ಬೆಂಗಳೂರು: ಗಂಡಸ್ತನ ಯಾವ ಯಾವುದಕ್ಕೆ ಬಳಸಬೇಕು ಎಂದು ಕುಮಾರಸ್ವಾಮಿಗೆ ಗೊತ್ತಿದೆ. ಒಂದು ಕಡೆ ಬಳಸಬೇಕೋ, ಎರಡು ಕಡೆ ಬಳಸಬೇಕೋ, ಮೂರು ಕಡೆ ಬಳಸಬೇಕೋ ಎಂಬುದು ಅವರು ತಿಳಿದುಕೊಂಡಿದ್ದಾರೆ ಎಂದು ಎಚ್‍ಡಿಕೆಗೆ ಸಚಿವ ಈಶ್ವರಪ್ಪ ಟಾಂಗ್ ನೀಡಿದರು.ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಾದಂತವರು, ಮತ್ತೊಬ್ಬ ಮುಖ್ಯಮಂತ್ರಿಯ ಗಂಡಸ್ತನ ಬಗ್ಗೆ ಪ್ರಶ್ನೆ ಮಾಡೋದು ಸರಿಯಲ್ಲ. ಅವರು ಒಬ್ರು ಹಿರಿಯ ರಾಜಕಾರಣಿ. ಗಂಡಸ್ತನ ಮಾಡುವ ಅವರ ಹೇಳಿಕೆಯನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನಿಮಗೆ ಗಂಡಸ್ತನ ಇದ್ದರೆ, ಏನು ಗೊತ್ತಿಲ್ಲದಂತೆ ಮೌನವಾಗಿರಬೇಡಿ: ಸಿಎಂಗೆ ಹೆಚ್‍ಡಿಕೆ ಸವಾಲ್ಸರ್ವ ಜನಾಂಗದ ಶಾಂತಿಯ ತೋಟ ಅನ್ನೋರು ಯಾರಾದರೂ ಮುಸಲ್ಮಾನರ ಬಗ್ಗೆ ಹೇಳಿದ್ದಾರಾ?. ಹರ್ಷನ ಹತ್ಯೆಯಾಯ್ತಲ್ಲ, ಅವಾಗ ಹೋಗಿ ಹೇಳಬೇಕಿತ್ತಲ್ಲ. ಇದು ತಪ್ಪು, ಹತ್ಯೆ ಮಾಡಿದವರ ವಿರುದ್ಧ ಕ್ರಮ ಆಗಲಿ ಅಂತಾ. ಹಿಂದೂಗಳು ಮಾತ್ರ ಯಾವಾಗಲೂ ಅನುಭವಿಸ್ತನೇ ಇರಬೇಕಾ? ಮುಸಲ್ಮಾನರು ಏನು ಬೇಕಾದರೂ ಮಾಡಬಹುದಾ? ಕೊನೆಗೆ ಹಿಂದೂಗಳಿಗೆ ಮಾತ್ರ ಬುದ್ಧಿ ಹೇಳೋದು. 23 ಜನ ಹಿಂದೂ ಕಾರ್ಯಕರ್ತರನ್ನು ಕಗ್ಗೊಲೆ ಮಾಡಿಬಿಟ್ರಲ್ಲ, ಅವಾಗ ಯಾಕೆ ಮಾತಾಡಿಲ್ಲ ಎಂದು ಕುಮಾರಸ್ವಾಮಿಗೆ ಈಶ್ವರಪ್ಪ ತಿರುಗೇಟು ನೀಡಿದರು.ರಾಜ್ಯದಲ್ಲಿ ಹಲಾಲ್ ವಿವಾದ ಕುರಿತಾಗಿ ಮಾತನಾಡಿ, ಈ ಹಲಾಲ್, ಜಟ್ಕಾ ಕಟ್ ಅಂದರೆ ಏನು ಅಂತನೇ ನನಗೆ ಗೊತ್ತಿಲ್ಲ. ನಾನೂ ಈ ವಿಷಯದ ಬಗ್ಗೆ ಮಾಧ್ಯಮಗಳ ಮೂಲಕ ನೋಡಿದ್ದೇನೆ. ಹಿಂದೂ ಸಂಪ್ರದಾಯದಂತೆ ಪ್ರಾಣಿ ಹತ್ಯೆಯಾಗಲಿ ಎಂಬುದು ನನ್ನ ಅಭಿಪ್ರಾಯ. ಆದರೆ ಮುಸಲ್ಮಾನರಿಗೆ ಒಂದು ಅಭಿಪ್ರಾಯ ಇದೆ. ಅವ್ರು ಅದನ್ನು ನಡೆಸಿಕೊಂಡು ಹೋಗಲಿ. ಇವ್ರು ಇದನ್ನು ನಡೆಸಿಕೊಂಡು ಹೋಗಲಿ. ಅದು ಅವರವರ ಇಷ್ಟ ಅಷ್ಟೇ. ಮುಸಲ್ಮಾನರು ಹಿಂದೂಗಳ ಬಳಿ ಹೋಗಿ ಖರೀದಿ ಮಾಡಬೇಡಿ ಅನ್ನೋಕೆ ಅವರಿಗೆ ಯಾವ ಹಕ್ಕು ಇಲ್ಲ ಎಂದರು. ಇದನ್ನೂ ಓದಿ: ನಿಮ್ಮ ತರಹದ ಗಂಡಸ್ತನ ನಮಗ್ಯಾರಿಗೂ ಇಲ್ಲ: ಹೆಚ್​​ಡಿಕೆಗೆ ಸಿಟಿ. ರವಿ ಟಾಂಗ್






 Advertisement 




Sign in to your account
Username or Email Address


Password

 Remember Me


