ದಾವಣಗೆರೆ:  ಯುಗಾದಿ ಹಬ್ಬದ ಹೊಸ ತೊಡಕಿನ ಹಿನ್ನೆಲೆಯಲ್ಲಿ ಮಾಂಸ ಮಾರಾಟ ಸ್ಥಳಗಳು ಗಿಜಿಗುಡುತ್ತವೆ. ಆದರೆ ಬೆಣ್ಣೆನಗರಿ ದಾವಣಗೆರೆಯಲ್ಲಿ ಮಾತ್ರ ಮಟನ್, ಚಿಕನ್ ಮಾರುಕಟ್ಟೆಗಳು ಸಂಪೂರ್ಣ ಖಾಲಿ ಖಾಲಿಯಾಗಿವೆ.ಬೆಳಗ್ಗೆ 8 ಗಂಟೆಯಾದರೂ ಜನರು ಮಟನ್, ಚಿಕನ್ ಖರೀದಿಗೆ ಆಗಮಿಸಿಲ್ಲ. ನಿನ್ನೆ ಚಂದ್ರ ದರ್ಶನವಾಗಿದ್ದರೆ ಇಂದು ನಾನ್ ವೆಜ್ ಮಾಡುತ್ತಿದ್ದರು. ಆದರೆ ಚಂದ್ರ ದರ್ಶನವಾಗದ ಹಿನ್ನೆಲೆ ಇಂದು ಕೂಡ ಸಿಹಿ ಮಾಡಿ ಇಂದು ಚಂದ್ರ ದರ್ಶನವಾದರೆ ನಾಳೆ ನಾನ್ ವೆಜ್ ಮಾಡುತ್ತಾರೆ.ಈ ಬಗ್ಗೆ ಇಲ್ಲಿನ ಮಟನ್ ವ್ಯಾಪಾರಸ್ಥರು ಮಾತನಾಡಿ, ಜಟ್ಕಾ ಕಟ್, ಹಲಾಲ್ ವಿವಾದ ಇಲ್ಲಿ ಇಲ್ಲ. ಮುಂದೆ ಹೇಗೆ ಬರುತ್ತೋ ನೋಡಿಕೊಂಡು ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಇಲ್ಲಿಯವರೆಗೂ ಯಾವುದೇ ಆ ರೀತಿಯ ವಿವಾದ ಇಲ್ಲಿಗೆ ಬಂದಿಲ್ಲ. ಎಲ್ಲರೂ ಕೂಡ ಸೌಹಾರ್ದಯುತವಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದೇವೆ ಎಂದರು. ಇದನ್ನೂ ಓದಿ:  ಹಲಾಲ್ ಕಟ್, ಜಟ್ಕಾಕಟ್ ಫೈಟ್ ನಡುವೆಯೇ ಹೊಸ ತೊಡಕಿಗೆ ಮಾಂಸ ಖರೀದಿ ಜೋರುಚಿಕನ್ ಸ್ಟಾಲ್‍ಗಳು ಕೂಡ ಸಂಪೂರ್ಣ ಖಾಲಿ ಖಾಲಿಯಾಗಿವೆ. ಕೆಲ ಚಿಕನ್ ಅಂಗಡಿಗಳನ್ನು ಮುಚ್ಚಿದ್ದಾರೆ. ಪ್ರತಿವರ್ಷ ಕಾಲಿಡಲು ಕೂಡ ಜಾಗ ಇರುತ್ತಿರಲಿಲ್ಲ. ಆದರೆ ಈ ಬಾರಿ ಖಾಲಿ ಖಾಲಿಯಾಗಿದೆ. ನಾಳೆ ಏನಾದರೂ ವ್ಯಾಪಾರ ವಹಿವಾಟು ಆಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: 13ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆSign in to your account
Username or Email Address


Password

 Remember Me


