“ಭಾರತದ ಕೋಗಿಲೆ’ ಎಂದೇ ಜನಪ್ರಿಯರಾದ ಸರೋಜಿನಿ ನಾಯ್ಡು ಕುರಿತ ಬಯೋಪಿಕ್​ ಕುರಿತಾದ ಸಿನಿಮಾ ಬರುತ್ತಿದೆ. ವಿನಯ್​ ಚಂದ್ರ ನಿರ್ದೇಶನದ ಈ ಚಿತ್ರವು ಇನ್ನಷ್ಟೇ ಶುರುವಾಗಬೇಕಿದ್ದು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಚರಣ್​ ಸುವರ್ಣ, ಹನಿ ಚೌಧರಿ ಮತ್ತು ಸಿ.ಬಿ. ಕುಲಕರ್ಣಿ ಜತೆಯಾಗಿ ಈ ಚಿತ್ರವನ್ನು ವಿಸ್ತಾ ಫಿಲಂಸ್ ಮೂಲಕ ನಿರ್ಮಿಸುತ್ತಿದ್ದಾರೆ. ಸರೋಜಿನಿ ನಾಯ್ಡು ಅವರ ಚಿಕ್ಕ ವಯಸ್ಸಿನ  ಪಾತ್ರದಲ್ಲಿಸೋನಲ್​ ಮಾಂಟೆರೊ ನಟಿಸಿದರೆ, ಹಿರಿವಯಸ್ಸಿನ ಪಾತ್ರವನ್ನು ಶಾಂತಿಪ್ರಿಯ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಜನಪ್ರಿಯ ನಾಯಕಿಯಾಗಿದ್ದ ಶಾಂತಿಪ್ರಿಯ, ಈ ಚಿತ್ರದ ಮೂಲಕ 28 ವರ್ಷಗಳ ನಂತರ ಅಭಿನಯಕ್ಕೆ ವಾಪಸ್ಸಾಗುತ್ತಿದ್ದಾರೆ. 28 ವರ್ಷಗಳ ನಂತರ ನಟನೆಗೆ ವಾಪಸ್ಸಾಗಿದ್ದೇನೆ. ಇಂಥದ್ದೊಂದು ಅವಕಾಶಕ್ಕೆ ಧನ್ಯವಾದಗಳು. ಇಲ್ಲಿ ಸರೋಜಿನಿ ನಾಯ್ಡು ಅವರ ಪಾತ್ರ ನಿರ್ವಹಿಸುತ್ತಿದ್ದು, ಪಾತ್ರಕ್ಕೆ ಶಕ್ತಿಮೀರಿ ಜೀವ ತುಂಬುವುದಕ್ಕೆ ಪ್ರಯತ್ನಿಸುತ್ತೇನೆ ಎನ್ನುತ್ತಾರೆ ಹಿರಿಯ ನಟಿ ಶಾಂತಿಪ್ರಿಯ.ಹಿತೇನ್​ ತೇಜ್ವಾನಿ (ಮುಂಬೈ ನಟ) ಮಾತನಾಡುತ್ತಾ,  ಸರೋಜಿನಿ ನಾಯ್ಡು ಅವರ ಜೀವನದಲ್ಲಿ ನಡೆದ ಹಲವು ಪ್ರಮುಖ ವಿಷಯಗಳನ್ನು ಈ ಚಿತ್ರದಲ್ಲಿ ತೆರೆದಿಡಲಾಗುತ್ತಿದೆ. ನಾನು ಸರೋಜಿನಿ ಅವರ ಪತಿ ಗೋವಿಂದರಾಜುಲು ನಾಯ್ಡು ಅವರ ಪಾತ್ರ ನಿರ್ವಹಿಸುತ್ತಿದ್ದೇನೆ. ಸರೋಜಿನಿ ಅವರ ಬಗ್ಗೆ ಜನರಿಗೆ ಅಷ್ಟಾಗಿ ಗೊತ್ತಿಲ್ಲ. ನಿಜ ಹೇಳಬೇಕೆಂದರೆ, ಅವರಿಗೆ ಗೋವಿಂದ್​ ರಾಜುಲುಬೆನ್ನೆಲುಬಾಗಿದ್ದರು. ಕೊನೆಯವರೆಗೂ ಸಹಕಾರ, ಪ್ರೋತ್ಸಾಹ ನೀಡಿದರು. ಕುಟುಂಬ ಮತ್ತು ಮಕ್ಕಳ ಬಗ್ಗೆ ಯೋಚನೆ ಬೇಡ ಎಂದು ಆಕೆಯನ್ನು ಹುರಿದುಂಬಿಸಿದರು. ಆಕೆಗೆ ಏನು ಇಷ್ಟವಿತ್ತೋ, ಅದೆಲ್ಲವನ್ನೂ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟರು ಎಂದು ತಮ್ಮ ಪಾತ್ರ ವಿವರಣೆ ನೀಡಿದರು. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು ನನಗೆ ಮೊದಲಿನಿಂದಲೂ ಒಂದು ಬಯೋಪಿಕ್​ನಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಅದು ಇಷ್ಟು ಚಿಕ್ಕ ವಯಸ್ಸಿನಲ್ಲೇ ಸಿಗುತ್ತದೆ ಎಂಬ ನಂಬಿಕೆ ಇರಲಿಲ್ಲ. ಚರಣ್​ ಸುವರ್ಣ ಮತ್ತು ಹನಿ ಚೌಧರಿ ನನಗೆ ಸುಮಾರು ಏಳು ವರ್ಷಗಳಿಂದ ಪರಿಚಿತರು. ನನ್ನ ಬ್ಯುಸಿನೆಸ್​ ಪಾರ್ಟನರ್​ಗಳು ಸಹ. ಕಥೆ ಹೇಳಿದಾಗ ಬಹಳ ಖುಷಿ ಆಯಿತು. ಸರೋಜಿನಿ ಅವರ ಚಿಕ್ಕವಯಸ್ಸಿನ ಪಾತ್ರ ಮಾಡುತ್ತಿದ್ದೇನೆ. ಅವರ ಕಾಲೇಜಿನ ದಿನಗಳು ಮತ್ತು ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕಿಂತ ಮುಂಚಿನ ಪಾತ್ರ ಮಾಡುತ್ತಿರುವುದಾಗಿ ಸೋನಾಲ್ ಮಾಂಟೆರೊ ತಿಳಿಸಿದರು. ಇದನ್ನೂ ಓದಿ:  ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು ಕಳೆದ ಎಂಟು ವರ್ಷಗಳಿಂದ ಸರೋಜಿನಿ ಅವರ ಬಗ್ಗೆ ರೀಸರ್ಚ್​ ಮಾಡುತ್ತಿದ್ದೇನೆ. ಅವರು ಆಗಿನ ಕಾಲಕ್ಕೆ ಸ್ಕಾಲರ್​ಸಿಪ್​ ಪಡೆದು, ಲಂಡನ್​ನಲ್ಲಿ ಓದಿದವರು. ಅವರಿಗೆ ಹಲವು ಭಾಷೆಗಳು ಗೊತ್ತಿತ್ತು. ಭಾರತದ ಪ್ರತಿನಿಧಿಯಾಗಿ ಅವರು ಹಲವು ದೇಶಗಳಿಗೆ ಹೋಗಿದ್ದರು. ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. 50 ಡಿಗ್ರಿ ಬಿಸಿಲಿನಲ್ಲೂ ಮೂರು ದಿನಗಳ ಕಾಲ ನೀರು ಕುಡಿಯದೇ ಹೋರಾಟ ಮಾಡಿದರು. ಅವರ ಈ ಹೋರಾಟ ಎಲ್ಲರಿಗೂ ಗೊತ್ತಾಗಬೇಕು ಎಂದು ಈ ಚಿತ್ರ ಮಾಡುತ್ತಿದ್ದೇವೆ ಎಂದು ಕಥೆಗಾರ ಧೀರಜ್ ಮಿಶ್ರ ಹೇಳಿದರು. ಇದನ್ನೂ ಓದಿ: ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ? ಇಲ್ಲಿ ಸರೋಜಿನಿ ಅವರ ಗೊತ್ತಿಲ್ಲದ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇವೆ. ಆಕೆ ಹೇಗೆ ಸ್ವಾತಂತ್ರ್ಯ ಹೋರಾಟಗಾರ್ತಿಯಾದರು, ಇಂಡಿಯನ್​ ನ್ಯಾಷನಲ್​ ಕಾಂಗ್ರೆಸ್​ನ ಮೊದಲ ಅಧ್ಯಕ್ಷೆ ಹೇಗಾದರೂ ಮುಂತಾದ ಹಲವು ವಿಷಯಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ.  ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ಸಂಗೀತ ನಿರ್ದೇಶನವನ್ನೂ ಮಾಡುತ್ತಿದ್ದೇನೆ. ಇದೊಂದು ಬಹಳ ಸವಾಲಿನ ಕೆಲಸ. 1890ರ ಕಾಲಘಟ್ಟದಲ್ಲಿನ ಸಂಗೀತವನ್ನು ಕೇಳಿಸಬೇಕು. ಹೊಸ ಸಂಗೀತ ಎಂದನಿಸಬಾರದು.  ತಾರಾಗಣ ಇನ್ನೂ ಪೂರ್ತಿಯಾಗಿಲ್ಲ. ಜರೀನಾ ವಹಾಬ್​ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 1878ರಿಂದ 1949ರ ಕಾಲಘಟ್ಟದಲ್ಲಿ ಈ ಚಿತ್ರ ನಡೆಯುತ್ತದೆ. ಬೆಂಗಳೂರು, ಮುಂಬೈ, ಉತ್ತರ ಪ್ರದೇಶದಲ್ಲಿ 50 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಕನ್ನಡ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿ, ತೆಲುಗು ಮತ್ತು ತಮಿಳಿಗೆ ಡಬ್ಬಿಂಗ್​ ಆಗಲಿದೆ. ಸರೋಜಿನಿ ನಾಯ್ಡು ಅವರ ಕುಟುಂಬದ ಎನ್​ ಓ ಸಿ ಸಿಕ್ಕಿದೆ. ಗೋಪಾಲಕೃಷ್ಣ ಗೋಖಲೆ ಅವರ ಪಾತ್ರವನ್ನು ರಂಗಾಯಣ ರಘು ಅವರಿಂದ ಮಾಡಿಸಬೇಕೆಂಬ ಆಸೆ ಇದೆ. ಜೂನ್​ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ವಿನಯ್ ಚಂದ್ರ ಚಿತ್ರದ ಬಗ್ಗೆ ವಿವರಣೆ ನೀಡಿದರು.Sign in to your account
Username or Email Address


Password

 Remember Me


