ವಿಜಯನಗರ: ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಪತಿ ಯುವಕನನ್ನು ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪ್ರಸ್ತುತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಯರ‍್ರಿಸ್ವಾಮಿ(32) ಮಧುಸೂದನ್(22) ಬಂಧಿತ ಆರೋಪಿಗಳು. ಆರೋಪಿಗಳು ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದವರಾಗಿದ್ದು, ಹೊಸಪೇಟೆಯ ಬಾರ್‌ನಲ್ಲಿ ಗಂಗಾಧರ್‌ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಪ್ರಸ್ತುತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅತ್ತೆಯನ್ನ ಕೊಲೆ ಮಾಡಿದ ಅಳಿಯನಿಗೆ ಜೀವಾವಧಿ ಶಿಕ್ಷೆಅಸಲಿ ಕಾರಣ ಬಯಲು
ಕೊಲೆಯಾದ ಗಂಗಾಧರ್, ಯರ‍್ರಿಸ್ವಾಮಿ ಮತ್ತು ಮಧುಸೂದನ್ ಸಂಬಂಧಿಕ. ಯರ‍್ರಿಸ್ವಾಮಿ ಪತ್ನಿಯ ಜೊತೆಗೆ ಮಧುಸೂದನ್‍ಗೆ ಸಂಬಂಧ ಇದೆ ಎಂದು ಗಂಗಾಧರ್ ಎಲ್ಲಕಡೆ ಸುದ್ದಿ ಹಬ್ಬಿಸುತ್ತಿದ್ದ. ಇದೇ ವಿಚಾರಕ್ಕೆ ಯರ‍್ರಿಸ್ವಾಮಿ ಮತ್ತು ಗಂಗಾಧರ್ ನಡುವೆ ಜಗಳ ಪ್ರಾರಂಭವಾಗಿದೆ. ಜಗಳ ಅತಿಯಾಗಿ ಗಂಗಾಧರ್‌ನನ್ನು ಯರ‍್ರಿಸ್ವಾಮಿ ಮತ್ತು ಮಧುಸೂದನ್ ಇಬ್ಬರು ಸೇರಿ ಕೊಲೆ ಮಾಡಿ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ.ಹೊಸಪೇಟೆಯ ಪೊಲೀಸರು ಘಟನೆ ನಡೆದ 24 ಘಂಟೆಯೊಳಗೆ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಎಸ್‍ಪಿ ಡಾ.ಅರುಣ್.ಕೆ, ಮಂಗಳವಾರ ಸಂಜೆ ಹೊಸಪೇಟೆಯ ಬಳ್ಳಾರಿ ರಸ್ತೆಯ ಯಶ್ ಬಾರ್‌ನಲ್ಲಿ ಯರ‍್ರಿಸ್ವಾಮಿ ಮತ್ತು ಮಧುಸೂದನ್ ಇಬ್ಬರು ಸೇರಿ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಯರ‍್ರಿಸ್ವಾಮಿ ಅವರ ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರಿಂದ ಜಗಳ ಪ್ರಾರಂಭವಾಗಿ ಈ ಅನಾಹುತ ಸಂಭವಿಸಿದೆ ಎಂದು ವಿವರಿಸಿದರು. ಇದನ್ನೂ ಓದಿ: ಶ್ರೀಗಳ 115ನೇ ಜನ್ಮದಿನ ಐತಿಹಾಸಿಕ ಕಾರ್ಯಕ್ರಮ ಅಂದ್ರೆ ತಪ್ಪಾಗಲಾರದು: ಬಿ.ವೈ.ವಿಜಯೇಂದ್ರSign in to your account
Username or Email Address


Password

 Remember Me


