ಬೆಂಗಳೂರು: ರಾಜ್ಯದ ಎಲ್ಲಾ ಬಗೆಯ ಮಾಶಾಸನಗಳು ಇನ್ಮುಂದೆ 72 ಗಂಟೆಯೊಳಗೆ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ವಿನೂತನ ಕಾರ್ಯಕ್ರಮ ಜಾರಿಗೆ ತರುತ್ತಿರೋದಾಗಿ ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿಯ ತುಳಸಿ ಮುನಿರಾಜುಗೌಡರ ಪ್ರಶ್ನೆಗೆ ಸಚಿವ ಅಶೋಕ್ ಉತ್ತರ ನೀಡುವ ವೇಳೆ ವಿನೂತನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಇನ್ಮುಂದೆ 72 ಗಂಟೆ ಒಳಗೆ ಮಾಶಾಶನ ಫಲಾನುಭವಿಗಳ ಮನೆಗೆ ತಲುಪುತ್ತದೆ. ಹಲೋ ಕಂದಾಯ ಸಚಿವರೇ ಅಂತ ಒಂದು ಕರೆ ಮಾಡಿದರೆ ಸಾಕು ಮುಂದಿನ 72 ಗಂಟೆಗಳಲ್ಲಿ ಫಲಾನುಭವಿಗಳಿಗೆ ಮಾಶಾಸನ ತಲುತ್ತದೆ ಅಂತ ಮಾಹಿತಿ ನೀಡಿದರು. ಇದನ್ನೂ ಓದಿ: ಇಸ್ಪೀಟ್ ಆಡೋರಿಗೆ ಪೊಲೀಸರು ತೊಂದರೆ ಕೊಡದಂತೆ ಆದೇಶಿಸಿ: ಹೆಚ್‌ಡಿಕೆ ಮನವಿಮನೆ ಬಾಗಿಲಿಗೆ ಮಾಶಾಸನ ನೀಡುವ ಕಾರ್ಯಕ್ರಮಕ್ಕೆ ವಿಶೇಷ ಸಾಫ್ಟ್‌ವೇರ್ ಸಿದ್ಧವಾಗುತ್ತಿದೆ. ಆದಷ್ಟು ಬೇಗ ಕಾರ್ಯಕ್ರಮ ಅನುಷ್ಠಾನ ಮಾಡುತ್ತೇವೆ ಅಂತ ಮಾಹಿತಿ ನೀಡಿದರು.ಫಲಾನುಭವಿಗಳ ಕರೆಗಳನ್ನ ಸ್ವೀಕಾರ ಮಾಡಲು ಕಂಟ್ರೋಲ್ ರೂಂ ಪ್ರಾರಂಭ ಮಾಡಲಾಗುತ್ತದೆ. ರಾಜ್ಯದ ಯಾವ ಭಾಗದಿಂದ ಬೇಕಾದರು ಫಲಾನುಭವಿಗಳು ಕರೆ ಮಾಡಬಹುದು. ದೂರು ಬಂದ 72 ಗಂಟೆಗಳಲ್ಲಿ ಅಧಿಕಾರಿಗಳು ಮನೆಗೆ ಮಾಶಾಸನ ತಲುಪಿಸುವ ಕೆಲಸ‌ ಮಾಡುತ್ತಾರೆ. ಶೀಘ್ರವೇ ಈ ಕಾರ್ಯಕ್ರಮ ಜಾರಿ ಮಾಡೋದಾಗಿ ಸಚಿವರು ತಿಳಿಸಿದರು.Sign in to your account
Username or Email Address


Password

 Remember Me


