೆಲ್ಲ ಮಾಡಬೇಡಿ ಎನ್ನುತ್ತಾರೆ. ಕೊನೆಗೆ ನಮ್ಮ ಮತ್ತು ನಿಮ್ಮ ಸಂಬಂಧ ಛಿದ್ರ ಮಾಡುತ್ತಿದ್ದಾರೆ ಎಂದು ಹೇಳಿದರು.  ಇದನ್ನೂ ಓದಿ: ಪ್ರಾಣಿ ವಧೆ ಮಾಡಿ ತಿನ್ನುವುದರಲ್ಲಿ ಮಾನವೀಯತೆ ಎಲ್ಲಿಂದ ಬಂತು: ದೇವನೂರುಯಾರೇ ಏನೇ ಪ್ರಯತ್ನ ಮಾಡಿದರೂ ಮೂಲ ಧರ್ಮದ ಸ್ವರೂಪ ಬದಲಾಯಿಸಲು ಆಗದು. ಅದು ಎಂದೂ ಸಾಧ್ಯವಾಗದ ಭದ್ರ ಬುನಾದಿ ಜಗದ್ಗುರು ಪಂಚಾಚಾರ್ಯರು ಹಾಕಿದ್ದಾರೆ. ಇದನ್ನು ಅನೇಕರು ನಮ್ಮವರು ಹೇಳುತ್ತಲೇ ಇದ್ದಾರೆ. ಆದರೆ ಅಂಥವರಿಗೆ ಧ್ವನಿ ಇಲ್ಲದಂತಾಗಿದೆ. ಅಂಥವರಿಗೆ ನಾವು ಈಗ ಧ್ವನಿ ಕೊಡಬೇಕಿದೆ ಎಂದರು.ರಷ್ಯಾ-ಯಕ್ರೇನ್ ಯುದ್ಧ ವಿಚಾರವಾಗಿ ರಂಭಾಪುರಿ ಜಗದ್ಗುರುಗಳು ಮಾತನಾಡಿ, ವಿಜ್ಞಾನದಲ್ಲಿ ಬಹಳ ಬೆಳೆದಿದ್ದೇವೆ, ಬೆಳೆದಷ್ಟು ನಮ್ಮ ಸಂಸ್ಕೃತಿ ನಿರ್ಲಕ್ಷ್ಯ ಮಾಡುತ್ತಿದ್ದೇವೆ. ವಿಜ್ಞಾನ ಮನುಷ್ಯನ ಜೀವನ ವಿಕಾಸಕ್ಕೆ ಕಾರಣ ಆಗಬೇಕು. ಮನುಕುಲದ ವಿನಾಶಕ್ಕೆ ಕಾರಣ ಆಗಬಾರದು ಎಂದು ಹೇಳಿದರು. ಇದನ್ನೂ ಓದಿ: ಅಚ್ಚೇ ದಿನ್ ಕೊಡ್ತೀವಿ ಎಂದ ಕೇಂದ್ರ ನರಕ ದಿನ ತೋರಿಸುತ್ತಿದೆ: ಡಿಕೆಶಿರಷ್ಯಾ-ಉಕ್ರೇನ್ ದೇಶದ ಯುದ್ಧ ನಡೆಯುತ್ತಿದೆ. ಎಷ್ಟೋ ಜನ ಸಾವನ್ನಪ್ಪಿದ್ದಾರೆ. ಎಷ್ಟೋ ಜನ ನೋವು ಅನುಭವಿಸುತ್ತಿದ್ದಾರೆ. ದೇಶದ ಮುಖ್ಯಸ್ಥರುಗಳು ಜನ ಕಲ್ಯಾಣಕ್ಕೆ ವಿಜ್ಞಾನ ಬಳಸಬೇಕು ಎಂದು ಶ್ರೀಗಳು ಹೇಳಿದರು.Sign in to your account
Username or Email Address


Password

 Remember Me


