ಕಿಚ್ಚ ಸುದೀಪ್ ಅಭಿನಯದ ಕನ್ನಡದ ಮತ್ತೊಂದು ಮೆಗಾ ಪ್ಯಾನ್ ಇಂಡಿಯಾ ಚಿತ್ರ ‘ವಿಕ್ರಾಂತ್ ರೋಣ’ದ ಟೀಸರ್ ಬಿಡುಗಡೆ ಯುಗಾದಿ ಹಬ್ಬದಂದು ಬಿಡುಗಡೆ ಆಗುತ್ತಿದೆ. ಏಪ್ರಿಲ್ 2 ರಂದು ಬೆಳಗ್ಗೆ 9.55ಕ್ಕೆ ಹಲವು ಭಾಷೆಗಳಲ್ಲಿ ಈ ಟೀಸರ್ ಬಿಡುಗಡೆ ಆಗುತ್ತಿದ್ದು, ಆಯಾ ಭಾಷೆಗಳ ಹೆಸರಾಂತ ನಟರು ಈ ಟೀಸರ್ ಅನ್ನು ರಿಲೀಸ್ ಮಾಡುತ್ತಿರುವುದು ವಿಶೇಷ. ಇದನ್ನೂ ಓದಿ : ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ನಲ್ಲೂ ಈ ಚಿತ್ರವನ್ನು ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ನಿರ್ಮಾಪಕ ಜಾಕ್ ಮಂಜು. ಅದಕ್ಕೂ ಮುನ್ನ ಟೀಸರ್ , ಹಾಡುಗಳನ್ನು ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದ್ದಾರೆ. ಪ್ರಿ ರಿಲೀಸ್ ಇವೆಂಟ್ ಕೂಡ ಆಯೋಜನೆ ಮಾಡುವ ಉದ್ದೇಶವೂ ಇದೆ. ಇದನ್ನೂ ಓದಿ : ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?ಏ.2 ರಂದು ರಿಲೀಸ್ ಆಗಲಿರುವ ಟೀಸರ್ ಅನ್ನು ಮಲಯಾಳಂ ಭಾಷೆಯಲ್ಲಿ ಖ್ಯಾತ ನಟ ಮೋಹನ್ ಲಾಲ್ ರಿಲೀಸ್ ಮಾಡುತ್ತಿದ್ದಾರೆ. ಮೋಹನ್ ಲಾಲ್ ಕಿಚ್ಚ ಸುದೀಪ್ ಅವರ ಜತೆ ನಟಿಸದೇ ಇದ್ದರೂ, ಸುದೀಪ್ ಅವರ ಮೇಲೆ ಅವರಿಗೆ ಅಪಾರ ಗೌರವ. ಅಲ್ಲದೇ ಕನ್ನಡದಲ್ಲಿ ಅವರು ಪುನೀತ್ ಅವರ ಜತೆ ನಟಿಸಿದ್ದಾರೆ. ಕಿಚ್ಚನಿಗೂ ಮತ್ತು ಪುನೀತ್ ಅವರಿಗೂ ಇದ್ದ ಬಾಂಧವ್ಯದ ಅರಿವು ಅವರಿಗಿದೆ. ಹೀಗಾಗಿ ಟೀಸರ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:  ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್ಮಲಯಾಳಂನಲ್ಲಿ ಮೋಹನ್ ಲಾಲ್ ಬಿಡುಗಡೆ ಮಾಡುತ್ತಿದ್ದರೆ, ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಟೀಸರ್ ಅನ್ನು ರಿಲೀಸ್ ಮಾಡು‍ತ್ತಿದ್ದಾರೆ. ಚಿರಂಜೀವಿ ಜತೆ ಕಿಚ್ಚನಿಗೆ ಒಳ್ಳೆಯ ಬಾಂಧವ್ಯವಿದೆ. ಅಲ್ಲದೇ ಒಟ್ಟಿಗೆ ಕೆಲಸ ಕೂಡ ಮಾಡಿದ್ದಾರೆ. ತೆಲುಗಿನಲ್ಲಿ ಕಿಚ್ಚನಿಗೆ ಉತ್ತಮ ಕಾಂಟ್ಯಾಕ್ಟ್ ಕೂಡ ಇದೆ. ಅಲ್ಲಿ ಕಿಚ್ಚನ ಅಪಾರ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ. ಇದನ್ನೂ ಓದಿ: ಆರ್.ಆರ್.ಆರ್ ನಿಖರ ಗಳಿಕೆ 611 ರೂ.ಕೋಟಿ: ವಾರಾಂತ್ಯಕ್ಕೆ ಸಾವಿರ ಕೋಟಿ ನಿರೀಕ್ಷೆಉಳಿದಂತೆ ತಮಿಳು ಮತ್ತು ಹಿಂದಿಯ ಟೀಸರ್ ಅನ್ನು ಅಲ್ಲಿನ ಹೆಸರಾಂತ ಕಲಾವಿದರೇ ಬಿಡುಗಡೆ ಮಾಡುತ್ತಿದ್ದು, ಗಂಟೆಗೊಂದು ಈ ವಿಷಯವನ್ನು ಅಪ್ ಡೇಟ್ ಮಾಡುತ್ತಿದ್ದಾರೆ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ.Sign in to your account
Username or Email Address


Password

 Remember Me


