ಬೆಂಗಳೂರು: ಚುನಾವಣಾ ರಣೋತ್ಸಾಹದಲ್ಲಿದ್ದ ಕೈ ಪಾಳಯದಲ್ಲಿ ಈಗ ಆತಂಕದ ವಾತಾವರಣ ಶುರುವಾಯ್ತಾ ಎಂಬ ಪ್ರಶ್ನೆ ಎದ್ದಿದೆ. ಯಾಕೆಂದರೆ ಸೈಲೆಂಟಾಗಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ. ಇದರಿಂದ ಮೊದಲೇ ಕಂಗಾಲಾಗಿದ್ದ ಕಾಂಗ್ರೆಸ್‍ಗೆ ಈಗ ಮತ್ತೆ ಆತಂಕ ಶುರುವಾಗಿದೆ.ಒಂದೆಡೆ ಬಿಜೆಪಿಯ ಹಿಂದುತ್ವ ಅಸ್ತ್ರದ ಮುಂದೆ ಮಂಡಿಯೂರಿದ ಕೈ ಪಾಳಯಕ್ಕೆ ಈಗ ಇನ್ನೊಂದು ತಲೆ ನೋವು ಶುರುವಾದಂತಿದೆ. ಇನ್ನೊಂದೆಡೆ ಮೈನಾರಟಿ ಲೀಡರ್ಸ್ ಹಾಗೂ ವೋಟ್ ಬ್ಯಾಂಕ್‍ಗೆ ಏಕಾಏಕಿ ಲಗ್ಗೆ ಇಡಲು ಹೆಚ್‍ಡಿಕೆ ಮುಂದಾಗಿದ್ದಾರೆ. ಸೆಕ್ಯೂಲರ್, ಕಮ್ಯೂನಲ್, ಸಾಫ್ಟ್ ಹಿಂದುತ್ವ. ಇವುಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಕೈ ನಾಯಕರು ಫುಲ್ ಕನ್ಫ್ಯೂಶನ್ ನಲ್ಲಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ಗ್ರಾಹಕರಿಗೆ ಎಲ್‌ಪಿಜಿ ಶಾಕ್- ಬರೋಬ್ಬರಿ 250 ರೂ. ಏರಿಕೆಬಿಜೆಪಿ ನಾಯಕರ ಹಿಂದುತ್ವದ ಅಸ್ತ್ರದ ವಿರುದ್ಧ ಅಗ್ರೆಸ್ಸಿವ್ ಆಗಿ ಅಟ್ಯಾಕ್ ಮಾಡದ ಕಾಂಗ್ರೆಸ್ ನಾಯಕರುಗಳು, ಸಾಫ್ಟ್ ಹಿಂದುತ್ವಕ್ಕೆ ಮೊರೆ ಹೋಗಿದ್ದರು. ಇತ್ತ ಇಷ್ಟು ದಿನ ಸುಮ್ಮನಿದ್ದ ಕುಮಾರಸ್ವಾಮಿ ಬಿಜೆಪಿಯ ಹಿಂದುತ್ವ ಅಜೆಂಡಾಕ್ಕೆ ಬಹಿರಂಗ ಟಕ್ಕರ್ ಕೊಟ್ಟು ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ. ಸಾಫ್ಟ್ ಹಿಂದುತ್ವದ ಕನವರಿಕೆಯಲ್ಲಿ ಇದ್ದ ಕಾಂಗ್ರೆಸ್ ನಾಯಕರುಗಳಿಗೆ ಕುಮಾರಸ್ವಾಮಿಯವರ ಮಾತು ಕಸಿವಿಸಿ ಉಂಟು ಮಾಡಿದೆ. ಕುಮಾರಸ್ವಾಮಿ ಆ ಮೂಲಕ ಮೈನಾರಿಟಿ ವೂಟ್ ಬ್ಯಾಂಕ್‍ಗೆ ಕೈ ಹಾಕಬಹುದು ಅನ್ನೋ ಆತಂಕದಲ್ಲಿ ಕೈ ಪಾಳಯವಿದೆ. ಇದನ್ನೂ ಓದಿ: ನಿಮಗೆ ಗಂಡಸ್ತನ ಇದ್ದರೆ, ಏನು ಗೊತ್ತಿಲ್ಲದಂತೆ ಮೌನವಾಗಿರಬೇಡಿ: ಸಿಎಂಗೆ ಹೆಚ್‍ಡಿಕೆ ಸವಾಲ್ಒಂದು ಕಡೆ ಇಬ್ರಾಹಿಂ ರಂತ ಮೈನಾರಿಟಿ ಲೀಡರ್ ಗಳನ್ನ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಬಿಜೆಪಿಯ ಹಿಂದುತ್ವದ ಅಸ್ತ್ರದ ವಿರುದ್ಧ ತಿರುಗಿ ಬಿದ್ದು ಕಾಂಗ್ರೆಸ್ ವೋಟ್ ಬ್ಯಾಂಕ್ ಗೆ ಡ್ಯಾಮೇಜ್ ಮಾಡಬಹುದು ಅನ್ನೋದು ಕೈ ನಾಯಕರ ಆತಂಕವಾಗಿದೆ. ಹಿಂದುತ್ವದ ಅಸ್ತ್ರಕ್ಕೆ ಜೋರಾಗಿ ಕೌಂಟರ್ ಮಾಡಿದರೆ ಹಿಂದು ವಿರೋಧಿ ಹಣೆ ಪಟ್ಟಿಯ ಆತಂಕವೂ ಎದುರಾಗಿದೆ. ಸುಮ್ಮನಿದ್ದರೆ ಮೃದು ಹಿಂದುತ್ವದ ಆರೋಪ ಕಾಂಗ್ರೆಸ್ ಗೆ ಸುತ್ತಿಕೊಳ್ಳತೊಡಗಿದೆ. ಇದನ್ನೆಲ್ಲಾ ಸರಿಪಡಿಸಿಕೊಳ್ಳುವಾಗ ಮಾಜಿ ಸಿಎಂ ಕಾಂಗ್ರೆಸ್ ಆತಂಕ ಇನ್ನಷ್ಟು ಹೆಚ್ಚುವಂತೆ ಮಾಡಿ ಕೈ ನಾಯಕರ ನೆಮ್ಮದಿ ಕೆಡಿಸಿದ್ದಾರೆ. ಇದನ್ನೂ ಓದಿ: ಗಂಡಸ್ತನ ಪದ ಬಳಕೆಗೆ ಹೆಚ್‌.ಡಿ.ಕುಮಾರಸ್ವಾಮಿ ವಿಷಾದSign in to your account
Username or Email Address


Password

 Remember Me


