ಬೆಂಗಳೂರು: ಇವಿಎಂ ಸಹ ಮ್ಯಾನ್ ಹ್ಯಾಂಡಲ್(ಮಾನವ ನಿಯಂತ್ರಿತ) ಯಂತ್ರವಾಗಿರುವುದರಿಂದ ಅದನ್ನೂ ಸಹ ತಿರುಚಬಹುದು ಅನ್ನಿಸುತ್ತದೆ. ಇವಿಎಂ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆಲ್ಲ ಚುನಾವಣಾ ಆಯೋಗ ಉತ್ತರ ಕೊಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.ವಿಧಾನಸಭೆಯಲ್ಲಿ ಚುನಾವಣೆ ಸುಧಾರಣೆ ಅಗತ್ಯತೆ ಕುರಿತ ಚರ್ಚೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನನ್ನ ಬಳಿಯೂ ಒಬ್ಬ ವ್ಯಕ್ತಿ ಬಂದು ತೋರಿಸಿದ. ಹಾಕಿದ ಹತ್ತು ವೋಟ್‌ಗಳಲ್ಲಿ 7 ಬಿಜೆಪಿಗೆ, 3 ಕಾಂಗ್ರೆಸ್‌ಗೆ ಬಂತು. ಈ ವಿಚಾರ ನನಗೂ ಆಶ್ಚರ್ಯವಾಯಿತು. ಆದರೆ ನಾನು ತಜ್ಞನಲ್ಲ. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಇವಿಎಂ ಮ್ಯಾನ್ ಹ್ಯಾಂಡಲ್ ಯಂತ್ರವಾಗಿರುವುದರಿಂದ ಅದನ್ನೂ ಸಹ ತಿರುಚಬಹುದು ಅನ್ನಿಸುತ್ತದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಇದನ್ನೂ ಓದಿ: ಸಿದ್ದರಾಮಯ್ಯ ಶ್ರೀಕೃಷ್ಣ ಎಂದ ರಮೇಶ್‍ಕುಮಾರ್ – ಪಟೇಲರ ಕಚ್ಚೆ ನೆನಪಿಸಿಕೊಂಡ ಸಿದ್ದುಇಂತಹ ಕಾರಣಕ್ಕೆ ಜರ್ಮನಿಯಲ್ಲಿ ಇವಿಎಂ ಬ್ಯಾನ್ ಮಾಡಿ ಬ್ಯಾಲೆಟ್ ಪೇಪರ್ ಮಾದರಿಯ ಚುನಾವಣೆ ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ರಾಷ್ಟ್ರದಲ್ಲಿ ವ್ಯಕ್ತವಾಗುತ್ತಿರುವ ಅನುಮಾನಗಳಿಗೆ ಚುನಾವಣಾ ಆಯೋಗ ಉತ್ತರ ಕೊಡಬೇಕು. ಅನುಮಾನ ಬಗೆಹರಿಸುವ ಕೆಲಸ ಆಗಬೇಕು. 19 ಲಕ್ಷ ಇವಿಎಂ ಯಂತ್ರಗಳು ಕಾಣೆಯಾಗಿವೆ ಎಂದು ಎಚ್‌ಕೆ ಪಾಟೀಲ್ ಹೇಳಿದ್ದಾರೆ. ಇದೆಲ್ಲದಕ್ಕೂ ಚುನಾವಣಾ ಆಯೋಗ ಉತ್ತರ ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು. ಇದನ್ನೂ ಓದಿ: ನಮ್ಮಪ್ಪನ ಬಿಟ್ಟು ಯಾರಿಗೂ ನಾನು ಅಪ್ಪಾಜಿ ಎಂದಿಲ್ಲ: ಯತ್ನಾಳ್ Sign in to your account
Username or Email Address


Password

 Remember Me


