ಬೀದರ್: ಐಪಿಎಲ್ ಬುಕ್ಕಿಗಳ ಮೇಲೆ ಬೀದರ್ ಪೊಲೀಸರು ದಾಳಿ ಮಾಡಿ ಒಬ್ಬ ಐಪಿಎಲ್ ಬುಕ್ಕಿಯನ್ನು ಬಂಧಿಸಿರುವ ಘಟನೆ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಬಸವನಗರದಲ್ಲಿ ನಡೆದಿದೆ.ದಾಳಿ ಮಾಡಿದ ವೇಳೆ 8 ಮೊಬೈಲ್, 1 ಲ್ಯಾಪ್‍ಟಾಪ್ ಹಾಗೂ 1,05,500 ರೂ. ನಗದು ಹಣವನ್ನು ಹುಮ್ನಾಬಾದ್ ಪೊಲೀಸರು ಜಪ್ತಿ ಮಾಡಿದ್ದಾರೆ. ಪರಮೇಶ್ವರ್ ಅಲಿಯಾಸ್ ಪಮ್ಮಿ ಎಂಬ ಐಪಿಎಲ್ ಬುಕ್ಕಿಯನ್ನು ಬಂಧಿಸಿ ಹುಮ್ನಾಬಾದ್ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಪ್ರಶಾಂತ್ ಸಂಬರಗಿ ಸಾರಥ್ಯದಲ್ಲಿ ಸಿನಿಮಾವಾಗ್ತಿದೆ ‘ಆಗಸ್ಟ್ 15’ರ ಸ್ಟೋರಿಐಪಿಎಲ್ ಪಂದ್ಯಗಳಿಗೆ ಹಣ ಕಟ್ಟಿಸಿಕೊಂಡು ಮಹಾರಾಷ್ಟ್ರದ ಲಾತೂರಿನ ಪ್ರಮುಖ ಬುಕ್ಕಿಗೆ ಹಣ ನೀಡುತ್ತಿದ್ದನು. ಪರಮೇಶ್ವರ್ ಬಗ್ಗೆ ಖಚಿತ ಮಾಹಿತಿ ಪಡೆದ ಹುಮ್ನಾಬಾದ್ ಪೊಲೀಸರು ದಾಳಿ ಮಾಡಿದ್ದಾರೆ. ಎಸ್ಪಿ ಕಿಶೋರ್ ಬಾಬು ಮಾರ್ಗದರ್ಶನದಲ್ಲಿ ಹುಮ್ನಾಬಾದ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನೂ ಓದಿ: ಟಿಪ್ಪು ಇತಿಹಾಸ ತಾಲಿಬಾನ್‌, ಐಸಿಸ್‌ ಮತಾಂಧರಷ್ಟೇ ಘೋರ: ಬಿಜೆಪಿ ವಾಗ್ದಾಳಿಈ ಕುರಿತು ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


