ಬೆಂಗಳೂರು: ಹಲಾಲ್ ಮಾಡಿದ್ದ ಹಣ ಭಯೋತ್ಪಾದನೆ ಮಾಡುವವರಿಗೆ ಹೋಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಭಯೋತ್ಪಾದಕರ ಚಟುವಟಿಕೆಗೆ ಈ ಹಲಾಲ್ ಹಣ ಹೋಗುತ್ತದೆ. ಹಲಾಲ್ ನಮ್ಮ ಆಹಾರವಲ್ಲ. ಜೊತೆಗೆ ಹಲಾಲ್ ನಡೆಸಲು ಸರ್ಕಾರಿ ಸರ್ಟಿಫಿಕೇಟ್ ಇಲ್ಲ ಎಂದು ಕಿಡಿಕಾರಿದರು.ಹಲಾಲ್ ಎನ್ನುವುದು ದೇಶಕ್ಕೆ ಮಾರಕವಾಗಿದೆ. ಇದು ಮುಸ್ಲಿಂ ಸಂಸ್ಕೃತಿಯಾಗಿದೆ. ಇದನ್ನು 15 ವರ್ಷಗಳಿಂದ ನಮ್ಮ ಮೇಲೆ ಹೇರಿಕೆ ಮಾಡಿಕೊಂಡು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಲಾಲ್ ಬಾಯ್ಕಾಟ್ ವಿಚಾರವಾಗಿ ನಾವು ಎರಡು ವರ್ಷ ಹಿಂದೆಯೇ ಈ ಅಭಿಯಾನದ ಆರಂಭ ಮಾಡಿದ್ದೇವೆ. ಹಲಾಲ್ ಎಲ್ಲಿ ಹೋಗುತ್ತದೆ ಎನ್ನುವುದರ ಕುರಿತು ಜಾಗೃತಿ ಕೆಲಸ ಮಾಡುತ್ತಿದ್ದೇವೆ. ಒಬ್ಬ ಮುಲ್ಲಾ ಹಲಾಲ್ ಮಾಡಿದರೆ ಮೆಕ್ಕಾ ಕಡೆ ಮುಖ ಮಾಡಿ ಕೋಳಿ ಕತ್ತರಿಸುತ್ತಾನೆ ಎಂದರು. ಇದನ್ನೂ ಓದಿ: ಹಲಾಲ್ ಕಟ್, ಜಟ್ಕಾ ಕಟ್ ಎಂದರೇನು?300 ಹಲಾಲ್ ಸರ್ಟಿಫಿಕೇಟ್ ಇರುವ ಕಂಪನಿಗಳಿವೆ. ಇವೆಲ್ಲ ಕಾನೂನು ಬಾಹಿರ ಸರ್ಟಿಫಿಕೇಟ್‍ಗಳಾಗಿವೆ. ಅನೇಕ ಮುಸ್ಲಿಂ ಯುವಕರಿಗೆ ಇದೊಂದು ಉದ್ಯಮವಾಗಿದೆ. ಅವರ ದೇವರಿಗೆ ಪ್ರಾರ್ಥನೆ ಮಾಡಿ ಆಮೇಲೆ ಹಿಂದೂಗಳಿಗೆ ಅರ್ಪಣೆ ಮಾಡುತ್ತಾರೆ. ಇದು ಒಳ್ಳೆದಲ್ಲ. ಹಿಂದೂ ಜಟ್ಕಾಮೀಟ್ ಆರಂಭ ಆಗಬೇಕು. ಗ್ರಾಹಕರ ಹಕ್ಕುಗಳ ಕುರಿತು ಮುಂದಿನ ಮೂರು ತಿಂಗಳ ಒಳಗೆ ಅಭಿಯಾನ ಆಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಹಲಾಲ್ ಮಾಂಸ ಎಂದರೇನು? ಹಲಾಲ್ ಕಟ್ ಏನು?Sign in to your account
Username or Email Address


Password

 Remember Me


