ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಆಡು-ಕುರಿ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ನಾಗರಾಜ್, ಹನುಮಂತ ರೆಡ್ಡಿ, ಗುಂಡಪ್ಪ ಮತ್ತು ಆಂಜನೇಯ ಬಂಧಿತ ಆರೋಪಿಗಳು. ಹಟ್ಟಿ ಠಾಣೆ ಪೊಲೀಸರು ಖದೀಮರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಟ್ಟಿಯ ಯಮನೂರು ಹಾಗೂ ನಿಂಗಮ್ಮ ಅವರಿಗೆ ಸೇರಿದ 13 ಆಡುಗಳನ್ನು ರಾತ್ರಿವೇಳೆ ಕದ್ದು ಪರಾರಿಯಾಗಿದ್ದರು. ಕಳ್ಳರನ್ನ ಬಂಧಿಸಿರುವ ಪೊಲೀಸರು 1.5 ಲಕ್ಷ ಮೌಲ್ಯದ 13 ಆಡುಗಳು ಹಾಗೂ ಒಂದು ಆಟೋ ರಿಕ್ಷಾ ಸೇರಿ 3 ಲಕ್ಷ ಮೌಲ್ಯದ ವಸ್ತು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬಕ್ಕೆಂದು ಬಂದಿದ್ದ ಲೈಟ್ ಬಾಯ್, ಹುಡುಗಿ ವಿಚಾರಕ್ಕೆ ಹತ್ಯೆರಾತ್ರಿವೇಳೆ ಮನೆಮುಂದೆ ಕಟ್ಟಿಹಾಕಿದ್ದ ಆಡುಗಳನ್ನು ಕಳ್ಳರು ಕದ್ದೊಯ್ದಿದ್ದರು. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳನ್ನ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.Sign in to your account
Username or Email Address


Password

 Remember Me


