ಬಿಟೌನ್ ನ ಮೋಸ್ಟ್ ಬ್ಯಾಚ್ಯುಲರ್ ನಟ ಸಲ್ಮಾನ್ ಖಾನ್ ಅವರ ಮಾಜಿ ಪ್ರೇಯಸಿ ಸೋಮಿ ಅಲಿ ಶಾಕಿಂಗ್ ಪೋಸ್ಟ್ ವೊಂದನ್ನು ಇನ್ ಸ್ಟಾಗ್ರಾಮ್ ದಲ್ಲಿ ಪೋಸ್ಟ್ ಮಾಡಿ, ಆ ನಂತರ ಡಿಲಿಟ್ ಮಾಡಿದ್ದಾರೆ. ಅವರು ಹಾಕಿರುವ ಪೋಸ್ಟ್ ಸ್ಕ್ರೀನ್ ಶಾಟ್ ಈಗ ಸಖತ್ ವೈರಲ್ ಆಗಿದೆ. ಇದನ್ನೂ ಓದಿ:  ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್1992 ರಿಂದ ಐದಾರು ವರ್ಷಗಳ ಕಾಲ ಸೋಮಿ ಬಾಲಿವುಡ್ ನಲ್ಲಿ ಹಲವಾರು ಚಿತ್ರಗಳನ್ನು ಮಾಡಿದ್ದಾರೆ. ಈ ವೇಳೆಯಲ್ಲೇ ಬಾಲಿವುಡ್ ಹ್ಯಾಂಡ್ ಸಮ್ ನಟ ಸಲ್ಮಾನ್ ಖಾನ್ ಜತೆ ಇವರು ರಿಲೇಶನ್ ಶಿಪ್ ನಲ್ಲಿ ಇದ್ದರು ಎಂದು ಹೇಳಲಾಗಿತ್ತು. ಪಾರ್ಟಿ ಮತ್ತು ಖಾಸಗಿ ಹೋಟೆಲ್ ಗಳಲ್ಲಿ ಆಗಾಗ್ಗೆ ಇವರು ಕಾಣಿಸಿಕೊಂಡಿದ್ದು ಹಲವು ಚರ್ಚೆಗಳಿಗೂ ಕಾರಣವಾಗಿತ್ತು. ಎಂದಿನಂತೆ ಸಲ್ಮಾನ್ ಜತೆಗಿನ ಬಾಂಧವ್ಯ ನಂತರದ ದಿನಗಳ ಕಡಿದುಕೊಂಡು ಸಿನಿಮಾ ರಂಗದಿಂದಲೇ ದೂರವಾದರು.ಸದ್ಯ ತಮ್ಮದೇ ಸ್ವಯಂ ಸೇವಾ ಸಂಸ್ಥೆಯೊಂದನ್ನು ಕಟ್ಟಿಕೊಂಡು ಬಾಲಿವುಡ್ ನಿಂದ ಅಂತರವನ್ನೇ ಕಾಪಾಡಿಕೊಂಡಿರುವ ಸೋಮಿ, ಏಕಾಏಕಿ ನಿಗೂಢ ವ್ಯಕ್ತಿಯ ಮೇಲೆ ಲೈಂಗಿಕ ಆರೋಪವೊಂದನ್ನು ಮಾಡಿದ್ದಾರೆ. ಈ ಹಿಂದೆ ಲೈಂಗಿಕ ಆರೋಪಕ್ಕೆ ಗುರಿಯಾಗಿ ಶಿಕ್ಷೆಯನ್ನೂ ಅನುಭವಿಸಿದ್ದ ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್ ಸ್ಟೀನ್ ಅವರಿಗೆ ಆ ನಿಗೂಢ ವ್ಯಕ್ತಿಯನ್ನು ಹೋಲಿಕೆ ಮಾಡಿದ್ದಾರೆ. ‘ನೀವು ಬಾಲಿವುಡ್ ಹಾರ್ವೆ ವೈನ್ ಸ್ಟೀನ್. ನಿಮ್ಮ ಬಗೆಗಿನ ಹಲವು ವಿಚಾರಗಳು ಬಹಿರಂಗಗೊಳ್ಳುತ್ತವೆ. ನಿಮ್ಮಿಂದ ತೊಂದರೆಗೆ ಒಳಗಾದ ಮಹಿಳೆಯರು ಮುಂದೊಂದು ದಿನ ಸತ್ಯದೊಂದಿಗೆ ನಿಲ್ಲುತ್ತಾರೆ, ಐಶ್ವರ್ಯ ರೈ ಅವರಂತೆ’ ಎಂದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಆರ್.ಆರ್.ಆರ್ ನಿಖರ ಗಳಿಕೆ 611 ರೂ.ಕೋಟಿ: ವಾರಾಂತ್ಯಕ್ಕೆ ಸಾವಿರ ಕೋಟಿ ನಿರೀಕ್ಷೆಅದಕ್ಕೆ ಹಲವರು, ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲೇ ಅದನ್ನು ಡಿಲೀಟ್ ಕೂಡ ಮಾಡಿದ್ದಾರೆ. ಆ ಬಾಲಿವುಡ್ ನ ಹಾರ್ವೆ ವೈನ್ ಸ್ಟೀನ್ ಇವರ ಮಾಜಿ ಬಾಯ್ ಫ್ರೆಂಡ್ ಎಂದೂ ಹಲವರು ಕಾಮೆಂಟ್ ಮಾಡಿದ್ದಾರೆ. ಐಶ್ವರ್ಯ ರೈ ಅವರನ್ನು ಸುಖಾಸುಮ್ಮನೆ ಎಳೆದು ತಂದಿದ್ದಕ್ಕಾಗಿ ಅವರ ಅಭಿಮಾನಿಗಳು ಸಿಟ್ಟಿಗೆದ್ದಿದ್ದರು. ಇವೆಲ್ಲ ಕಾರಣಕ್ಕಾಗಿ ಈ ಪೋಸ್ಟ್ ಡಿಲೀಟ್ ಆಗಿರಬಹುದು ಎನ್ನಲಾಗುತ್ತಿದೆ.Sign in to your account
Username or Email Address


Password

 Remember Me


