ಹುಬ್ಬಳ್ಳಿ; ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಈ ಹಿನ್ನೆಲೆ ಪಬ್ಲಿಕ್ ಟಿವಿ ಜೊತೆ ಬಸವರಾಜ ಅವರು ಮುಕ್ತವಾಗಿ ಮಾತನಾಡಿದ್ದಾರೆ.ಬಿಜೆಪಿ ಸೇರ್ಪಡೆ ಹಿನ್ನೆಲೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಸವರಾಜ ಹೊರಟ್ಟಿ ಅವರು, ನಾನು ಯಾರ ಮನಸ್ಸು ನೋವಿಸಿ ಜೆಡಿಎಸ್ ಬಿಡುತ್ತಿಲ್ಲ. ನಾನು ಈಗಾಗಲೇ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ನನ್ನ ನಿರ್ಧಾರ ತಿಳಿಸಿದ್ದೇನೆ. ಈಗಾಗಲೇ ಬಿಜೆಪಿ ನಾಯಕರು ಎಲ್ಲ ಹಂತದ ನಾಯಕರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ:  ಹಿಂದೂ ಧರ್ಮದ ವಿರುದ್ಧ ಒಂದು ಧರ್ಮ ಪ್ರಾರಂಭವಾಗಿದ್ದು, ಅದಕ್ಕೆ ಸಿದ್ದು, ಡಿಕೆಶಿ, ಹೆಚ್‍ಡಿಕೆ ನಾಯಕರು: ಪ್ರಶಾಂತ್ ಸಂಬರಗಿಇದು ನನ್ನ ರಾಜಕೀಯ ಜೀವನಕ್ಕೆ ಅನಿವಾರ್ಯತೆ ಮತ್ತು ಅವಶ್ಯಕತೆಯಾಗಿತ್ತು. ಬಿಜೆಪಿ ಸೇರುತ್ತಿರುವುದು ಒಂದು ದಿಢೀರ್ ಬೆಳವಣಿಗೆ. ಇದನ್ನು ಜಾಸ್ತಿ ದಿನ ಮುಚ್ಚಿಟ್ಟಿಕೊಳ್ಳುವ ಅವಶ್ಯಕತೆ ಇಲ್ಲ. ನನ್ನ ಜೊತೆಗೆ ಬಿಜೆಪಿಗೆ ಬನ್ನಿ ಅಂತ ಯಾರಿಗೂ ಬಲವಂತ ಮಾಡುವುದಿಲ್ಲ. ನಾನು ಬಿಜೆಪಿ ಸೇರುವುದಕ್ಕೆ ಕೆಲ ಸ್ಥಳೀಯ ಕಾರ್ಯಕರ್ತರ ವಿರೋಧವಿದೆ. ಅದನ್ನು ಬಿಜೆಪಿ ನಾಯಕರು ಸರಿ ಮಾಡುತ್ತಾರೆ ಎಂದು ಹೇಳಿದರು.Sign in to your account
Username or Email Address


Password

 Remember Me


