ಬೆಂಗಳೂರು: ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲವೆಂದರೆ, ಚೆನ್ನಮ್ಮ, ರಾಯಣ್ಣನೂ ಅಲ್ಲ ಎಂದು ನಟ ಚೇತನ್ ಹೇಳಿದ್ದಾರೆ.ಕರ್ನಾಟಕ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಟಿಪ್ಪುವಿನ ಬಗ್ಗೆ ಇದ್ದ ವೈಭವೀಕರಣಕ್ಕೆ ಕತ್ತರಿ ಹಾಕಿ ಕೆಲ ಶಿಫಾರಸು ಮಾಡಿದೆ. ಈ ವಿಚಾರ ಚರ್ಚೆ ಆಗುತ್ತಿರುವ ಬೆನ್ನಲ್ಲೇ ಈಗ ಚೇತನ್ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಸಿದ್ದರಾಮಯ್ಯ ಶ್ರೀಕೃಷ್ಣ ಎಂದ ರಮೇಶ್‍ಕುಮಾರ್ – ಪಟೇಲರ ಕಚ್ಚೆ ನೆನಪಿಸಿಕೊಂಡ ಸಿದ್ದುಫೇಸ್‌ಬುಕ್ ಪೋಸ್ಟ್‌ನಲ್ಲಿ ಏನಿದೆ?
ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಮುಸ್ಲಿಂ ಆದ ಯಾವುದೇ ವ್ಯಕ್ತಿಯನ್ನು ಗುರಿಯಾಗಿಸುವುದರ ಮೂಲಕ ನಮ್ಮ ಇತಿಹಾಸಗಳನ್ನು ಹಿಂದುತ್ವಗೊಳಿಸುತ್ತಿದೆ. ಟಿಪ್ಪು ಇನ್ನು ಮುಂದೆ ಸ್ವಾತಂತ್ರ‍್ಯ ಹೋರಾಟಗಾರ ಎಂದು ಕರೆಯುವಂತಿಲ್ಲ. ಬ್ರಿಟಿಷರ ವಿರುದ್ಧ ಹೋರಾಡುತ್ತ ಯುದ್ಧ ಭೂಮಿಯಲ್ಲಿ ಮಡಿದ ಟಿಪ್ಪು ಸ್ವಾತಂತ್ರ‍್ಯ ಹೋರಾಟಗಾರ ಅಲ್ಲ ಎಂದಾದರೆ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಕೂಡಾ ಸ್ವಾತಂತ್ರ‍್ಯ ಹೋರಾಟಗಾರರಲ್ಲ ಎಂದಿದ್ದಾರೆ. ಇದನ್ನೂ ಓದಿ: ತಂದೆ, ತಾತನ ಹೆಸರು ಬಳಸಿಕೊಳ್ಳದೆ ಜಿಪಂ ಸ್ಥಾನ ಗೆಲ್ಲಲಿ: ನಿಖಿಲ್‍ಗೆ ಸುಮಲತಾ ಸವಾಲುಈ ವಿವಾದಾತ್ಮಕ ಹೇಳಿಕೆಗೆ ಎಡಪಂಥೀಯರು ಕಾಮೆಂಟ್ ವಿಭಾಗದಲ್ಲಿ ಶ್ಲಾಘನೆ ವ್ಯಕ್ತಪಡಿಸಿದರೆ, ಬಲಪಂಥೀಯರು ಕಿಡಿ ಕಾರುತ್ತಿದ್ದಾರೆ.Sign in to your account
Username or Email Address


Password

 Remember Me


