ಬೆಂಗಳೂರು: ಹತ್ತು ದಿನಗಳ ಹಿಂದೆ ಹೆಬ್ಬಾಳದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಕಸದ ಲಾರಿ ಹರಿದು ವಿದ್ಯಾರ್ಥಿನಿ ಅಕ್ಷಯಾ ಸಾವನ್ನಪ್ಪಿದ ಹತ್ತೇ ದಿನದ ಅಂತರದಲ್ಲಿ ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿಯಾಗಿದೆ.ಇಂದು ಬಾಗಲೂರು-ಥಣಿಸಂದ್ರ ರಸ್ತೆಯಲ್ಲಿ ಬಿಬಿಎಂಪಿಯ ಕಸದ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 76 ವರ್ಷದ ವೃದ್ಧ ರಾಮಯ್ಯ ಪ್ರಾಣಪಕ್ಷಿ ಹಾರಿಹೋಗಿದೆ. ಹಿಂದಿನಿಂದ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿಯಾದ ಪರಿಣಾಮ ನೆಲಕ್ಕೆ ಬಿದ್ದ ರಾಮಯ್ಯ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿಸಂಬಂಧಿಕರ ಮಗಳ ಎಂಗೇಜ್ಮೆಂಟ್ ಕಾರ್ಯಕ್ರಮಕ್ಕೆ ಪತ್ನಿ ಜೊತೆ ಸಾತನೂರಿಗೆ ತೆರಳಿದ್ದ ರಾಮಯ್ಯ ಪತ್ನಿಯನ್ನು ಕಾರಿನಲ್ಲಿ ಕಳುಹಿಸಿ ತಾವು ಸಂಪಿಗೆಹಳ್ಳಿಯ ಮನೆಗೆ ವಾಪಸಾಗುತ್ತಿದ್ರು. ಬಾಗಲೂರಿನ ರೇವಾ ಯೂನಿವರ್ಸಿಟಿ ಬಳಿ ರಾಮಯ್ಯರ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಕಸದ ಲಾರಿ ಢಿಕ್ಕಿಯಾಗಿದ್ದು ಪರಿಣಾಮ ನೆಲಕ್ಕೆ ಬಿದ್ದ ರಾಮಯ್ಯರ ದೇಹದ ಮೇಲೆ ಲಾರಿ ಹರಿದಿದೆ. ಸ್ಥಳದಲ್ಲೇ ರಾಮಯ್ಯ ಸಾವನ್ನಪ್ಪಿದ್ದು ಘಟನೆ ಬಳಿಕ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಇದನ್ನೂ ಓದಿ: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ – ಕಾರಣ ನಿಗೂಢ






 Advertisement 




Sign in to your account
Username or Email Address


Password

 Remember Me


