ಚಿಕ್ಕಮಗಳೂರು: ಹೆದ್ದಾರಿ ಅಗಲಿಕರಣದ ವೇಳೆ ರೈತರು ಜಮೀನು ಕಳೆದುಕೊಳ್ಳುತ್ತಾರೆ. 62 ಕೋಟಿ ಪರಿಹಾರ ಕೊಡಬೇಕಾದ ಜಾಗದಲ್ಲಿ ಎರಡೂವರೆ ಲಕ್ಷ ನೀಡಲು ಸರ್ಕಾರ ಮುಂದಾಗಿದೆ. ಈ ಕ್ರಮವನ್ನು ವಿರೋಧಿಸಿ ಶ್ರೀಗಂಧದ ಬೆಳೆಗಾರರು ಸರ್ಕಾರಕ್ಕೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದೊಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಬೆಳಗಾರರು ಇಂದು ಸೀರೆಂಜ್‍ನಲ್ಲಿ ರಕ್ತ ತೆಗೆದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಬಪ್ಪನಾಡಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ – ಸಾಮರಸ್ಯ ಎತ್ತಿಹಿಡಿದ ಕ್ಷೇತ್ರದ ಆಡಳಿತ ಮಂಡಳಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೂಕ್ತ ಪರಿಹಾರ ನೀಡ ಬೇಕು. 22 ರೈತರಿಗೆ 62 ಕೋಟಿ ಪರಿಹಾರ ಬರಬೇಕು. ಎರಡೂವರೆ ಲಕ್ಷ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ಹೆದ್ದಾರಿ ಅಗಲೀಕರಣದ ವೇಳೆ ಜಮೀನು ಕಳೆದುಕೊಳ್ಳಲಿದ್ದಾರೆ. ಹೈಕೋರ್ಟ್ ನಿರ್ದೇಶನದಂತೆ ಪರಿಹಾರ ನೀಡಲು ಒತ್ತಾಯ ಮಾಡಲಾಗಿದೆ.Sign in to your account
Username or Email Address


Password

 Remember Me


